ಬೆಂಗಳೂರು : ಸಣ್ಣ ವ್ಯಾಪಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನೋಟಿಸ್ ವಿರೋಧಿಸಿ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ಪ್ರತಿ ಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಮತ್ತು ಗುರುವಾರ ಬೇಕರಿ ಹಾಗೂ ಕಾಂಡಿಮೆಂಟ್ ಸೇರಿದಂತೆ ವಿವಿಧೆಡೆ ಹಾಲು, ಕಾಫಿ-ಚಹಾ ಮತ್ತು ಹಾಲಿನ ಇತರ ಉತ್ಪನ್ನಗಳ ಮಾರಾಟದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ತೆರಿಗೆ ಯೋಜನೆಯಡಿ ಶೇ.1ರಷ್ಟು ತೆರಿಗೆ ಕಟ್ಟಿಸಿ ಕೊಂಡು ಪ್ರಕರಣ ಇತ್ಯರ್ಥಪಡಿ ಸಬೇಕು. ಇಲ್ಲದಿದ್ದರೆ ಯುಪಿಐ ಬಳಕೆ ನಿಲ್ಲಿಸಬೇಕಾಗುತ್ತದೆ ಎಂದು ರಾಜ್ಯ ಬೇಕರಿ, ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟ ಹೇಳಿದೆ.
ವಾಣಿಜ್ಯ ತೆರಿಗೆ ನೋಟಿಸ್ ಗೆ ಬೆಂಗಳೂರಿನ ಕೆರಳಿದ ವರ್ತಕರು, ಸರಕಾರದ ವಿರುದ್ಧ ಹೋರಾಟಕ್ಕೆ ವ್ಯಾಪಾರಿಗಳು ಇದೀಗ ಸಿದ್ಧತೆ ಮಾಡಿಕೊಂಡಿದ್ದಾರೆ.ಜುಲೈ 25 ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಬೆಂಗಳೂರಲ್ಲಿ ಆನ್ಲೈನ್ ಪೇಮೆಂಟ್ ವಿರುದ್ಧ ವ್ಯಾಪಾರಿಗಳು ಇದೀಗ ಸಮರ ಸಾರಿದ್ದು ಫೋನ್ ಪೇ ಮತ್ತು ಗೂಗಲ್ ಪೇ ಯಾವುದು ಬೇಡ ಓನ್ಲಿ ಕ್ಯಾಶ್ ತೆಗೆದುಕೊಂಡು ಬನ್ನಿ, ಡಿಜಿಟಲ್ ವಹಿವಾಟು ಬೇಡ ಅಂತ ವ್ಯಾಪಾರಿಗಳು ಇದೀಗ ಗ್ರಾಹಕರಿಗೆ ತಿಳಿಸಿದ್ದಾರೆ. ನಗದು ವ್ಯವಹಾರದ ವರ್ತಕರು ಮುಖ ಮಾಡುತ್ತಿದ್ದಾರೆ. ಬೇಕರಿ ಟೀ ಶಾಪ್ ಗಳಲ್ಲಿ ಕ್ಯೂ ಆರ್ ಕೋಡ್ ಮಾಯವಾಗಿದ್ದು, ಕರ್ನಾಟಕ ಕಮರ್ಷಿಯಲ್ ಟ್ಯಾಕ್ಸ್ ನೋಟಿಸ್ ಗೆ ವರ್ತಕರು ಇದೀಗ ಸೆಡ್ಡು ಹೊಡೆದಿದ್ದಾರೆ. ಆನ್ಲೈನ್ ವ್ಯವಹಾರಕ್ಕೆ ವ್ಯಾಪಾರಿಗಳು ಗುಡ್ ಬೈ ಸಹ ಹೇಳಿದ್ದಾರೆ.