Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: ಹಾಸನದಲ್ಲಿ ಆಟೋ ಚಲಾವಣೆ ವೇಳೆಯೇ ಹೃದಯಾಘಾತದಿಂದ ವ್ಯಕ್ತಿ ಸಾವು: ಇಂದು ಒಂದೇ ದಿನ ನಾಲ್ವರು ಬಲಿ

30/06/2025 8:31 PM

ಮಹಾ ಮಳೆಗೆ ಹಿಮಾಚಲ ಪ್ರದೇಶ ತತ್ತರ ; ಶಿಮ್ಲಾ, ಮಂಡಿ, ಕಾಂಗ್ರಾ ಸೇರಿ 18 ಸ್ಥಳಗಳಲ್ಲಿ ಭೂಕುಸಿತ ಎಚ್ಚರಿಕೆ, 259 ರಸ್ತೆಗಳು ಬಂದ್

30/06/2025 8:21 PM

ನಾಳೆ ‘ಗ್ರಾಮೀಣ ಪತ್ರಕರ್ತರ ಬಸ್ ಪಾಸ್’ ದಶಕಗಳ ಕನಸು ನನಸು: KUWJ ಅಧ್ಯಕ್ಷ ಶಿವಾನಂದ ತಗಡೂರು

30/06/2025 8:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ನಾಳೆ ‘ದ್ವಿತೀಯ ಪಿಯುಸಿ ಪರೀಕ್ಷೆ-3’ರ ಫಲಿತಾಂಶ ಪ್ರಕಟ: ರಿಸಲ್ಟ್ ಈ ರೀತಿ ಚೆಕ್ ಮಾಡಿ
KARNATAKA

BREAKING: ನಾಳೆ ‘ದ್ವಿತೀಯ ಪಿಯುಸಿ ಪರೀಕ್ಷೆ-3’ರ ಫಲಿತಾಂಶ ಪ್ರಕಟ: ರಿಸಲ್ಟ್ ಈ ರೀತಿ ಚೆಕ್ ಮಾಡಿ

By kannadanewsnow0930/06/2025 7:39 PM

ಬೆಂಗಳೂರು: 2025ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶಗಳು ಜುಲೈ 1 ಕ್ಕೆ ಪ್ರಕಟಗೊಳ್ಳಲಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬಾಗಿಲು ತೆರೆದಿದೆ. ವಿಶೇಷವಾಗಿ, ಮೂರನೇ ಪರೀಕ್ಷೆಯ ಅವಕಾಶವು ಅನೇಕ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ಸಿಇಟಿ (KCET) ಮೂಲಕ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಆಕಾಂಕ್ಷೆಗಳಿಗೆ ಹೊಸ ಭರವಸೆ ಮೂಡಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರಲ್ಲಿ ಉತ್ತೀರ್ಣರಾಗದ 82,683 ವಿದ್ಯಾರ್ಥಿಗಳು ಪರೀಕ್ಷೆ-3ಕ್ಕೆ ಹಾಜರಾಗಿದ್ದರು. ಈ ಬಾರಿ, ಪರೀಕ್ಷೆಗೆ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗುವಂತೆ ಮಾಡಲು ಪ್ರಾದೇಶಿಕ ಉಪನಿರ್ದೇಶಕರು, ಪ್ರಾಂಶುಪಾಲರು ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಕ್ರಿಯವಾಗಿ ಪ್ರಯತ್ನಿಸಲಾಗಿತ್ತು. ಪತ್ರಿಕಾ ಪ್ರಕಟಣೆಗಳು ಮತ್ತು ಗೋಷ್ಠಿಗಳನ್ನು ನಡೆಸಿ, ವಿದ್ಯಾರ್ಥಿಗಳಲ್ಲಿ ಉತ್ತೇಜನ ನೀಡಲಾಯಿತು.

ಅಲ್ಲದೆ, ಕಾಲೇಜು ಹಂತದಲ್ಲಿ ಫಲಿತಾಂಶ ಸುಧಾರಣೆಗೆ ಪರಿಹಾರ ಬೋಧನಾ ತರಗತಿಗಳನ್ನು (Remedial Classes) ನಡೆಸಿದ್ದು, ಇದು ವಿದ್ಯಾರ್ಥಿಗಳ ಕಾರ್ಯಕ್ಷಮತೆಗೆ ಸಹಕಾರಿಯಾಗಿದೆ. ಜೂನ್ 9 ರಿಂದ ಜೂನ್ 20, 2025ರವರೆಗೆ ಒಟ್ಟು 262 ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ಅಳವಡಿಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲಾಯಿತು.

