ತುಮಕೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಗಣೆ ಟ್ರಸ್ಟ್ ನಿಂದ ಜನವರಿ.10ರ ನಾಳೆ, ಜನವರಿ.11ರ ನಾಡಿದ್ದು ಎರಡು ದಿನಗಳ ಕಾಲ ಕಾಡುಗೊಲ್ಲ ಬುಡಕಟ್ಟು, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಅಧ್ಯಯನ ಶಿಬಿರ ನಡೆಸಲಾಗುತ್ತಿದೆ. ತುಮಕೂರಿನ ಶಿರಾದಲ್ಲಿರುವಂತ ಸಮತಾ ಮಹಾವಿದ್ಯಾಲಯದ ಆವರಣದಲ್ಲಿ ಈ ಅಧ್ಯಯನ ಶಿಬಿರ ನಡೆಯಲಿದೆ ಎಂಬುದಾಗಿ ಗಣೆ ಟ್ರಸ್ಟ್ ನ ಅಧ್ಯಕ್ಷೆ ಡಾ.ಪ್ರೇಮ.ಜಿ.ಕೆ ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಕಾಡುಗೊಲ್ಲ ಸಮುದಾಯಕ್ಕೆ ತಮ್ಮ ಬುಡಕಟ್ಟಿನ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಾಳೆ, ನಾಡಿದ್ದು ಎರಡು ದಿನಗಳ ಕಾಲ ಅಧ್ಯಯನ ಶಿಬಿರ ಏರ್ಪಡಿಸಲಾಗಿದೆ ಎಂದಿದ್ದಾರೆ.
ಜನವರಿ.10ರ ನಾಳೆ ಬೆಳಗ್ಗೆ 10 ಗಂಟೆಗೆ ಶಿಬಿರವನ್ನು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಲೋಕಸಭಾ ಸದಸ್ಯರಾದಂತ ಪಿ.ಕೋದಂಡರಾಮಯ್ಯ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ಹಿರಿಯ ವಕೀಲರಾದಂತ ಪ್ರೊ.ರವಿವರ್ಮ ಕುಮಾರ್, ಕಾಡುಗೊಲ್ಲ ಅಭಿವೃದ್ಧಿ ನಿಗದ ಅಧ್ಯಕ್ಷರಾದಂತ ಮಹೇಶ್ ಎಂ ಆರೋಗೆರೆ, ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯರಾದಂತ ಡಾ.ರವಿ ಕುಮಾರ್ ಹಾಗೂ ಶಿರಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರೇಖಾ ಯಾದವ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.
ನಾಳೆ ಮಧ್ಯಾಹ್ನ 12ರಿಂದ 1.30ರವರೆಗೆ ಮೊದಲ ಗೋಷ್ಠಿ ನಡೆಯಲಿದೆ. ಕಾಡುಗೊಲ್ಲ ಬುಡಕಟ್ಟು, ಸಮಾಜ, ಸಾಹಿತ್ಯ ಅಧ್ಯಯನದ ಅವಲೋಕನದ ಬಗ್ಗೆ ಜಾನಪದ ಅಕಾಡೆಮಿ ಸದಸ್ಯರಾದಂತ ಡಾ.ಮಲ್ಲಿಕಾರ್ಜುನ ಕಲಮರಳ್ಳಿ ಅವರು ವಿಷಯ ಮಂಡಿಸಲಿದ್ದಾರೆ. ಆ ಬಳಿಕ ಮೈಸೂರಿನ ಮಹಾರಾಜ ಕಾಲೇಜಿನ ಪ್ರೊ.ಕೆ.ತಿಮ್ಮಯ್ಯ ಅವರು ಕಾಡುಗೊಲ್ಲ ಬುಡಕಟ್ಟು, ಸಾಂಸ್ಕೃತಿಕ ಅನನ್ಯತೆ ಕುರಿತು ಮಾತನಾಡಿದರೇ, ಬೆಂಗಳೂರು ವಿವಿಯ ಕನ್ನಡ ವಿಭಾಗದ ಪ್ರೊ.ಚಿತ್ತಯ್ಯ ಪೂಜಾರ್ ಅವರು ಸಮುದಾಯಗಳ ಸಂಶೋಧನೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಡಲಿದ್ದಾರೆ ಎಂದಿದ್ದಾರೆ.
