Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಚಿತ್ರದುರ್ಗದಲ್ಲಿ ಮೇ.16 ರಂದು ನೇರ ನೇಮಕಾತಿ ಸಂದರ್ಶನ

13/05/2025 9:18 AM

BIG NEWS : Indigo, Air India ಪ್ರಯಾಣಿಕರೇ ಗಮನಿಸಿ : ಇಂದು ಈ ನಗರಗಳಿಗೆ ವಿಮಾನ ಸೇವೆ ರದ್ದು | Indigo Air India Flight Cancel

13/05/2025 9:14 AM

BREAKING: ಅಮೃತಸರದಲ್ಲಿ ಮದ್ಯ ಸೇವಿಸಿ 12 ಮಂದಿ ಸಾವು, ಐವರ ಸ್ಥಿತಿ ಗಂಭೀರ

13/05/2025 9:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ನಾಳೆಯ ‘KMF ನೌಕರ’ರ ಮುಷ್ಕರ ಮುಂದೂಡಿಕೆ: ‘ನಂದಿನಿ ಉತ್ಪನ್ನ’ಗಳ ಮಾರಾಟದಲ್ಲಿ ವ್ಯತ್ಯಯವಿಲ್ಲ
KARNATAKA

BREAKING: ನಾಳೆಯ ‘KMF ನೌಕರ’ರ ಮುಷ್ಕರ ಮುಂದೂಡಿಕೆ: ‘ನಂದಿನಿ ಉತ್ಪನ್ನ’ಗಳ ಮಾರಾಟದಲ್ಲಿ ವ್ಯತ್ಯಯವಿಲ್ಲ

By kannadanewsnow0931/01/2025 4:47 PM

ಬೆಂಗಳೂರು: 7ನೇ ವೇತನ ಆಯೋಗದ ವರದಿಯಂತೆ ವೇತನ ಪರಿಷ್ಕರಣೆ, ಸೌಲಭ್ಯಗಳು ಯಥಾವತ್ ಜಾರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ಹಾಲು ಮಹಾಮಂಡಳ(KMF)ದ ಚಟುವಟಿಕೆ ಗಳು ಫೆ.1ರಿಂದ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಸರ್ಕಾರದ ಜೊತೆಗಿನ ಮಾತುಕತೆ ಸಕ್ಸಸ್ ಆಗಿದ್ದು, ಕೆಎಂಎಫ್ ನೌಕರರ ಮುಷ್ಕರ ವಾಪಾಸ್ ಪಡೆಯಲಾಗಿದೆ. ಹೀಗಾಗಿ ನಾಳೆಯಿಂದ ಎಂದಿನಂತೆ ನಂದಿನಿ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗಲಿವೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೆ ಎಂ ಎಫ್ ಅಧಿಕಾರಿಗಳ ಸಂಘ ಮಾಹಿತಿ ನೀಡಿದ್ದು, ಕರ್ನಾಟಕ ಸರ್ಕಾರ ಹಾಲು ಮಹಾಮಂಡಳ ಹಾಗೂ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳು, ಹೈನುಗಾರ ರೈತರಿಂದ ಪ್ರತಿನಿತ್ಯ ಹಾಲನ್ನು ಖರೀದಿಸಿ ನಂದಿನಿ ಬ್ರಾಂಡ್ ಹೆಸರಿನಲ್ಲಿ ವಿವಿಧ ಮಾದರಿಯ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಸುಮಾರು 50 ವರ್ಷಗಳಿಂದಲೂ ನೀಡುತ್ತಾ ಬರಲಾಗುತ್ತಿದೆ ಎಂದಿದೆ.

