ಬೆಂಗಳೂರು: ನಗರದ ಪತ್ರಿಕಾ ವಿತರಕರು ಮತ್ತು ಪತ್ರಿಕೆ ಹಂಚುವವರಿಗೆ ವಿಮಾ ಸೌಲಭ್ಯವನ್ನು ರಾಜ್ಯ ಸರ್ಕಾರ ಕಲ್ಪಿಸಿತ್ತು. ಈ ಯೋಜನೆಗೆ ನೋಂದಣಿಗಾಗಿ ಇಂದು ಕಾರ್ಯಕ್ರಮ ಆಯೋಜಿಸಲಾಗಿದೆ.
ಹೌದು ಬೆಂಗಳೂರು ನಗರ ಪತ್ರಿಕಾ ವಿತರಕರು ಮತ್ತು ಪತ್ರಿಕೆ ಹಂಚುವವರಿಗೆ ವಿಮಾ ಸೌಲಭ್ಯ ನೋಂದಣಿ ಕಾರ್ಯಕ್ರಮವನ್ನು ಜನವರಿ 11 ಇಂದು ಮತ್ತು ಜನವರಿ.12ರ ನಾಳೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡಿರುವಂತ ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರದ ಪತ್ರಿಕಾ ವಿತರಕರು, ಪತ್ರಿಕೆ ಹಂಚುವವರು ವಿಮಾ ಸೌಲಭ್ಯಕ್ಕಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.
ಜನವರಿ.11 ಮತ್ತು 12ರ ಇಂದು ಮತ್ತು ನಾಳೆ ಬೆಂಗಳೂರಿನ ಯಶವಂತಪುರದ ಎಪಿಎಂಸಿ ಯಾರ್ಡ್ ನ 6ನೇ ಮುಖ್ಯರಸ್ತೆಯಲ್ಲಿರುವ ಗಣೇಶ ದೇವಸ್ಥಾನ ಪಕ್ಕದ ಸಭಾಂಗಣದಲ್ಲಿ ವಿಮಾ ಸೌಲಭ್ಯಕ್ಕೆ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೋ ಬೆಂಗಳೂರು ನಗರದ ಪತ್ರಿಕಾ ವಿತರಕರು, ಹಂಚುವವರು ತಪ್ಪದೇ ಇಂದು ಮತ್ತು ನಾಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನೋಂದಾಯಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 9880217133 ಅಥವಾ 9972534666ಗೆ ಕರೆ ಮಾಡಿ.