ಜ.10ರಂದು ಗೋಷ್ಠಿ-2ರಲ್ಲಿ 2 ಗಂಟೆಯಿಂದ 3ರವರೆಗೆ ಸಮಾಜ ಶಾಸ್ತ್ರಜ್ಞ, ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದಂತ ಪ್ರೊ.ಗುರುಲಿಂಗಯ್ಯ ಅವರು ಕಾಡುಗೊಲ್ಲ ಬುಡಕಟ್ಟು, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಬಿಕ್ಕಟ್ಟುಗಳ ಬಗ್ಗೆ ಮಾತನಾಡಿದರೇ, ಮೈಸೂರಿನ ಮುಖ್ಯ ಪಶುಪಾಲನಾಧಿಕಾರಿ ಡಾ.ರಘುಪತಿ ಅವರು ಪಶುಪಾಲಕ ಸಮುದಾಯಗಳ ಮುಂದಿನ ಸವಾಲುಗಳ ಸಾಧ್ಯತೆ ವಿಷಯ ಕುರಿತಂತೆ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ.
ಗೋಷ್ಠಿ-3ರಲ್ಲಿ ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಆಫ್ ಲಾದಲ್ಲಿನ ತಳಸಮುದಾಯಗಳ ಅಧ್ಯಯನ ಕೇಂದ್ರದ ಪ್ರೊ.ಚಂದ್ರಶೇಖರ ರಾಮೇನಳ್ಳಿ ಅವರು, ಹಿಂದುಳಿದ ಸಮುದಾಯಗಳ ತಾತ್ವಿಕತೆ ಕುರಿತು ವಿಷಯ ಮಂಡಿಸಲಿದ್ದಾರೆ. ರುದ್ರ ಪುನೀತ್ ಅವರು ಉದ್ಯಮ ಶೀಲತೆ ಮತ್ತು ತಳ ಸಮುದಾಯದ ಸವಾಲುಗಳ ಬಗ್ಗೆ ಮಾತನಾಡಲಿದ್ದಾರೆ. ಸಂಜೆ ಶಿಬಿರಾರ್ಥಿಗಳಿಂದ ಸಂವಾದ, ಆ ಬಳಿಕ ಕೋಲಾಟದ ಹಾಡುಗಳು, ಚಲನಚಿತ್ರ ಪ್ರದರ್ಶನವಿರಲಿದೆ ಎಂದು ಮಾಹಿತಿ ನೀಡಿದ್ದಾರೆ.
ದಿನಾಂಕ 11-01-2026ರ ಭಾನುವಾರದಂದು ಬೆಳಗ್ಗೆ 9.30ರಿಂದ 10.30ರವರೆಗೆ ಗೋಷ್ಠಿ-4 ನಡೆಯಲಿದೆ. ತುಮಕೂರು ವಿವಿಯ ಪ್ರಾಧ್ಯಾಪಕ ಪ್ರೊ.ಕರಿಯಣ್ಣ ಹೊನ್ನಗಾನಹಳ್ಳಿ ಅವರು ಕಾಡುಗೊಲ್ಲ ಬುಡಕಟ್ಟು, ಸಾಂಸ್ಕೃತಿಕ ವೀರರು ಮತ್ತು ಸಮುದಾಯದ ಅಸ್ಮಿತತೆ ವಿಷಯ ಕುರಿತು ಮಾತನಾಡಲಿದ್ದಾರೆ. ತುಮಕೂರಿನ ಜುಂಜಪ್ಪ ಅಧ್ಯಯನ ಪೀಠದ ಅಧ್ಯಕ್ಷರಾದಂತ ಪ್ರೊ.ಶಿವಣ್ಣ ಬೆಳವಾಡಿ ಅವರು ವಿಶ್ವ ವಿದ್ಯಾನಿಲಯಗಳಲ್ಲಿ ಬುಡಕಟ್ಟು ಅಧ್ಯಯನದ ಮಾದರಿಗಳ ಬಗ್ಗೆ ಮಾತನಾಡಲಿದ್ದಾರೆ ಎಂದಿದ್ದಾರೆ.
