ಬೆಂಗಳೂರು: ಇಂದು ಮಾಜಿ ಶಾಸಕ ಐವಾನ್ ನಿಗ್ಲಿ ಕತೆ, ನಿರ್ಮಾಣದ ಸೆಪ್ಟೆಂಬರ್ 13 ಚಿತ್ರವು ಬೆಂಗಳೂರಲ್ಲಿ ತೆರೆ ಕಾಣಲಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಸಪ್ನ ಚಿತ್ರಮಂದಿರಲ್ಲಿ ಪ್ರದರ್ಶನವಾಗಲಿದೆ.
ಡಾ.ರಾಜ ಬಾಲಕೃಷ್ಣ ಅವರ ನಿರ್ದೇಶನ, ಡಿಓಪಿ, ಸಂಕಲನ ಹೊಂದಿರುವಂತ ಸೆಪ್ಟೆಂಬರ್ 13 ಚಿತ್ರ ಬೆಂಗಳೂರಿನ ಸಪ್ನ ಚಿತ್ರಮಂದಿರಲ್ಲಿ ಪ್ರದರ್ಶನ ಕಾಣಲಿದೆ.
ಸೆಪ್ಟೆಂಬರ್ 13 ಚಿತ್ರವು ದಾದಿಯರ ಕೆಲಸದ ಮಹತ್ವವನ್ನು ಎತ್ತಿ ತೋರುವಂತ ಮೊದಲ ಚಿತ್ರವಾಗಿದೆ. ಈ ಚಿತ್ರದ ಕತೆ, ನಿರ್ಮಾಣವು ಮಾಜಿ ಶಾಸಕ ಐವಾನ್ ನಿಗ್ಲಿ ಅವರದ್ದಾಗಿದೆ.
ತಾರಾಗಣದಲ್ಲಿ ಜೈ ಜಗದೀಶ್, ವಿನಯ ಪ್ರಸಾದ್, ಸ್ಪಂದಿಗಂ ಜಾರ್ಜ್, ಯಮುನ ಶ್ರೀನಿಧಿ, ಸತ್ಯಾರಾಂ ದಾಸ್, ನಗೇಶ್ ಮೈಯ ಅವರನ್ನು ಒಳಗೊಂಡಿದೆ. ವಿಶೇಷ ಪಾತ್ರದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಕೂಡ ನಟಿಸಿದ್ದಾರೆ.
ಸುಮಾರು 2 ಗಂಟೆ 20 ನಿಮಿಷ ಹೊಂದಿರುವಂತ ಈ ಚಿತ್ರವು ಯು ಪ್ರಮಾಣಪತ್ರವನ್ನು ಸೆನ್ಸಾರ್ ಬೋರ್ಡ್ ನಿಂದ ಪಡೆದಿದೆ.
ಇಂದಿನಿಂದ ಸೆಪ್ಟೆಂಬರ್ 13 ಚಿತ್ರವು ಬೆಂಗಳೂರಿನ ಸಪ್ನ ಚಿತ್ರಮಂದಿರಲ್ಲಿ ಮಧ್ಯಾಹ್ನ 1 ಗಂಟೆಗೆ ಪ್ರತಿ ದಿನ ಪ್ರದರ್ಶನ ಕಾರಣಲಿದ್ದು, ನರ್ಸಿಂಗ್ ವಿದ್ಯಾರ್ಥಿಗಳು, ವೃತ್ತಿ ನಿರತರು ತಪ್ಪದೇ ವೀಕ್ಷಿಸುವಂತೆ ಮಾಜಿ ಶಾಸಕ ಐವಾನ್ ನಿಗ್ಲಿ ಮನವಿ ಮಾಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