ಕರ್ನಾಟಕದ ಹೆಮ್ಮೆಯ ನಂದಿನಿ ಹಾಲು ರಾಜ್ಯಾದ್ಯಂತ ಹೆಸರುಗಳಿಸಿ ಪ್ರಚಲಿತದಲ್ಲಿದ್ದು, ಸುಮಾರು 150 ಕ್ಕೂ ಹೆಚ್ಚು ವಿವಿಧ ಮಾದರಿಯ ಹಾಲನ ಉತ್ಪನ್ನಗಳನ್ನು ಗ್ರಾಹಕರಿಗೆ ಪ್ರತಿನಿತ್ಯ ಪೂರೈಸಲಾಗುತ್ತಿದೆ. ಕಹಾಮ ಮಹಾದಂಡಳದಲ್ಲಿ ಸುಮಾರು 1300ಕ್ಕೂ ಹೆಚ್ಚು ಅಧಿಕಾರಿ/ಸಿಬ್ಬಂದಿಗಳು ಹಾಗೂ 16 ಜಿಲ್ಲಾ ಹಾಲು ಒಕ್ಕೂಟಗಳು ಒಳಗೊಂಡು ಸುಮಾರು 6000 ಅಧಿಕಾರಿ/ನೌಕರರು ಕೆಲಸ ನಿರ್ವಹಿಸುತ್ತಾ ಬರುತ್ತಿದ್ದು, ಕರ್ನಾಟಕ ರಾಜ್ಯ ಸರ್ಕಾರವು ಎಲ್ಲಾ ನೌಕರರಿಗೂ 7 ನೇ ವೇತನವನ್ನು ಜಾರಿಗೊಳಿಸಿದ್ದು, ಅದರಂತೆ ರಾಜ್ಯ ಸರ್ಕಾರಿ ನೌಕರರು ಆಗಸ್ಟ್-2024 ರಿಂದ ಸೌಲಭ್ಯವನ್ನು ಈಗಾಗಲೇ ಪಡೆಯುತ್ತಿದ್ದಾರೆ. ಆದರೆ ಸ್ವಾಯತ್ತ ಸಂಸ್ಥೆಯಾದ ಕೆಎಂಎಫ್ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಗೆ ಮೊದಲ ಹಂತದಲ್ಲಿ 17% ಮಧ್ಯಂತರ ಪರಿಹಾರ ನೀಡಲಾಗುತ್ತಿದ್ದು, ಉಟದ 10.5% ಹಣ ಬಿಡುಗಡೆಗೆ ಮಂಜೂರು ಆದೇಶ ನೀಡುವಂತ ಸಹಕಾರಿ ಇಲಾಖೆಯನ್ನು ಕೋರಲಾಗಿತ್ತು ಎಂದಿದೆ.

ಆದರೆ ಈವರೆಗೆ ಸಹಕಾರ ಇಲಾಖೆ ಮಂಜೂರು ಮಾಡದೇ ಇರುವ ಕಾರಣ ಕಹಾಮ ಆದೇಶ ಸಂಖ್ಯೆ:1794/v-1/2024 ದಿನಾಂಕ: 22.10.2024ರಂತೆ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿ ಹಾಗೂ ಇತರೆ ಭತ್ಯಯ ಸೌಲಭ್ಯಗಳನ್ನು ಕಹಾಮದಲ್ಲಿ ಅಳವಡಿಸಿಕೊಂಡು ಆದೇಶ ಜಾರಿಗೊಳಿಸಿರುವ ಆದೇಶ ಅನುಷ್ಠಾನಕ್ಕೆ ಬಾರದೇ ಇದ್ದ ಹಿನ್ನಲೆಯಲ್ಲಿ ಭಬ್ರದರಿ-2025 ರ ದಿನಾಂಕ 01 ರಿಂದ ಕಹಾಮದ ಅಧಿಕಾರಿ/ನೌಕರರು ಹಾಗೂ ಜಿಲ್ಲಾ ಒಕ್ಕೂಟಗಳ ನೌಕರನ್ನೊಳಗೊಂಡು ಮುಷ್ಕರ ಮಾಡಲು ತಿರ್ಮಾನಿಸಲಾಗಿತ್ತು. ಸಹಕಾರ ಇಲಾಖೆಯಿಂದ ಸಧ್ಯದಲ್ಲಿಯೇ ಮಂಜೂರು ಆದೇಶವನ್ನು ನೀಡುವುದಾಗಿ ಆಶ್ವಾಸನೆ ನೀಡಿರುವ ಹಿನ್ನೆಲೆಯಲ್ಲಿ ಮತ್ತು ಕಹಾಮ ಅಧ್ಯಕ್ಷರು ದಿನಾಂಕ: 03.02.2025ರ ಒಳಗೆ ಸಹಕಾರ ಸಚಿವರ ಜೊತೆ ಚರ್ಚಿಸಿ 7 ನೇ ವೇತನ ಆಯೋಗದ ಆದೇಶವನ್ನು ಕಹಾಮದಲ್ಲಿ ಹೊರಡಿಸುವುದಾಗಿ ತಿಳಿಸಿರುವ ಹಿನ್ನಲೆಯಲ್ಲಿ ರೈತರ ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ತಾತ್ಕಾಅಕವಾಗಿ ಹೋರಾಟವನ್ನು ಮುಂದೂಡಿ ದಿನಾಂಕ:01.02.2025 ರಿಂದ ನಂದಿನಿ ಉತ್ಪನ್ನಗಳ ಸರಬರಾಜಿನಲ್ಲಿ ಹಾಗೂ ಹಾಲು ಖರೀದಿಯಲ್ಲಿ ಯಾವುದೇ ತೊಂದರೆ ಇಲ್ಲದಂತೆ ಎಂದಿನಂತೆ ಸರಬರಾಜು ಇರುತ್ತದೆ ಎಂದು ಮಾದ್ಯಮದ ಗಮನಕ್ಕೆ ತರಲಾಗುತ್ತಿದೆ. ಇದರಿಂದ ಯಾವುದೇ ಗ್ರಾಹಕರು ಅಥವಾ ರೈತರು ಆತಂಕ ಪಡುವ ಅಗತ್ಯವಿರುವುದಿಲ್ಲ ಎಂಬುದಾಗಿ ತಿಳಿಸಿದೆ.

