ಬೆಂಗಳೂರು: ನಾಳೆ ರಾಜ್ಯದ ಎಲ್ಲಾ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಗೋಪೂಜೆಯನ್ನು ಕಡ್ಡಾಯವಾಗಿ ಮಾಡುವಂತೆ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶಿಸಿದ್ದಾರೆ.
ಈ ಸಂಬಂಧ ಅವರು ಮೌಖಿಕ ಆದೇಶ ನೀಡಿದ್ದಾರೆ ಎನ್ನಲಾಗಿದೆ. ನಾಳೆ ದೀಪಾವಳಿಯ ಬಲಿಪಾಡ್ಯಮಿಯ ಕಾರಣದಿಂದಾಗಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಗೋಪೂಜೆ ನೆರವೇರಿಸುವಂತೆ ಸೂಚಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ನಾಳೆ ರಾಜ್ಯದ ಎಲ್ಲಾ ಮುಜರಾತಿ ಇಲಾಖೆ ವ್ಯಾಪ್ತಿಯ ಅಧಿಸೂಚಿತ ದೇವಾಲಯಗಳಲ್ಲಿ ಗೋವುಗಳನ್ನು ಪೂಜಿಸುವ ಕಾರಣದಿಂದಾಗಿ ಅವುಗಳಿಗೆ ಸ್ನಾನ ಮಾಡಿಸಿ, ದೇವಾಲಯಕ್ಕೆ ಕರೆತರಬೇಕು. ಆ ಬಳಿಕ ಗೋವುಗಳಿಗೆ ಅರಿಶಿಣ, ಕುಂಕುಮ ಹಚ್ಚಿ, ಹೂವುಗಳಿಂದ ಅಲಂಕರಿಸಿ, ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು ನೀಡಿ ಅವುಗಳನ್ನು ಪೂಜಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
BREAKING: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಮಹಾ ಪದಗಾರ ‘ದಳವಾಯಿ ಚಿತ್ತಪ್ಪ’ ವಿಧಿವಶ
ಭಾರತೀಯರಲ್ಲಿ ಜೀವನಶೈಲಿ, ಸಂಸ್ಕರಿಸಿದ ಆಹಾರ ಪದ್ಧತಿಯಿಂದಾಗಿ ಹೃದ್ರೋಗ ಹೆಚ್ಚಾಗಿದೆ: ಅಧ್ಯಯನ








