ಬೆಂಗಳೂರು: ರಾಯದುರ್ಗ-ತುಮಕೂರು ಹೊಸ ಮಾರ್ಗದ ಭಾಗವಾಗಿ ರಾಯದುರ್ಗ ಯಾರ್ಡ್ ನಲ್ಲಿ ಎರಡನೇ ಹಂತದ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಈ ಕೆಳಗೆ ತಿಳಿಸಲಾದ ರೈಲು ಸೇವೆಗಳನ್ನು ರದ್ದು ಮತ್ತು ಬೇರೆ ಮಾರ್ಗದ ಮೂಲಕ ಸಂಚರಿಸಲಿವೆ.
• ರೈಲುಗಳ ಸಂಚಾರ ರದ್ದು: ರೈಲು ಸಂಖ್ಯೆ 07585 ಚಿಕ್ಕಜಾಜೂರು-ಗುಂತಕಲ್ ಡೈಲಿ ಪ್ಯಾಸೆಂಜರ್ ಸ್ಪೆಷಲ್ & ಗುಂತಕಲ್-ಚಿಕ್ಕಜಾಜೂರು (07586) ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲುಗಳ ಸಂಚಾರ ಆಗಸ್ಟ್ 8, 2024 ರಂದು ರದ್ದಾಗಲಿದೆ.
ರೈಲುಗಳ ಮಾರ್ಗ ಬದಲಾವಣೆ:
1. ಆಗಸ್ಟ್ 9 ರಂದು ಪ್ರಯಾಣ ಬೆಳೆಸುವ ರೈಲು ಸಂಖ್ಯೆ 06243 ಕೆಎಸ್ಆರ್ ಬೆಂಗಳೂರು-ಹೊಸಪೇಟೆ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಚಿಕ್ಕಜಾಜೂರ, ದಾವಣಗೆರೆ, ಅಮರಾವತಿ ಕಾಲೋನಿ, ಹೊಸಪೇಟೆ ಮಾರ್ಗದ ಮೂಲಕ ಸಂಚರಿಸಲಿದೆ. ಈ ರೈಲು ಚಿತ್ರದುರ್ಗದಿಂದ ತೋರಣಗಲ್ಲು ನಿಲ್ದಾಣಗಳವರೆಗೆ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.
2. ಆಗಸ್ಟ್ 9 ರಂದು ಪ್ರಯಾಣ ಬೆಳೆಸುವ ರೈಲು ಸಂಖ್ಯೆ 06244 ಹೊಸಪೇಟೆ-ಕೆಎಸ್ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ, ಚಿಕ್ಕಜಾಜೂರ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ತೋರಣಗಲ್ಲುನಿಂದ ಚಿತ್ರದುರ್ಗದವರೆಗೆ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.
BREAKING: ‘ಮುಡಾ ಅಕ್ರಮ’ದ ಬಗ್ಗೆ ರಾಜ್ಯಪಾಲರಿಗೆ ‘ವಿರೋಧ ಪಕ್ಷ’ಗಳಿಂದ ದೂರು
ಇನ್ಮುಂದೆ ನಿಮ್ಮ ಭೂಮಿಗೂ ಸಿಗುತ್ತೆ ʻಆಧಾರ್ʼ : ʻಭೂ ಆಧಾರ್ʼ ಕುರಿತು ಇಲ್ಲಿದೆ ಮಾಹಿತಿ | Bhu Aadhar yojana