ಫೆಬ್ರವರಿ 2025ರ ಮೊದಲ ವಾರದೊಳಗೆ ಅಂದರೆ ದಿನಾಂಕ: 07.02.2025 ರ ಒಳಗೆ ಆದೇಶ (ಕೆ.ಎಂ.ಎಫ್ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು ಒಳಗೊಂಡಂತೆ) ಜಾರಿಗೊಳಿಸದಿದ್ದಲ್ಲಿ ದಿನಾಂಕ:10.02.2025 ರಂದು ಪುನಃ ಸಂಘದ ಕಾರ್ಯಕಾರಿ ಮಂಡಳಿ ಸಭೆ ಸೇರಿ ಮುಂದಿನ ಮುಷ್ಕರದ ಬಗ್ಗೆ ತೀರ್ಮಾನಿಸಿ ಹೋರಾಟ ಮಾಡಲಾಗುವುದೆಂದು ತಿಳಿಸಲಾಗಿದೆ.

ಕಹಾಮ ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಅಧಿಕಾರಿ/ನೌಕರರ ಸಂಘಗಳ ಬೇಡಿಕೆಗಳು

1. 7 ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಕಹಾಮ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಿಗೆ ಯಥಾವತ್ತಾಗಿ ಪೂರ್ಣ ಜಾರಿಗೆ ತರುವುದು.

2. 1984 ರಲ್ಲಿ ಸರ್ಕಾರ, ಕೆಡಿಡಿಸಿ(ಕೆಎಂಎಫ್), ಎನ್‌ಡಿಡಿಬಿ ಅಧಿಕಾರಿಗಳನ್ನು ಒಳಗೊಂಡ ಸಮಿತಿ(Tri-party) ರಚಿಸಿ ಕಹಾಮದ ಅಧಿಕಾರಿ/ನೌಕರರಿಗೆ ವೇತನಕ್ಕೆ ಸಂಬಂಧಿಸಿ ಆಗಿರುವ ಒಡಂಬಡಿಕೆಯಂತೆ DA, HRA, CCA ಇತ್ಯಾದಿ ಸೇರಿದಂತೆ ಕಾಲಕಾಲಕ್ಕೆ ಸರ್ಕಾರ ಹೊರಡಿಸುವ ಆದೇಶಗಳಂತೆ ಜಾರಿಗೊಳಿಸಬೇಕಿದೆ.

