ಬೆಂಗಳೂರು: ರಾಜ್ಯ ಸರ್ಕಾರದಿಂದ ಬಳ್ಳಾರಿಯ ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ಭೇಟಿ ನೀಡುವಂತ ಪ್ರವಾಸಿಗರಿಗೆ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿದೆ. ಕೆಲ ಡ್ರೆಸ್ ಗಳನ್ನು ಧರಿಸಿ ತೆರಳಿದ್ರೇ, ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಈ ಬಗ್ಗೆ ವಿಜಯನಗರ ಜಿಲ್ಲಾಧಿಕಾರಿ ಎಂ. ಎಸ್ ದಿವಾಕರ್ ಮಾಹಿತಿ ಹಂಚಿಕೊಂಡಿದ್ದು, ಮುಜುರಾಯಿ ಇಲಾಖೆಗೆ ಒಳಪಟ್ಟ ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ಬಂದಿದೆ. ಬರ್ಮುಡ ಚಡ್ಡಿ, ಜೀನ್ಸ್ ಧರಿಸಿ ಬಂದವರು ಇನ್ನು ಮುಂದೆ ಪಂಚೆ ತೊಡುವುದು ಕಡ್ಡಾಯ ಎಂಬುದಾಗಿ ತಿಳಿಸಿದ್ದಾರೆ.
ಮಹಿಳೆಯರು ತುಂಡುಡುಗೆಯಲ್ಲಿ ಬಂದರೆ ಅದರ ಮೇಲೆ ಶಲ್ಯ ತೊಡಬೇಕಾಗಿದೆ. ಪ್ರವಾಸಕ್ಕೆ ಬರುವವರು ದೇವಸ್ಥಾನಕ್ಕೆ ಭೇಟಿ ನೀಡುವಾಗ ಭಕ್ತಿ ಭಾವನೆ ಉದ್ದೀಪನೆಯ ಉಡುಪು ಧರಿಸಿ ದೇವರ ದರ್ಶನ ಪಡೆಯಬೇಕು. ಈ ಸದುದ್ದೇಶದಿಂದ ಈ ವಿಶೇಷ ಕ್ರಮ ವಹಿಸಿದ್ದೇವೆ ಎಂದು ಹೇಳಿದ್ದಾರೆ.
ಸೋ ಹಂಪಿ ವಿರೂಪಾಕ್ಷ ದೇವಾಲಯಕ್ಕೆ ಭೇಟಿ ನೀಡುವಂತ ಪ್ರವಾಸಿಗರು ಇನ್ಮುಂದೆ ಬರ್ಮುಡ ಚಡ್ಡಿ, ಜೀನ್ಸ್ ಧರಿಸಿ ಹೋದ್ರೆ, ಮಹಿಳೆಯರು ತುಂಡುಡುಗೆಯಲ್ಲಿ ತೆರಳಿದ್ರೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
BREAKING: ಲೋಕಸಭಾ ಚುನಾವಣೆ: ರಾಜ್ಯದ 28 ಕ್ಷೇತ್ರಗಳಿಗೆ ‘ಬಿಜೆಪಿ ಉಸ್ತುವಾರಿ’ಗಳು ನೇಮಕ, ಇಲ್ಲಿದೆ ಸಂಪೂರ್ಣ ಲೀಸ್ಟ್
BREAKING : ಭೂಮಿ ಹಗರಣ ಪ್ರಕರಣ : ಬಿಹಾರ ಮಾಜಿ ಸಿಎಂ ಲಾಲು ಪತ್ನಿ ರಾಬ್ರಿ ದೇವಿ, ಪುತ್ರಿಯರಿಗೆ ‘ಕೋರ್ಟ್ ಸಮನ್ಸ್’