ಬೆಂಗಳೂರು: ಕೇಂದ್ರ ಮೋಟಾರು ವಾಹನ ನಿಯಮಗಳು 1989ರ ನಿಯಮ 125(ಹೆಚ್) ರಲ್ಲಿನ ಅವಕಾಶಗಳನ್ನು ಬಳಸಿಕೊಂಡು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯ, ನವದೆಹಲಿ ರವರು ಹೊರಡಿಸಿರುವ ಅಧಿಸೂಚನೆ ಹಾಗೂ ಮಾರ್ಗಸೂಚಿಗಳ ಮೇರೆಗೆ, ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಿರ್ಭಯ ಯೋಜನೆಯಡಿ ಸಾರ್ವಜನಿಕ ಸೇವಾ ವಾಹನಗಳು ಅಂದರೆ ಮಜಲು ವಾಹನ, ಶಾಲಾ ವಾಹನ, ಖಾಸಗಿ ಸೇವಾ ವಾಹನ, ಮಾಕ್ಸಿ ಕ್ಯಾಬ್, ಒಪ್ಪಂದ ವಾಹನ, ಮೋಟಾರ್ ಕ್ಯಾಬ್ ಹಾಗೂ ರಾಷ್ಟ್ರೀಯ ರಹದಾರಿ ಹೊಂದಿದ ಸರಕು Vehicle Location Tracking Device & Emergency Panic Button ಆಳವಡಿಸುವ ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ.
ವಾಹನವು ಹಾದುಹೋಗುವ ಮಾರ್ಗವನ್ನು ಪರಿಶೀಲಿಸಿ ನಕ್ಷೆಯಲ್ಲಿ ವಾಹನದ ಸ್ಥಳವನ್ನು ಗುರುತಿಸಲು ಸಹಾಯಕವಾಗುತ್ತದೆ. ವರ್ಚುವಲ್ ಜಿಯೋ-ಫೆನ್ಸಿಂಗ್ ಮೂಲಕ ಮಜಲು ವಾಹನಗಳು ಹಾದು ಹೋಗುವ ಅನಧಿಕೃತ ಮಾರ್ಗವನ್ನು ಗುರುತಿಸಲು ಸಾಧ್ಯವಾಗುತ್ತದೆ. ಅಪಘಾತ ಸ್ಥಳ ಪತ್ತೆ ಮಾಡಲು ಸಹಾಯಕವಾಗುತ್ತದೆ.
ನಿಖರವಾದ ಸ್ಥಳ ಮತ್ತು ವೇಗದ ವಿವರಗಳನ್ನು ಪತ್ತೆಹಚ್ಚಲು ಸಹಾಯಕವಾಗುತ್ತದೆ. ಮಹಿಳೆಯರು ಮತ್ತು ಮಕ್ಕಳು ಅಥವಾ ಇತರೆ ಪ್ರಯಾಣಿಕರು ತುರ್ತು ಸಂದರ್ಭಗಳಲ್ಲಿ ಪ್ಯಾನಿಕ್ ಬಟನ್ ಅನ್ನು ಉಪಯೋಗಿಸಿದಲ್ಲಿ ಅದರ ಸಂಕೇತವು ನಿಯಂತ್ರಣ ಕೊಠಡಿಗೆ ರವಾನೆಯಾಗುತ್ತದೆ. ಸದರಿ ಸಂಕೇತವನ್ನು ಪೆÇಲೀಸ್ ಇಲಾಖೆಯ ನಿಯಂತ್ರಣ ಕೊಠಡಿಗೆ ಕೂಡಲೇ ರವಾನಿಸಲಾಗುತ್ತದೆ. ಈ ಮೂಲಕ ಸಂಭವನೀಯ ಅವಘಡಗಳನ್ನು ತಪ್ಪಿಸಲು ಸಹಾಯಕ ವಾಗುತ್ತದೆ. ವಾಹನದ ವಿವರಗಳನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ವಾಹನ ಮಾಲೀಕರಿಗೆ ಅನುಕೂಲ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ರೂ.2035.90 ಲಕ್ಷಗಳ ವೆಚ್ಚದಲ್ಲಿ ಕೈಗೊಳ್ಳಲು ಮತ್ತು ಅದರಲ್ಲಿ ಅನುಕ್ರಮವಾಗಿ 60:40ರ ಅನುಪಾತದಲ್ಲಿ ರಾಜ್ಯ ಸರ್ಕಾರದ ಪಾಲು ರೂ.814.36 ಲಕ್ಷಗಳೆಂದು ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ವತಿಯಿಂದ ರಾಜ್ಯ ಸರ್ಕಾರಕ್ಕೆ, ಮೊದಲ ಹಂತದಲ್ಲಿ ಒಟ್ಟು ರೂ.5.792 ಕೋಟಿಗಳನ್ನು ಒದಗಿಸಲಾಗಿರುತ್ತದೆ.
ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ವಾಹನ ಪ್ರಮಾಣೀಕರಣ ಕೇಂದ್ರಗಳಾದ CIRT, ARAI ಹಾಗೂ 1-CAT ಸಂಸ್ಥೆಗಳಿಂದ ಅಂಗೀಕೃತಗೊಂಡ Vehicle Location Tracking (VIT) Device ತಯಾರಕರುಗಳನ್ನು ಇ-ಪೆÇ್ರಕ್ಯೂಮೆಂಟ್ ಮೂಲಕ ಟೆಂಡರ್ ಕರೆದು ಆಯ್ಕೆ ಮಾಡಲಾಗಿದೆ.
Vehicle Location Tracking (VLT) Devices with Emergency Panic Buttons :
12 ಕಂಪನಿಗಳನ್ನು ಅರ್ಹ ಎಂದು ನಿರ್ಣಯಿಸಿ ಕಾರ್ಯಾದೇಶ ನೀಡಲಾಗಿದೆ. ವಾಹನ ಮಾಲೀಕರುಗಳಿಗೆ ಅರ್ಹತಾ ಪತ್ರ ನವೀಕರಣ ಸಮಯದಲ್ಲಿ ವಾಹನಗಳಿಗೆ ವಿಎಲ್‍ಟಿ.ಡಿ ಸಾಧನ ಗಳನ್ನು ಅಳವಡಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ. ದಿನಾಂಕ: 10-09-2024 ರವರೆಗೆ ಸದರಿ ಸಾಧನಗಳನ್ನು ಅಳವಡಿಸಿಕೊಳ್ಳಲು ಕಾಲಾವಕಾಶ ನೀಡಲಾಗಿದ್ದು, ತದನಂತರ ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸಾರ್ವಜನಿಕ ಸೇವಾ ವಾಹನಗಳ ಮಾಲೀಕರು ಕ್ರಮ ಕೈಗೊಳ್ಳತಕ್ಕದ್ದು.
ರಾಜ್ಯ ಸರ್ಕಾರವು ವಿಎಲ್‍ಟಿ.ಡಿ ಸಾಧನಗಳ ದರಗಳನ್ನು ನಿಗದಿಪಡಿಸುವುದಿಲ್ಲ. ಬದಲಾಗಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಆಯ್ಕೆಯಾದ ಸಂಸ್ಥೆಗಳು ಸ್ಪರ್ಧಾತ್ಮಕ ದರ ನಿಗಧಿಗೊಳಿಸುತ್ತವೆ. ಹಾಗಾಗಿ, ವಾಹನ ಮಾಲೀಕರು ಅವರು ಇಚ್ಛಿಸುವ ಸಂಸ್ಥೆಯ ಮೂಲಕ ಕನಿಷ್ಠ ದರವನ್ನು ಗಮನಿಸಿಕೊಂಡು ಸಾಧನ ಖರೀದಿಸಿ ಅಳವಡಿಸಿಕೊಳ್ಳಬಹುದಾಗಿದೆ.
ಯೋಜನೆಯಿಂದ ಕರ್ನಾಟಕ ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಬೃಹತ್ ಮಟ್ಟದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಸಾರ್ವಜನಿಕ ಪ್ರಯಾಣಿಕರು ಅದರಲ್ಲಿಯೂ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಸದರಿ ಯೋಜನೆಯ ಭಾಗವಾಗಿ ಇಲಾಖೆಯು Command and Control Centre ಅನ್ನು ಸಾರಿಗೆ ಆಯುಕ್ತರ ಕಛೇರಿಯಲ್ಲಿ ಸ್ಥಾಪಿಸಿದ್ದು, ಈ ಕೇಂದ್ರವು ದಿನಾಂಕ: 19-06-2024 ರಂದು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರಿಂದ ಉದ್ಘಾಟನೆಗೊಂಡು, ಲೋಕಾರ್ಪಣೆಯಾಗಿ 24×7 ನಿರಂತರವಾಗಿ ಕಾರ್ಯ ನಿರ್ವಹಿಸುತ್ತಲಿದೆ
ಸಾರ್ವಜನಿಕರು ಅದರಲ್ಲೂ ಮಹಿಳಾ ಮತ್ತು ಮಕ್ಕಳ ಹಿತದೃಷ್ಟಿಯಿಂದ ಸಾರಿಗೆ ಇಲಾಖೆಯ ವತಿಯಿಂದ ನೀಡಲಾಗಿದೆ ಎಂದು ಬೆಂಗಳೂರು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.