3. ಹಿಂದೆ ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯವು W.P NO 10773/1988 ಮತ್ತು W.P NO 11942/1988 ರಲ್ಲಿ ನೀಡಿರುವ ಆದೇಶದಲ್ಲಿನ ಅನುಬಂಧಗಳಂತೆ, As per prevailing practice the Salary, Pay Scales DA, HRA, CCA and other emoluments should be paid/Increased as per the Government Notification

4. ಕರ್ನಾಟಕ ಸಹಕಾರಿ ಕಾಯ್ದೆ-1959ರ ಪ್ರಕರಣ 28(C) ರಡಿ ವೇತನ ಮತ್ತು ಭತ್ಯೆಗಳನ್ನು ಮಂಜೂರು ಮಾಡುವ ದತ್ತವಾದ ಅಧಿಕಾರ ಆಡಳಿತ ಮಂಡಳಿಗೆ ಇರುತ್ತದೆ. ಡೇರಿ/ಘಟಕವು Industrial Act ನಂತೆ ಕೆಲಸ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರದ ಮಂಡ೪/ನಿಗಮಗಳಿಗಿದ್ದಂತೆ, ವಾರ್ಷಿಕ ಲಾಭ/ನಷ್ಟ ಮಾತ್ರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ಪರಿಗಣಿಸಬೇಕು.

5. ಕಹಾಮ/ಒಕ್ಕೂಟದ ಆಡಳಿತ ಮಂಡಳಿ ಸಭೆಗಳಲ್ಲಿ ಸರ್ಕಾರದ ಪ್ರತಿನಿಧಿಗಳಾದ 1. RCS ಪ್ರತಿನಿದಿ 2. ಪಶು ಸಂಗೋಪನೆ 3, NDDB ಪ್ರತಿನಿಧಿ ಇರುವುದರಿಂದ, ಕಾಲಕಾಲಕ್ಕೆ ಸರ್ಕಾರದಿಂದ ಬಿಡುಗಡೆ ಮಾಡುವ ವೇತನ ಮತ್ತು ಭತ್ಯೆಗಳ ಅನುಮೋದನೆಯ ಅಧಿಕಾರ ಕಹಾಮದ ಆಡಳಿತ ಮಂಡಳಿಗೆ ನೀಡಬೇಕು.
ಅದರಂತೆ ಕಹಾಮ ಸೇರಿದಂತೆ ಜಿಲ್ಲಾ ಹಾಲು ಒಕ್ಕೂಟಗಳಗೂ ಸಹ ಕಹಾಮದಿಂದ ಆದೇಶವಾಗಬೇಕು.

6. ಕಹಾಮ/ಒಕ್ಕೂಟದ ಉನ್ನತ ಹುದ್ದೆಗಳಾದ ವ್ಯ.ನಿ ಹುದ್ದೆಗಳಗೆ ಕಹಾಮದಲ್ಲಿ ಕೆಲಸ ನಿರ್ವಹಿಸಿದ ತಾಂತ್ರಿಕ ಹಿನ್ನೆಲೆಯುಳ್ಳ ಅಥವಾ ಡೇರಿ ಉದ್ದಿಮೆಯಲ್ಲಿ ಅನುಭವವುಳ್ಳ ನಿರ್ದೇಶಕ ಹುದ್ದೆಗಳಿಗೆ ಮಾತ್ರ ಸೀಮಿತ ಮಾಡಬೇಕು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BREAKING: ಉತ್ತರಪ್ರದೇಶದಲ್ಲಿ ಬಸ್-ಟ್ರಕ್ ನಡುವೆ ಭೀಕರ ಅಫಘಾತ: ಕುಂಭಮೇಳದಿಂದ ಹಿಂದಿರುಗುತ್ತಿದ್ದ ಹಲವು ಭಕ್ತರು ಸಾವು

BREAKING : ನಟ ದರ್ಶನ್ ಗೆ ರಿಲೀಫ್ : ಫೆ.10 ರವರೆಗೆ ಮೈಸೂರಿನಲ್ಲಿರಲು ಅನುಮತಿ ನೀಡಿ ಕೋರ್ಟ್ ಆದೇಶ.!

