ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ
- ಮಧ್ಯಪ್ರದೇಶದ ಜಬಲ್ಪುರದಲ್ಲಿ ಪ್ರಧಾನಿ ಮೋದಿ ರೋಡ್ ಶೋ ವೇಳೆ ವೇದಿಕೆ ಕುಸಿತ,5 ಮಂದಿಗೆ ಗಾಯ
ಜಬಲ್ಪುರದಲ್ಲಿ ಪ್ರಧಾನಿ ರೋಡ್ ಶೋನಿಂದ ನಿರ್ಗಮಿಸಿದ ಕೂಡಲೇ ಕಾಲ್ತುಳಿತ ಸಂಭವಿಸದಿ ಪರಿಣಾಮ ಪ್ರಧಾನಿಯವರ ರೋಡ್ ಶೋ ಮಾರ್ಗದ ಪಕ್ಕದಲ್ಲಿ ನಿರ್ಮಿಸಲಾದ ಸ್ವಾಗತ ವೇದಿಕೆ ಕುಸಿದಿದೆ. ಪ್ರಧಾನಿಯನ್ನು ಸ್ವಾಗತಿಸಲು ಹಾಕಿದ್ದ ಎರಡು ವೇದಿಕೆಗಳು ಕಾಲ್ತುಳಿತದಲ್ಲಿ ಮುರಿದುಹೋದವು ಎನ್ನಲಾಗಿದೆ. ವೇದಿಕೆ ಕುಸಿದ ಪರಿಣಾಮ ಅರ್ಧ ಡಜನ್ ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
- ಸುಳ್ಳಿನ BJP ಪಕ್ಷಕ್ಕೆ ಮತ ಹಾಕಿದ್ರೆ ನಿಮ್ಮ ಮತಕ್ಕೆ ಗೌರವ ಬರುತ್ತಾ?- ಸಿಎಂ ಸಿದ್ಧರಾಮಯ್ಯ ಪ್ರಶ್ನೆ
ಬೆಂಗಳೂರು: ಮೋದಿ ಒಂದು ಸುಳ್ಳು ಹೇಳ್ತಾರೆ-ಅಮಿತ್ ಶಾ ಇನ್ನೊಂದು ಸುಳ್ಳು ಹೇಳ್ತಾರೆ-ನಿರ್ಮಲಾ ಸೀತಾರಾಮನ್ ಮತ್ತೊಂದು ಸುಳ್ಳು ಹೇಳ್ತಾರೆ. ಈ ಸುಳದಳಿನ ಪಾರ್ಟಿಗೆ ಮತ ಹಾಕಿದ್ರೆ ನಿಮ್ಮ ಮತಕ್ಕೆ ಗೌರವ ಬರ್ತದಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.
- ಬಳ್ಳಾರಿಯ ಮನೆಯೊಂದರಲ್ಲಿ ದಾಖಲೆಯಿಲ್ಲದ 5.60 ಕೋಟಿ ಹಣ, 3 ಕೆಜಿ ಬಂಗಾರ, 102 ಕೆಜಿ ಬೆಳ್ಳಿ ಜಪ್ತಿ
ಬಳ್ಳಾರಿ: ಜಿಲ್ಲೆಯಲ್ಲಿ ಮನೆಯೊಂದರಲ್ಲಿ ಇಟ್ಟುಕೊಂಡಿದ್ದಂತ ದಾಖಲೆಯಿಲ್ಲದ 5.60 ಕೋಟಿ ಹಣ, 3 ಕೆಜಿ ಬಂಗಾರ, 103 ಕೆಜಿ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆಯೊಂದರಲ್ಲಿ ದಾಖಲೆಯಿಲ್ಲದ ಹಣ, ಚಿನ್ನಾಭರಣ ಇರಿಸಿಕೊಂಡಿರೋ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಖಚಿತ ಮಾಹಿತಿಯ ಮೇರೆಗೆ ಬಳ್ಳಾರಿ ಡಿವೈಎಸ್ಪಿ ಮತ್ತು ಬ್ರೂಸ್ ಪೇಟೆಯ ಪೊಲೀಸರು ದಾಳಿ ನಡೆಸಿದ್ದಾರೆ.