ರಾಮನಗರ: ಜಿಲ್ಲೆಯ ಬಿಡದಿ ಬಳಿಯಿರುವಂತ ಟೊಯೋಟೋ ಕಂಪನಿಯ ಟಾಯ್ಲೆಟ್ಟಿನಲ್ಲಿ ಪಾಕ್ ಪರ ಬರವನ್ನು, ಕನ್ನಡಿಗರ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿ ಕಿಡಿಗೇಡಿಗಳು ಬರೆದಿರುವ ವಿಚಾರ ತಿಳಿದು ಬಂದಿದೆ.
ರಾಮನಗರದ ಬಿಡದಿಯಲ್ಲಿರುವ ಟೊಯೋಟೋ ಕಂಪನಿಯ ಶೌಚಾಲಯದಲ್ಲಿ ಪಾಕಿಸ್ತಾನ ಜೈ, ಕನ್ನಡಿಗರು ಸೂ* ಮಕ್ಕಳು ಎಂಬುದಾಗಿ ಕಿಡಿಗೇಡಿಗಳು ಅವಹೇಳನಕಾರಿ ಬರಹವನ್ನು ಬರೆದಿದ್ದಾರೆ. ಇದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೂ ಕಾರಣವಾಗಿ, ಕಂಪನಿಯ ಬಳಿಯಲ್ಲಿ ಪ್ರತಿಭಟನೆಗೂ ಕಾರಣವಾಯ್ತು.
ಈ ರೀತಿಯ ಅವಹೇಳನಕಾರಿ ಬರಹ ಬರೆದಂತ ಸಿಬ್ಬಂದಿಗೆ ಟೊಯೋಟೋ ಕಾನೂನು ಕ್ರಮ ಜರುಗಿಸುವುದಾಗಿಯೂ ಸುತ್ತೋಲೆ ಹೊರಡಿಸಿ ಎಚ್ಚರಿಕೆ ನೀಡಿದೆ.
ಅಂದಹಾಗೇ ಟೊಯೋಟೋ ಕಂಪನಿಯ ಶೌಚಾಲಯದ ಗೋಡೆಯ ಮೇಲೆ ಪಾಕಿಸ್ತಾನ ಜೈ, ಕನ್ನಡಗಿರು ಸೂ* ಮಕ್ಕಳು ಎಂಬುದಾಗಿ ಬರೆಯಲಾಗಿದೆ. ಈ ರೀತಿಯಾಗಿ ಬರೆದಿದ್ದು ಯಾರು ಎನ್ನುವುದು ಈವರೆಗೆ ತಿಳಿದು ಬಂದಿಲ್ಲ.
ಈ ರೀತಿಯಾಗಿ ಬರೆದಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ದೇಶದ್ರೋಹ ಅಪರಾಧದ ಅಡಿಯಲ್ಲಿ ಅವರ ವಿರುದ್ಧ ಕೇಸ್ ದಾಖಲಿಸಬೇಕು ಅಂತ ಕನ್ನಡಪರ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.
BIG NEWS: ‘ನೀರು, ಊಟ’ದ ವಿಚಾರಕ್ಕೆ ಜಗಳ: ಇಂದು ನಡೆಯಬೇಕಿದ್ದ ‘ಮದುವೆ ಕ್ಯಾನ್ಸಲ್’
SHOCKING : ರಾಜ್ಯದಲ್ಲಿ ಅಮಾನವೀಯ ಘಟನೆ : ಕಲ್ಬುರ್ಗಿಯಲ್ಲಿ ‘ಮಂಗಳಮುಖಿಯನ್ನು’ ಬೆತ್ತಲೆಗೊಳಿಸಿ, ತಲೆ ಬೋಳಿಸಿ ಹಲ್ಲೆ!