Share. Facebook Twitter LinkedIn WhatsApp Email

Related Posts

JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಚಿತ್ರದುರ್ಗದಲ್ಲಿ ಮೇ.16 ರಂದು ನೇರ ನೇಮಕಾತಿ ಸಂದರ್ಶನ

13/05/2025 9:18 AM1 Min Read

BIG NEWS : ರಾಜ್ಯದಲ್ಲಿ ‘ಬೋರ್ ವೆಲ್’ ಕೊರೆಸುವ ನಿಯಮಗಳಲ್ಲಿ ಮಹತ್ವದ ಬದಲಾವಣೆ : ಈ ರೂಲ್ಸ್ ಪಾಲನೆ ಕಡ್ಡಾಯ.!

13/05/2025 9:05 AM6 Mins Read

BIG NEWS: ರಾಜ್ಯದಲ್ಲಿ 2025- 26 ನೇ ಶೈಕ್ಷಣಿಕ ಸಾಲಿನಿಂದಲೇ `SEP’ ಜಾರಿ : ಸಚಿವ ಡಾ. ಎಂ.ಸಿ. ಸುಧಾಕರ್

13/05/2025 8:54 AM1 Min Read
Recent News

JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಚಿತ್ರದುರ್ಗದಲ್ಲಿ ಮೇ.16 ರಂದು ನೇರ ನೇಮಕಾತಿ ಸಂದರ್ಶನ

13/05/2025 9:18 AM

BIG NEWS : Indigo, Air India ಪ್ರಯಾಣಿಕರೇ ಗಮನಿಸಿ : ಇಂದು ಈ ನಗರಗಳಿಗೆ ವಿಮಾನ ಸೇವೆ ರದ್ದು | Indigo Air India Flight Cancel

13/05/2025 9:14 AM

BREAKING: ಅಮೃತಸರದಲ್ಲಿ ಮದ್ಯ ಸೇವಿಸಿ 12 ಮಂದಿ ಸಾವು, ಐವರ ಸ್ಥಿತಿ ಗಂಭೀರ

13/05/2025 9:11 AM

BREAKING : ಅಮೃತಸರದಲ್ಲಿ ವಿಷಕಾರಿ ಮದ್ಯ ಸೇವಿಸಿ 12 ಮಂದಿ ಸಾವು, ಐವರ ಸ್ಥಿತಿ ಗಂಭೀರ |spurious liquor

13/05/2025 9:10 AM
State News
KARNATAKA

JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಚಿತ್ರದುರ್ಗದಲ್ಲಿ ಮೇ.16 ರಂದು ನೇರ ನೇಮಕಾತಿ ಸಂದರ್ಶನ

By kannadanewsnow5713/05/2025 9:18 AM KARNATAKA 1 Min Read

ಚಿತ್ರದುರ್ಗ : ಚಿತ್ರದುರ್ಗ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದೇ ಮೇ.16ರಂದು ಬೆಳಿಗ್ಗೆ 10 ರಿಂದ 2 ರವರೆಗೆ…

BIG NEWS : ರಾಜ್ಯದಲ್ಲಿ ‘ಬೋರ್ ವೆಲ್’ ಕೊರೆಸುವ ನಿಯಮಗಳಲ್ಲಿ ಮಹತ್ವದ ಬದಲಾವಣೆ : ಈ ರೂಲ್ಸ್ ಪಾಲನೆ ಕಡ್ಡಾಯ.!

13/05/2025 9:05 AM

BIG NEWS: ರಾಜ್ಯದಲ್ಲಿ 2025- 26 ನೇ ಶೈಕ್ಷಣಿಕ ಸಾಲಿನಿಂದಲೇ `SEP’ ಜಾರಿ : ಸಚಿವ ಡಾ. ಎಂ.ಸಿ. ಸುಧಾಕರ್

13/05/2025 8:54 AM

BREAKING : ಪ್ರಧಾನಿ ಮೋದಿ ವಿರುದ್ಧ ಪ್ರಚೋದನಕಾರಿ ವಿಡಿಯೋ ಮಾಡಿ ವೈರಲ್ : ಬೆಂಗಳೂರಿನಲ್ಲಿ ಆರೋಪಿ ಅರೆಸ್ಟ್

13/05/2025 8:49 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.