ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಂದು 1000 ದಿನ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಜನಮನ ಗೆದ್ದ ಸಾವಿರ ದಿನಗಳ ಸಾಧನೆಯ ಹಾದಿ! ಕರ್ನಾಟಕದ ಸಮಗ್ರ ಅಭಿವೃದ್ಧಿಯ ಸಂಕಲ್ಪದೊಂದಿಗೆ, ನುಡಿದಂತೆ ನಡೆದ ನಮ್ಮ ಸರ್ಕಾರ ಇಂದು ಯಶಸ್ವಿ 1000 ದಿನಗಳನ್ನು ಪೂರೈಸಿದೆ. ಪ್ರತಿಯೊಬ್ಬ ಕನ್ನಡಿಗನ ಮುಖದಲ್ಲಿ ಮಂದಹಾಸ ಮೂಡಿಸುವ ಪಂಚ ಗ್ಯಾರಂಟಿಗಳು ಇಂದು ರಾಜ್ಯದ ಮನೆಮಾತಾಗಿವೆ. ಇದು ಕೇವಲ ಅಂಕಿ-ಅಂಶಗಳ ಸಂಭ್ರಮವಲ್ಲ, 7 ಕೋಟಿ ಕನ್ನಡಿಗರ ನಂಬಿಕೆಯ ವಿಜಯೋತ್ಸವ..ಸರ್ವ ಜನಾಂಗದ ಶಾಂತಿಯ ತೋಟ, ಸಮೃದ್ಧ ಕರ್ನಾಟಕ ಎಂದು ಹೇಳಿದ್ದಾರೆ.
ಜನಮನ ಗೆದ್ದ ಸಾವಿರ ದಿನಗಳ ಸಾಧನೆಯ ಹಾದಿ!
ಕರ್ನಾಟಕದ ಸಮಗ್ರ ಅಭಿವೃದ್ಧಿಯ ಸಂಕಲ್ಪದೊಂದಿಗೆ, ನುಡಿದಂತೆ ನಡೆದ ನಮ್ಮ ಸರ್ಕಾರ ಇಂದು ಯಶಸ್ವಿ 1000 ದಿನಗಳನ್ನು ಪೂರೈಸಿದೆ. ಪ್ರತಿಯೊಬ್ಬ ಕನ್ನಡಿಗನ ಮುಖದಲ್ಲಿ ಮಂದಹಾಸ ಮೂಡಿಸುವ ಪಂಚ ಗ್ಯಾರಂಟಿಗಳು ಇಂದು ರಾಜ್ಯದ ಮನೆಮಾತಾಗಿವೆ. ಇದು ಕೇವಲ ಅಂಕಿ-ಅಂಶಗಳ ಸಂಭ್ರಮವಲ್ಲ, 7 ಕೋಟಿ ಕನ್ನಡಿಗರ… pic.twitter.com/l79zC6pm8s
— DK Shivakumar (@DKShivakumar) February 13, 2026
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಂದು 1000 ದಿನ : ಹಾವೇರಿಯಲ್ಲಿ ನಾಳೆ ಬೃಹತ್ ಸಮಾವೇಶ
2023ರ ಮೇ 20ರಂದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಶುಕ್ರವಾರ 1000 ದಿನಗಳನ್ನು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಹಾವೇರಿಯಲ್ಲಿ ಬೃಹತ್ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾ ಗಿದೆ. ‘ಭೂ ಗ್ಯಾರಂಟಿ’ ಯೋಜನೆಯಡಿ 1.10 ಲಕ್ಷ ಬಡವರಿಗೆ ಹಕ್ಕು ಪತ್ರ ವಿತರಣೆ ಮಾಡಲು ಉದ್ದೇಶಿಸಲಾಗಿದೆ.
ಹಾವೇರಿಯಲ್ಲಿ ಫೆ.14ರಂದು ಭೂ ಗ್ಯಾರಂಟಿ ಯೋಜನೆಯ ಸಮರ್ಪಣಾ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮ ದಲ್ಲಿ ಹಾವೇರಿ ಸೇರಿದಂತೆ ಸುತ್ತಲ 8 ಜಿಲ್ಲೆಗಳ ಸುಮಾರು 1.10 ಲಕ್ಷ ಜನರಿಗೆ ಭೂಮಿಯ ಹಕ್ಕುಪತ್ರ ವಿತರಿಸಲಾಗುತ್ತದೆ.ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಸರಕಾರದ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದೆ.








