ಬೆಂಗಳೂರು: ನೆಲಮಂಗಲ- ಅಂಚೆಪಾಳ್ಯ ಕೆಪಿಟಿಸಿಎಲ್ 220 ಕೆವಿ ಟವರ್‌ನ ತುರ್ತು ದುರಸ್ಥಿ ಕಾರ್ಯ ಸಲುವಾಗಿ ಬುಧವಾರದ ನಾಳೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ತುರ್ತು ದುರಸ್ಥಿ ಸಲುವಾಗಿ ಮೂರು 220 ಕೆವಿ ಸ್ಟೇಷನ್ ಗಳಾದ ಅಂಚೆಪಾಳ್ಯ, ಮಾಗಡಿ ಹಾಗೂ ನಾಗಮಂಗಲ ಸ್ಟೇಷನ್ ಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಾಗಮಂಗಲ ಸ್ಟೇಷನ್ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು, ಕುಣಿಗಲ್ ತಾಲೂಕಿನ ಬಹುತೇಕ ಪ್ರದೇಶಗಳು, ಕುಣಿಗಲ್, ಹುಲಿಯೂರು ದುರ್ಗ, ಯಡವಾಣಿ, ನಿಸ್ಸಾಲೆ, ಚೌಡನಕುಪ್ಪೆ, ಕುದೂರು, ತಿಪ್ಪಸಂದ್ರ, ಉಲ್ಲೇನಹಳ್ಳಿ, ಶ್ರೀಗಿರಿಪುರ, ನೇರಳೆಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
BIG NEWS: ಬೆಂಗಳೂರು ಕಾಲ್ತುಳಿತ ದುರಂತ: ರಾಜ್ಯ ಸರ್ಕಾರದಿಂದ ಜನಸಂದಣಿ ನಿಯಂತ್ರಣಕ್ಕೆ ‘SOP’ ಬಿಡುಗಡೆ