ಬೆಂಗಳೂರು: ಪಡಿತರ ಚೀಟಿಯಲ್ಲಿನ ತಿದ್ದುಪಡಿಗೆ ಜನವರಿ 31, 2025 ಕೊನೆಯ ದಿನವಾಗಿದೆ. ತಿದ್ದುಪಡಿ ಮಾಡದೇ ಇದ್ದರೇ ರೇಷನ್ ಕೊಡೋದು ನಿಲ್ಲಿಸಲಾಗುತ್ತದೆ. ಹಾಗೇ ಹೀಗೆ ಅಂತ ವದಂತಿಯೊಂದು ಹರಿದಾಡಿತ್ತು. ಈ ಕಾರಣದಿಂದಾಗಿ ಬೆಂಗಳೂರು ಒನ್ ಕೇಂದ್ರದ ಮುಂದೆ ಜನರು ಕಿಲೋಮೀಟರ್ ಗಟ್ಟಲೇ ಕ್ಯೂ ನಿಂತಿರುವುದು ಕಂಡು ಬಂದಿದೆ.
ಬೆಂಗಳೂರಿನ ರಾಜಾಜೀನಗರದ ಬೆಂಗಳೂರು ಓನ್ ಕೇಂದ್ರದ ಮುಂದೆ ರೇಷನ್ ಕಾರ್ಡ್ ತಿದ್ದುಪಡಿಗಾಗಿ ಜನವೋ ಜನ. ಕಿಲೋಮೀಟರ್ ಗಟ್ಟಲೇ ಕ್ಯೂ ನಿಂತ ಜನರಲ್ಲಿ ಒಂದೇ ವಿಚಾರ ಜನವರಿ.31 ಪಡಿತರ ಚೀಟಿ ತಿದ್ದುಪಡಿಗೆ ಕೊನೆಯ ದಿನವಾಗಿದೆ. ಇವತ್ತೇ ಜ.29ರ ಟೋಕನ್ ವಿತರಣೆ ಮಾಡ್ತಾರೆ. ಅದಕ್ಕಾಗಿ ಬೆಳಿಗ್ಗೆ 5 ಗಂಟೆಯಿಂದ ಸರದಿ ಸಾಲಿನಲ್ಲಿ ನಿಂತಿರುವುದಾಗಿ ಹೇಳುತ್ತಿದ್ದಾರೆ.
ಈ ಬಗ್ಗೆ ಆಹಾರ ಇಲಾಖೆಯಿಂದ ಮಾಹಿತಿ ನೀಡಿದ್ದು, ಸಾರ್ವಜನಿಕರು ರೇಷನ್ ಕಾರ್ಡ್ ತಿದ್ದುಪಡಿ ಮಾಡೋದಕ್ಕೆ ಯಾವುದೇ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ. ಬೆಂಗಳೂರಿನ ಎಲ್ಲಾ ಸೆಂಟರ್ ಗಳಲ್ಲಿಯೂ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿಯೂ ತಿದ್ದುಪಡಿ ಮಾಡಿಸಬಹುದಾಗಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದೆ.
BIG NEWS: ಫೆಬ್ರವರಿ ಮೊದಲವಾರ ಮೈಸೂರು ದಸರಾ ಆನೆ ಅರ್ಜುನನ ಸ್ಮಾರಕ ಉದ್ಘಾಟನೆ: ಸಚಿವ ಈಶ್ವರ ಖಂಡ್ರೆ
BREAKING : ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ನಟ ‘ಸೈಫ್ ಅಲಿಖಾನ್’ ಡಿಸ್ಚಾರ್ಜ್ : ಫೋಟೋ ವೈರಲ್ | Saif Ali Khan