ಗೋಷ್ಠಿ-5 ಬೆಳಗ್ಗೆ 10.30ರಿಂದ 11.30ರವರೆಗೆ ನಡೆಯಲಿದೆ. ಹೊಸಪೇಟೆಯ ಸಖಿ ಸಂಸ್ಥೆಯ ಅಧ್ಯಕ್ಷೆ ಡಾ.ಭಾಗ್ಯಲಕ್ಷ್ಮೀ ಅವರು ಕಾಡುಗೊಲ್ಲ ಬುಡಕಟ್ಟು ಮಹಿಳಾ ಸಬಲೀಕರಣದ ಬಗ್ಗೆ ವಿಷಯ ಪ್ರಸ್ತಾಪಿಸಲಿದ್ದಾರೆ. ಚಿತ್ರದುರ್ಗದ ಸಹಾಯಕ ಪ್ರಾಧ್ಯಪಕಿ ಡಾ.ಗಾಯತ್ರಿ ಅವರು ಕಾಡುಗೊಲ್ಲ ಬುಡಕಟ್ಟು ಸಂಸ್ಕೃತಿಯಲ್ಲಿ ಮಹಿಳಾ ಚೈತನ್ಯದ ನೆಲೆಗಳ ಬಗ್ಗೆ ಶಿಬಿರಾರ್ಥಿಗಳಿಗೆ ತಿಳಿಸಿಕೊಡಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ಗೋಷ್ಠಿ-5ರಲ್ಲಿ ಕೊಪ್ಪದ ಪ್ರಥಮ ದರ್ಜೆ ಕಾಲೇಜಿನ ಡಾ.ಧನಂಜಯ ಮೂರ್ತಿ ಅವರು ಅಂಬೇಡ್ಕರ್ ಚಿಂತನೆಯಲ್ಲಿ ಬುಡಕಟ್ಟುಗಳ ಬಗ್ಗೆ ಮಾತನಾಡಿದರೇ, ತಿಪಟೂರಿನ ಸಾಮಾಜಿಕ ಹೋರಾಟಗಾರ ಉಜ್ಜಜ್ಜಿ ರಾಜಣ್ಣ ಅವರು ಸ್ಥಳೀಯ ಸರ್ಕಾರಿ ಸಂಸ್ಥೆಗಳು ಮತ್ತು ಕಾಡುಗೊಲ್ಲರ ಹಟ್ಟಿಗಳ ವಿಷಯ ಕುರಿತಂತೆ ಮಾತನಾಡಲಿದ್ದಾರೆ. ಆ ಬಳಿಕ ಶಿಬಿರದಲ್ಲಿ ಪಾಲ್ಗೊಂಡಂತ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತದೆ ಎಂದಿದ್ದಾರೆ.