ದ್ವಿತೀಯ ಪಿಯುಸಿ ಪರೀಕ್ಷೆ-2 ರಲ್ಲಿ ಉತ್ತೀರ್ಣರಾಗದ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ-3 ಕ್ಕೆ ಶುಲ್ಕ ವಿನಾಯಿತಿ ನೀಡಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು, ಪರೀಕ್ಷೆ-3 ಕ್ಕೆ ನೋಂದಾಯಿಸಿಕೊಳ್ಳಲು ಅನುಕೂಲವಾಯಿತು.

ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಹಾಜರಾದ 82,683 ವಿದ್ಯಾರ್ಥಿಗಳಲ್ಲಿ 18,834 ಉತ್ತೀರ್ಣರಾಗಿದ್ದು, ಶೇಕಡಾ 22.78ರಷ್ಟು ಉತ್ತೀರ್ಣತಾ ಪ್ರಮಾಣ ದಾಖಲಾಗಿದೆ.

ಒಟ್ಟಾರೆ ಪರೀಕ್ಷೆ-3ರ ಫಲಿತಾಂಶಗಳು (Including Repeater and Private Students):

2025 ಪರೀಕ್ಷೆ-3: ಒಟ್ಟು 1,11,002 ವಿದ್ಯಾರ್ಥಿಗಳು ಹಾಜರಾಗಿದ್ದು, 22,446 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣತಾ ಪ್ರಮಾಣ ಶೇಕಡಾ 20.22.
2024 ಪರೀಕ್ಷೆ-3: ಒಟ್ಟು 71,716 ವಿದ್ಯಾರ್ಥಿಗಳು ಹಾಜರಾಗಿದ್ದು, 16,136 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಉತ್ತೀರ್ಣತಾ ಪ್ರಮಾಣ ಶೇಕಡಾ 22.5.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷಾ ಅವಕಾಶವನ್ನು ಬಳಸಿಕೊಂಡಿರುವುದು ಸ್ಪಷ್ಟವಾಗಿದೆ.

ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಉತ್ತಮ ಸಾಧನೆ ಕಂಡುಬಂದಿದೆ. 2025ರ ಪರೀಕ್ಷೆ-3ರಲ್ಲಿ ಒಟ್ಟು 17,398 ವಿದ್ಯಾರ್ಥಿಗಳು ಅಂಕ ಸುಧಾರಣೆಗೆ ಹಾಜರಾಗಿದ್ದು, ಅವರಲ್ಲಿ 11,937 ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಸಿಕೊಂಡಿದ್ದಾರೆ. 2024ರ ಪರೀಕ್ಷೆ-3ರಲ್ಲಿ ಈ ಸಂಖ್ಯೆ 7,420 ಆಗಿತ್ತು. ಇದು ವಿದ್ಯಾರ್ಥಿಗಳಿಗೆ ತಮ್ಮ ಶ್ರೇಣಿಯನ್ನು ಉತ್ತಮಪಡಿಸಿಕೊಳ್ಳಲು ಸರ್ಕಾರ ನೀಡಿದ ಅವಕಾಶದ ಸದ್ಬಳಕೆಯನ್ನು ತೋರಿಸುತ್ತದೆ. ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಅಂಕ ಸುಧಾರಣೆಗೆ ಮುಂದಾದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಇದು ಸಿಇಟಿ ರ್ಯಾಂಕಿಂಗ್ ಉತ್ತಮಪಡಿಸಿಕೊಳ್ಳುವ ಅವರ ಇಚ್ಛೆಯನ್ನು ಪ್ರತಿಬಿಂಬಿಸುತ್ತದೆ.

