ಬೆಂಗಳೂರು: ನಾಳೆ ರಾಜ್ಯಾಧ್ಯಂತ ಗಾಂಧಿ ಮತ್ತು ನೋಟು ಚಿತ್ರ ಬಿಡುಗಡೆಯಾಗಲಿದೆ. ಇದೊಂದು ಮಕ್ಕಳ ಚಿತ್ರದ ಜೊತೆಗೆ, ಕುಟುಂಬ ಸಮೇತರಾಗಿ ನೋಡುವಂತ ಸಿನಿಮಾವಾಗಿದೆ. ತಪ್ಪದೇ ಎಲ್ಲರೂ ಹೋಗಿ ಚಿತ್ರವನ್ನು ನೋಡಿ, ತಂಡವನ್ನು ಹಾರೈಸುವಂತೆ ಗೀತರಚನಾಕಾರ ಡಾ.ವಿ ನಾಗೇಂದ್ರ ಪ್ರಸಾದ್ ಮನವಿ ಮಾಡಿದ್ದಾರೆ.
ಇಂದು ಅವರು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ನಾಳೆ ಗಾಂಧಿ ಮತ್ತು ನೋಟು ಚಿತ್ರ ತೆರೆಕಾಣದಲಿದೆ. ಇದೊಂದು ನೋಟಿನ ಮೇಲೆ ಗಾಂಧಿ ಚಿತ್ರ ಇರಬೇಕೇ ಬೇಡವೇ ಎನ್ನುವಂತ ಕಥಾಹಂತರವನ್ನು ಒಳಗೊಂಡಿದೆ. ಸಂಭಾಷಣಾಕಾರ ಗುರುಪ್ರಸಾದ್ ಅವರು ಕತೆಯನ್ನು ಚೆನ್ನಾಗಿ ನೋಡುಗರನ್ನು ಸೆಳೆಯುವಂತೆ ಹೆಣೆದಿದ್ದಾರೆ. ಶಾರ್ಟ್ ಫಿಲ್ಮ್ ಅನ್ನು ಬಿಗ್ ತೆರೆಗೆ ತಂದಿದ್ದಾರೆ ಎಂದರು.
ತಮಾಷೆ, ಎಲ್ಲರಿಗೂ ಇಷ್ಟವಾಗುವಂತ ಕತೆಯಿದೆ. ಮಕ್ಕಳು ತುಂಬಾ ಇಷ್ಟ ಪಡುವಂತೆ ಚಿತ್ರವಿದು. ಮಲೆನಾಡು ಪ್ರದೇಶದಲ್ಲಿ, ಸಾಗರದ ಹಿನ್ನೀರು ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಇದರ ಪ್ರಮುಖ ಪಾತ್ರದಲ್ಲಿ ನನ್ನ ಮಗಳು ದಿವಿಜ ನಾಗೇಂದ್ರ ಪ್ರಸಾದ್ ನಟಿಸಿದ್ದಾಳೆ. ತಂದೆಯಾಗಿ ನನಗೆ ಮಗಳ ನಟನೆ ಬಗ್ಗೆ ಖುಷಿಯಿದೆ. ನಿಮಗೆಲ್ಲ ಮೆಚ್ಚುಗೆಯಾಗುವಂತಿದೆ. ಒಂದು ಸಲ ನಾಳೆ ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ತೆರಳಿ ನೋಡಿ. ಇಂತಹ ಚಿತ್ರಗಳನ್ನು ಪ್ರೋತ್ಸಾಹಿಸಿ ಎಂದು ಸಿನಿ ಪ್ರೇಮಿಗಳಲ್ಲಿ ಮನವಿ ಮಾಡಿದ್ದಾರೆ.
ಅಂದಹಾಗೇ ಯೋಗಿ ದೇವಗಂಗೆ ಈ ಚಿತ್ರದ ನಿರ್ದೇಶಕರಾಗಿದ್ದರೇ, ಭಾವನಾ ಕಂಬೈನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಭಾವನಾ ಕಂಬೈನ್ಸ್ ಬ್ಯಾನರ್‌ನಲ್ಲಿ ಸುಧಾರಾಣಿ ಹೆಚ್. ಆರ್, ಹೆಚ್. ಕೆ ವೀಣಾ ಪದ್ಮನಾಭ, ಮಂಜುನಾಥ ಬಿ. ಎನ್ ನಿರ್ಮಿಸಿರುವ ಗಾಂಧಿ ಮತ್ತು ನೋಟು ಚಿತ್ರದ ಹಾಡುಗಳಿಗೆ ವಾಣಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಸಾಗರ, ಹೊಸನಗರ, ತುಮರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಅಚ್ಚು ಸುರೇಶ್ ಛಾಯಾಗ್ರಹಣ, ವಸಂತ ಕುಮಾರ್ ಸಂಕಲನ ಹಾಗೂ ವಿ.ಎಲ್ ಸತೀಶ್ ಅವರ ಸಹ ನಿರ್ದೇಶನವಿದ್ದು, ಚಿತ್ರಕ್ಕೆ ಗುರುಪ್ರಸಾದ್ ಚಂದ್ರಶೇಖರ್ ಸಂಭಾಷಣೆ ಬರೆದಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಚಾಮುಂಡಿ ಬೆಟ್ಟದ ಬಗ್ಗೆ ಡಿ.ಕೆ ಶಿವಕುಮಾರ್ ನೀಡಿರುವ ಹೇಳಿಕೆ ತಕ್ಷಣ ಹಿಂಪಡೆಯಬೇಕು: ಬಿವೈ ವಿಜಯೇಂದ್ರ ಆಗ್ರಹ
BIG NEWS: ಅನನ್ಯಾ ಭಟ್ ಕೇಸಲ್ಲಿ ಸುಳ್ಳು ದೂರು ಆರೋಪ: ಸುಜಾತ ಭಟ್ ಯಾವುದೇ ಕ್ಷಣದಲ್ಲೂ SIT ಅರೆಸ್ಟ್