ಮಂಡ್ಯ: ನಾಳೆ ಮದ್ದೂರಲ್ಲಿ ಬರೋಬ್ಬರಿ 28 ಗಣೇಶ ಮೂರ್ತಿಗಳನ್ನು ಸಾಮೂಹಿಕವಾಗಿ ಒಂದೇ ಕಡೆಯಲ್ಲಿ ಸೇರಿಸಿ ವಿಸರ್ಜನೆ ಮಾಡಲಾಗುತ್ತಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತಕ್ಕೆ ಸೂಚಿಸಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಶಾಂತಿ ಸಭೆ ನಡೆಸಿದ ಬಳಿ ಮಾತನಾಡಿದಂತ ಅವರು, ಘಟನೆಯಿಂದ ಇಡೀ ರಾಜ್ಯಾದ್ಯಂತ ಅಲ್ಲೋಲ ಕಲ್ಲೋಲ ಆಗಿದೆ. ಮಂಡ್ಯದಲ್ಲಿ ಕೋಮುಗಲಭೆ ಶುರುವಾಗಿದೆ. ಕೆರಗೋಡು, ನಾಗಮಂಗಲ, ಮದ್ದೂರಿನಲ್ಲಿ ಗಲಭೆಯಾಗಿದೆ. ಹಿಂದೂ ಮುಸ್ಲಿಂ ಒಟ್ಟಿಗೆ ಜೀವನ ನಡೆಸಬೇಕಾಗಿದೆ ಎಂದರು.
ನಾಳೆ ಸಾಮೂಹಿಕ ಗಣಪತಿ ವಿಸರ್ಜನೆ ಇದೆ. ಈ ಘಟನೆ ನಡೆದಿದೆ ಅಂತ ಸಾಮೂಹಿಕ ವಿಸರ್ಜನೆ ಅಲ್ಲ. ನಾಳೆ ರಾಜ್ಯದ ವಿಪಕ್ಷ ನಾಯಕರು ಬರ್ತಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕಿದೆ. ನಾಳೆ ಮೈತ್ರಿ ನಾಯಕರು ಭಾಗಿಯಾಗಲಿದ್ದಾರೆ. ಮುಖಂಡರಿಗಿಂತ ಜನತೆಗೆ ಶಾಂತಿ ಬೇಕಾಗಿದೆ ಎಂದರು.
ಬಿಜೆಪಿ ಜೆಡಿಎಸ್ ನವರು ಸಭೆಗೆ ಬಂದಿಲ್ಲ ಅವರನ್ನ ಗುರ್ತಿಸಿ ಹೇಳುವ ಅವಶ್ಯಕತೆ ಇಲ್ಲ. ಇನ್ನು ಮುಂದೆ ಯಾವ ರೀತಿ ಇರಬೇಕು ಎಂಬುದು ಚರ್ಚೆ ಆಗಲಿ. ಯಾವ ರೀತಿಯ ಘಟನೆಗಳು ನಡೆಯದಂತೆ ಕ್ರಮ ವಹಿಸ್ತೇವೆ ಎಂದು ತಿಳಿಸಿದರು.
ಅಂದಹಾಗೇ ಮದ್ದೂರಲ್ಲಿ ಇಂದು ಸಚಿವ ಎನ್ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದಂತ ಶಾಂತಿ ಸಭೆಯು ಒಂದು ಕೋಮಿಗಷ್ಟೇ ಸೀಮಿತವಾಗಿತ್ತು. ಈ ಸಭೆಯಲ್ಲಿ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಡಿಸಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳೀಯ ಮುಖಂಡರು ಭಾಗಿಯಾಗಿದ್ದರು. ಆದರೇ ನಿರೀಕ್ಷೆಯಂತೆ ಸಭೆಗೆ ಬಿಜೆಪಿ, ಹಿಂದೂ ಮುಖಂಡರು, ಕಾರ್ಯಕರ್ತರು ಗೈರಾಗಿದ್ದರು. ಮುಸ್ಲಿಂ ಸಮುದಾಯದ ಮುಖಂಡರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಧಿಕಾರಿಗಳಿಗಷ್ಟೇ ಸೀಮಿತವಾದ ಸಭೆ ನಡೆಯಿತು.
ವರದಿ: ಗಿರೀಶ್ ರಾಜ್, ಮಂಡ್ಯ
ಮದ್ದೂರು ಪಟ್ಟಣದಲ್ಲಿ ಗಾಂಜಾ ಮಾರಾಟ ಹೆಚ್ಚಾಗಿದೆ, ಇದೇ ಕಲ್ಲು ತೂರಾಟಕ್ಕೆ ಕಾರಣ: ಮುಸ್ಲಿಂ ಮುಖಂಡ