ದ್ವಿತೀಯ ಪಿಯುಸಿ ಪರೀಕ್ಷೆ-1, ಪರೀಕ್ಷೆ-2, ಮತ್ತು ಪರೀಕ್ಷೆ-3ರ ಕ್ರೋಢೀಕೃತ ಫಲಿತಾಂಶವು ರಾಜ್ಯದ ವಿದ್ಯಾರ್ಥಿಗಳ ಒಟ್ಟಾರೆ ಶೈಕ್ಷಣಿಕ ಪ್ರಗತಿಯನ್ನು ಎತ್ತಿ ತೋರಿಸುತ್ತದೆ:

ಹೊಸಬರು (Freshers): ಒಟ್ಟು 6,39,800 ವಿದ್ಯಾರ್ಥಿಗಳು ಹಾಜರಾಗಿದ್ದು, 5,45,032 ಮಂದಿ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣತಾ ಪ್ರಮಾಣ ಶೇಕಡಾ 85.19.
ಒಟ್ಟಾರೆ ಕ್ರೋಢೀಕೃತ ಫಲಿತಾಂಶ (Including Repeater and Private Students): ಒಟ್ಟು 7,09,968 ವಿದ್ಯಾರ್ಥಿಗಳು ಹಾಜರಾಗಿದ್ದು, 5,66,636 ಮಂದಿ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣತಾ ಪ್ರಮಾಣ ಶೇಕಡಾ 79.81.

ಮೂರನೇ ಪರೀಕ್ಷೆಯ ಅವಕಾಶ ನೀಡಿದುದರಿಂದ ಒಟ್ಟು 22,446 ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಉತ್ತೀರ್ಣರಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಸಿಇಟಿ (counselling/rounds) ನಂತರ ಲಭ್ಯವಿರುವ ಸೀಟುಗಳಿಗೆ ಭಾಗವಹಿಸಲು ಉತ್ತಮ ಅವಕಾಶವಾಗಲಿದೆ.

ಇದು ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾಗಲು ಮತ್ತು ಭವಿಷ್ಯದಲ್ಲಿ ಪದವಿ ಹಾಗೂ ಉನ್ನತ ವ್ಯಾಸಂಗವನ್ನು ಮುಂದುವರಿಸಲು ಉತ್ತಮ ಅವಕಾಶವನ್ನು ಒದಗಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆ-3ರ ರಿಸಲ್ಟ್ ಈ ರೀತಿ ಚೆಕ್ ಮಾಡಿ

ವಿದ್ಯಾರ್ಥಿಗಳು ಮತ್ತು ಪೋಷಕರು ಜುಲೈ 1, 2025 ರಂದು ಮಧ್ಯಾಹ್ನ 1:00 ಗಂಟೆಯ ನಂತರ ತಮ್ಮ ಫಲಿತಾಂಶಗಳನ್ನು https://karresults.nic.in ಜಾಲತಾಣದಲ್ಲಿ ಪಡೆಯಬಹುದಾಗಿದೆ.

ಈ ಜಾಲತಾಣದಲ್ಲಿ ನಿಮ್ಮ ನೋಂದಣಿ ಸಂಖ್ಯೆ ಸೇರಿದಂತೆ ಇತರೆ ಮಾಹಿತಿಯನ್ನು ದಾಖಲಿಸುವ ಮೂಲಕ, ಫಲಿತಾಂಶವನ್ನು ಪಡೆಯಬಹುಗಾಗಿದೆ.

ಈ ವರ್ಷದ ಪಿಯುಸಿ ಫಲಿತಾಂಶಗಳು, ವಿಶೇಷವಾಗಿ ಮೂರನೇ ಪರೀಕ್ಷೆಯ ಅವಕಾಶವು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗಿದೆ.

SSLC ವಿದ್ಯಾರ್ಥಿಗಳೇ ಗಮನಿಸಿ: ಪರೀಕ್ಷೆ-3ಕ್ಕೆ ಉಚಿತವಾಗಿ ಬಿಎಂಟಿಸಿ ಬಸ್ಸಿನಲ್ಲಿ ತೆರಳಲು ಅವಕಾಶ

BIG NEWS : ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್’ ಕಿರುಕುಳಕ್ಕೆ ಮತ್ತೊಂದು ಬಲಿ : ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

Share. Facebook Twitter LinkedIn WhatsApp Email

Related Posts

SHOCKING: ಹಾಸನದಲ್ಲಿ ಆಟೋ ಚಲಾವಣೆ ವೇಳೆಯೇ ಹೃದಯಾಘಾತದಿಂದ ವ್ಯಕ್ತಿ ಸಾವು: ಇಂದು ಒಂದೇ ದಿನ ನಾಲ್ವರು ಬಲಿ