ಈ ಸಂವಾದದಲ್ಲಿ ಪ್ರಾಚಾರ್ಯದಾರದಂತ ಪ್ರೊ.ಮಂಜಣ್ಣ.ಎಂ, ಡಾ.ಯಶೋಧರ.ಜಿಎಸ್, ಹೊಸದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಾದಂತ ನಾಗರಾಜ್.ಪಿ.ಸಿ, ಡಾ.ಕಾಂತರಾಜು, ಡಾ.ನಾಗರಾಜ್, ಡಾ.ಸಿದ್ದಣ್ಣ ಡಿ.ಟಿ, ನಾಗಣ್ಣ ಜಿ.ಕೆ, ಡಾ.ಗೀತಾ, ಗಂಗಾ, ಅಶ್ವಿನಿ, ಡಾ.ಮೇಘನಾ, ಡಾ.ವೀರೇಶ್, ಮಹಾಂತೇಶ್ ಪಾಲ್ಗೊಳ್ಳಲಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಇನ್ನೂ ಜನವರಿ.11ರ ಶಿಬಿರದ ವೇಳೆಯಲ್ಲೇ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದಂತ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಜಾನಪದ ತಜ್ಞ ಪ್ರಶಸ್ತಿ ಪುರಸ್ಕೃತರಾದಂತ ಚಿಕ್ಕಣ್ಣ ಯಣ್ಣೆಕಟ್ಟೆ ಹಾಗೂ ಚಿತ್ರಕಲಾ ಪರಿಷತ್ ಗೌರವ ಪ್ರಶಸ್ತಿ ಪುರಸ್ಕೃತರಾದಂತ ಪ್ರೊ.ಸಿ.ಚಿಕ್ಕಣ್ಣ ಅವರನ್ನು ಸನ್ಮಾನಿಸಿ, ಗೌರವಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಶಿಬಿರದಲ್ಲಿ ವಿಶೇಷ ಆಹ್ವಾನಿತರಾಗಿ ಪ್ರಾಚಾರ್ಯರಾದಂತ ಪ್ರೊ.ಮಹೇಶ್, ಪ್ರೊ.ಚಂದ್ರಯ್ಯ, ತುಮಕೂರು ವಿವಿ ಸಿಂಡಿಕೇಟ್ ಸದಸ್ಯರಾದಂತ ತಿಪ್ಪೇಸ್ವಾಮಿ ಸಂಗೇನಳ್ಳಿ, ಡಾ.ಪರಮೇಶ್ವರಪ್ಪ, ಡಾ.ಸಣ್ಣಪ್ಪ, ಶಿರಸ್ತೇದಾರರಾದಂತ ರವೀಶ್, ಜಾನಪದ ಅಕಾಡೆಮಿ ಸದಸ್ಯರಾದಂತ ಮಲ್ಲಿಕಾರ್ಜುನ ಕೆಂಕೆರೆ, ಸಿರಿಯಜ್ಜಿ ಪ್ರತಿಷ್ಠಾನದ ಅಧ್ಯಕ್ಷರಾದಂತ ಪ್ರೊ.ರಾಜಶೇಖರಯ್ಯ ಮತ್ತು ಬಳಗದ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.
ಕಾಡುಗೊಲ್ಲ ಬುಡಕಟ್ಟು ಸಾಹಿತ್ಯ, ಸಂಸ್ಕೃತಿಯ ಎರಡು ದಿನಗಳ ಅಧ್ಯಯನ ಶಿಬಿರವನ್ನು ಬರಹಗಾರ, ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿಯ ಸಮಾಜ ಶಾಸ್ತ್ರಜ್ಞರು ಆದಂತ ಪ್ರೊ.ಸಿ.ಜಿ ಲಕ್ಷ್ಮೀಪತಿ ನಿರ್ದೇಶಿಸುತ್ತಿದ್ದಾರೆ. ಈ ಶಿಬಿರವನ್ನು ಗಣೆ ಟ್ರಸ್ಟ್ ನ ಉಪಾಧ್ಯಕ್ಷೆ ಸುನಂದಮ್ಮ.ಬಿ.ಕೆ, ಕಾರ್ಯದರ್ಶಿಯಾದಂತ ಕೂನಿಕೆರೆ ರಾಮಣ್ಣ, ನಿರ್ದೇಶಕರಾದಂತ ಸಿ.ಜಿ ಅನ್ನಪೂರ್ಣ, ಸಂಪತ್ ಕುಮಾರ್ ಡಿ.ಟಿ, ಚಿತ್ತರಾಜ್ ಜಂಗಮರಳ್ಳಿ, ರಾಜಣ್ಣ ಅಕ್ಕಸಂದ್ರ ಜೊತೆಗೂಡಿ ಆಯೋಜಿಸಲಾಗುತ್ತಿದೆ ಎಂಬುದಾಗಿ ಅಧ್ಯಕ್ಷೆ ಡಾ.ಪ್ರೇಮ.ಜಿ.ಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ… ಸಂಪಾದಕರು..








