ಬೆಂಗಳೂರು: ಇನ್ನೋವ ಕಾರು ಚಾಲಕನೊಬ್ಬ ಅಜಾಗರೂಕತೆ, ಅತಿವೇಗವಾಗಿ ಕಾರು ಓಡಿಸಿದ ಪರಿಣಾಮ, ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಸರಣಿ ಅಪಘಾತ ಉಂಟಾಗಿದೆ. ಅಲ್ಲದೇ ಅಪಘಾತದ ನಂತ್ರ ಟ್ರಾಫಿಕ್ ಜಾಮ್ ಕೂಡ ಉಂಟಾಗಿರೋದಾಗಿ ತಿಳಿದು ಬಂದಿದೆ.
ಇನ್ನೋವ ಕಾರೊಂದು ಗೂಡ್ಸ್ ಆಟೋ ಹಾಗೂ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ, ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಬೊಮ್ಮಸಂದ್ರ ಸರ್ವೀಸ್ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದೆ.
ಬೆಂಗಳೂರಿನಿಂದ ಚಂದಾಪುರ ಕಡೆಗೆ ತೆರಳುತ್ತಿದ್ದಂತ ಇನ್ನೋವ ಕಾರು ಚಾಲಕ ಅಜಾಗರೂಕತೆ, ಅತೀ ವೇಗದ ಚಾಲನೆಯಿಂದಲೇ ಈ ಅಪಘಾತ ನಡೆದಿರೋದಾಗಿ ತಿಳಿದು ಬಂದಿದೆ. ಈ ಅಪಘಾತದಿಂದ ಹೆದ್ದಾರಿಯಲ್ಲಿನ ಬ್ಯಾರಿಕೇಡ್ ಮುರಿದು ಬಿದ್ದ ಪರಿಣಾಮ, ವಾಹನಗಳು ಜಖಂ ಗೊಂಡಿದೋರಾಗಿ ಹೇಳಲಾಗುತ್ತಿದೆ.
ಬೊಮ್ಮಸಂದ್ರ ಬಳಿಯ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದಂತ ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿಲ ಹೊಡೆತಕ್ಕೆ ಬೆಂದ ‘ಕರುನಾಡಿಗೆ’ ಮತ್ತೊಂದು ಶಾಕ್: ಮೇ.2ರವರೆಗೆ ಕಾಡಲಿದೆ ‘ಬಿಸಿಗಾಳಿ’