ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಆಹಾರ ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಖಾತೆಗ ಹಣ ಬಾರದೇ ಇರುವವರು ತಪ್ಪದೇ ಈ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ.
ಸರ್ಕಾರದ ಗ್ಯಾರಂಟಿ ಯೋಜನೆಯಡಿ ಐದು ಕೆಜಿ ಅಕ್ಕಿ ಬದಲಾಗಿ ಪಡಿತರ ಚೀಟಿದಾರರಿಗೆ ನೇರ ನಗದು ವರ್ಗಾವಣೆ ಮಾಡುತ್ತಿದ್ದು, ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಹರಿಕೊಳ್ಳಬಹುದು.
ಇನ್ನು ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು.
ಪಡಿತರ ಚೀಟಿಯ ಈಕೆ ವೈಸಿ ಕಡ್ಡಾಯ ಮಾಡಬೇಕು.
ಕುಟುಂಬದ ಮುಖ್ಯಸ್ಥೆಯ ಬ್ಯಾಂಕ್ ಖಾತೆಯ ಈ ಕೆವೈಸಿ ಮಾಡಬೇಕು.
ಪಡಿತರ ಚೀಟಿ ಅಪ್ಡೇಟ್ ಅಪ್ ಡೇಟ್ ಮಾಡಬೇಕು.
ಈ ಮೇಲಿನ ಎಲ್ಲ ಸಮಸ್ಯೆಗಳನ್ನು ನೀವು ಪರಿಹರಿಸಿಕೊಂಡರೆ ನಿಮಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಖಾತೆಗೆ ಜಮಾ ಆಗಲಿದೆ.
ಕರ್ನಾಟಕ ಸರ್ಕಾರದ ವೆಬ್‌ಸೈಟ್ https://www.karnataka.gov.in/ ಗೆ ಭೇಟಿ ನೀಡಿ, E-services ಟ್ಯಾಬ್ ಮೇಲೆ ಕ್ಲಿಕ್ ಮಾಡಿ. DBT status ಲಿಂಕ್ ಅನ್ನು ಕ್ಲಿಕ್ ಮಾಡಿಕೊಳ್ಳಿ. ನಿಮ್ಮ ರೇಷನ್ ಕಾರ್ಡ್‌ನಲ್ಲಿ ಯಾವ ಸಮಯದ ಸ್ಟೇಟಸ್ ಚೆಕ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ, ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ನಂತರ Continue ಬಟನ್ ಕ್ಲಿಕ್ ಮಾಡಿ. ಅನ್ನಭಾಗ್ಯ ಯೋಜನೆಯಡಿ ನಿಮ್ಮ ಸ್ಟೇಟಸ್ ಹೇಗಿದೆ ಎಂದು ಸ್ಕ್ರೀನ್‌ನಲ್ಲಿ ತೋರಿಸಲಾಗುತ್ತದೆ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ನೀವು ಕರ್ನಾಟಕ ಸರ್ಕಾರದ ಸಹಾಯವಾಣಿ 1800-425-5889 ಸಂಪರ್ಕಿಸಬಹುದು.