30/06/2025 8:31 PM1 Min Read

ನಾಳೆ ‘ಗ್ರಾಮೀಣ ಪತ್ರಕರ್ತರ ಬಸ್ ಪಾಸ್’ ದಶಕಗಳ ಕನಸು ನನಸು: KUWJ ಅಧ್ಯಕ್ಷ ಶಿವಾನಂದ ತಗಡೂರು

30/06/2025 8:09 PM1 Min Read

ನಿಮ್ಮ ಮನೆ ಬಾಗಿಲಿಗೆ ಬರಲಿದೆ ‘ಇ-ಖಾತಾ’: ಜಸ್ಟ್ ಹೀಗೆ ಮಾಡಿ ಸಾಕು | E-Khata

30/06/2025 7:58 PM2 Mins Read
Recent News

SHOCKING: ಹಾಸನದಲ್ಲಿ ಆಟೋ ಚಲಾವಣೆ ವೇಳೆಯೇ ಹೃದಯಾಘಾತದಿಂದ ವ್ಯಕ್ತಿ ಸಾವು: ಇಂದು ಒಂದೇ ದಿನ ನಾಲ್ವರು ಬಲಿ

30/06/2025 8:31 PM

ಮಹಾ ಮಳೆಗೆ ಹಿಮಾಚಲ ಪ್ರದೇಶ ತತ್ತರ ; ಶಿಮ್ಲಾ, ಮಂಡಿ, ಕಾಂಗ್ರಾ ಸೇರಿ 18 ಸ್ಥಳಗಳಲ್ಲಿ ಭೂಕುಸಿತ ಎಚ್ಚರಿಕೆ, 259 ರಸ್ತೆಗಳು ಬಂದ್

30/06/2025 8:21 PM

ನಾಳೆ ‘ಗ್ರಾಮೀಣ ಪತ್ರಕರ್ತರ ಬಸ್ ಪಾಸ್’ ದಶಕಗಳ ಕನಸು ನನಸು: KUWJ ಅಧ್ಯಕ್ಷ ಶಿವಾನಂದ ತಗಡೂರು

30/06/2025 8:09 PM

ನಿಮ್ಮ ಮನೆ ಬಾಗಿಲಿಗೆ ಬರಲಿದೆ ‘ಇ-ಖಾತಾ’: ಜಸ್ಟ್ ಹೀಗೆ ಮಾಡಿ ಸಾಕು | E-Khata

30/06/2025 7:58 PM
State News
KARNATAKA

SHOCKING: ಹಾಸನದಲ್ಲಿ ಆಟೋ ಚಲಾವಣೆ ವೇಳೆಯೇ ಹೃದಯಾಘಾತದಿಂದ ವ್ಯಕ್ತಿ ಸಾವು: ಇಂದು ಒಂದೇ ದಿನ ನಾಲ್ವರು ಬಲಿ

By kannadanewsnow0930/06/2025 8:31 PM KARNATAKA 1 Min Read

ಹಾಸನ: ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದೆ. ಹೃದಯಾಘಾತದಿಂದ ಸತ್ಯನಾರಾಯಣರಾವ್(63) ಎಂಬುವರು ಸಾವನ್ನಪ್ಪಿದ್ದಾರೆ. ಆಟೋ ಚಾಲನೆ ವೇಳೆಯಲ್ಲೇ ಸತ್ಯನಾರಾಯಣರಾವ್ ಗೆ ಹೃದಯಾಘಾತವಾಗಿದ್ದು,…

ನಾಳೆ ‘ಗ್ರಾಮೀಣ ಪತ್ರಕರ್ತರ ಬಸ್ ಪಾಸ್’ ದಶಕಗಳ ಕನಸು ನನಸು: KUWJ ಅಧ್ಯಕ್ಷ ಶಿವಾನಂದ ತಗಡೂರು

30/06/2025 8:09 PM

ನಿಮ್ಮ ಮನೆ ಬಾಗಿಲಿಗೆ ಬರಲಿದೆ ‘ಇ-ಖಾತಾ’: ಜಸ್ಟ್ ಹೀಗೆ ಮಾಡಿ ಸಾಕು | E-Khata

30/06/2025 7:58 PM

UGCET-2025ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ: ನಾಳೆಯಿಂದ ಆನ್ ಲೈನ್ ಮೂಲಕ ತಿದ್ದುಪಡಿಗೆ ಅವಕಾಶ

30/06/2025 7:50 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.