ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಉಚಿತವಾಗಿ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸೋದಕ್ಕೆ ಮೊದಲ ಗ್ಯಾರಂಟಿ ಯೋಜನೆಯಾಗಿ ಶಕ್ತಿ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆ ಕರ್ನಾಟಕದಲ್ಲಿ ಜಾರಿಯಾಗಿ ಜೂನ್.11ರ ಇಂದಿಗೆ 2 ವರ್ಷ ಕಳೆದಿದೆ. ಇಂತಹ ಶಕ್ತಿ ಯೋಜನೆಗೆ ಭರ್ಜರಿ ರೆಪ್ಸಾನ್ಸ್ ದೊರೆತಿದ್ದು, ಕೋಟ್ಯಂತರ ಮಹಿಳೆಯರು ಉಚಿತವಾಗಿ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ.
ಈ ಕುರಿತಂತೆ ರಾಜ್ಯ ಸರ್ಕಾರವು ಮಾಹಿತಿ ಬಿಡುಗಡೆ ಮಾಡಲಾಗಿದ್ದು, ದಿನಾಂಕ 11-06-2023ರಂದು ಶಕ್ತಿ ಯೋಜನೆಯನ್ನು ಕರ್ನಾಟಕದಲ್ಲಿ ಸರ್ಕಾರ ಜಾರಿಗೊಳಿಸಿತು. ದಿನಾಂಕ 11-06-2025ರ ಇಂದಿಗೆ ಎರಡು ವರ್ಷ ಕಳೆದಿದೆ. ಜೂನ್.10, 2025ರವರೆಗೆ ಮೂರು ಸಾರಿಗೆ ಬಸ್ಸುಗಳಲ್ಲಿ ಒಟ್ಟು 76,40,285 ಮಹಿಳೆಯರು ಟಿಕೇಟ್ ಮೌಲ್ಯ ಪಾವತಿಸದೇ ಉಚಿತವಾಗಿ ಪ್ರಯಾಣಿಸಿರುವುದಾಗಿ ತಿಳಿಸಿದೆ.
ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ದಿನಾಂಕ 11-06-2025ರವರೆಗೆ ಪ್ರಯಾಣಿಸಿದಂತ ಮಹಿಳೆಯರ ಸಂಖ್ಯೆ 144,23,83,328 ಆಗಿದ್ದರೇ ಇದರ ಟಿಕೆಟ್ ಮೌಲ್ಯ ರೂ.4556,27,06,789 ಆಗಿದೆ. ಬಿಎಂಟಿಸಿ ಬಸ್ಸಿನಲ್ಲಿ ಇಲ್ಲಿಯವರೆಗೆ 150,69,56,654 ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದರೇ, ಅದರ ಟಿಕೆಟ್ ಮೌಲ್ಯ ರೂ.2061,04,38,637 ಆಗಿದೆ ಎಂದಿದೆ.
ಇನ್ನೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಉಚಿತವಾಗಿ 111,10,24,350 ಮಹಿಳೆಯರು ಪ್ರಯಾಣಿಸಿದ್ದರೇ ಅದರ ಹಣ ರೂ.2968,47,45,225 ಆಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ಸಿನಲ್ಲಿ 68,78,85,511 ಮಹಿಳೆಯರು ಪ್ರಯಾಣಿಸಿದ್ದಾರೆ. ಇದರ ಟಿಕೆಟ್ ಮೌಲ್ಯ ರೂ.2408,58,99,134 ಆಗಿದೆ ಎಂದು ಹೇಳಿದೆ.
ಒಟ್ಟಾರೆ ಮೂರು ಸಾರಿಗೆ ಬಸ್ಸುಗಳಲ್ಲಿ ಜೂನ್.11, 2023ರಿಂದ ಜೂನ್.11, 2025ರ ಇಲ್ಲಿಯವರೆಗೆ 2 ವರ್ಷಗಳಲ್ಲಿ 4,74,82,49,843 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇವರ ಟಿಕೆಟ್ ಮೌಲ್ಯವು ರೂ.11994,37,89,779 ಆಗಿದೆ ಎಂಬುದಾಗಿ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ವರದಿ: ವಸಂತ ಬಿ ಈಶ್ವರಗೆರೆ..,
BREAKING: ನವದೆಹಲಿಯ ‘ಕರ್ನಾಟಕ ಭವನ’ದ ವಾಸ್ತವ್ಯ ದರ, ಷರತ್ತು, ನಿಬಂಧನೆ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ
BIG NEWS : ಪ್ರಧಾನಿ ಮೋದಿಯಿಂದ ದೇಶದ ಬಡತನ ಕಡಿಮೆಯಾಗಿಲ್ಲ : CM ಸಿದ್ದರಾಮಯ್ಯ ವಾಗ್ದಾಳಿ