ಬೆಂಗಳೂರು: ರಾಜ್ಯದ ಕಾರ್ಮಿಕರಿಗಾಗಿ ಸರ್ಕಾರದಿಂದ ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಲಾಗಿದೆ. ಈ ಸಹಾಯವಾಣಿ ಸಂಖ್ಯೆಗೆ ರಾಜ್ಯದ ಕಾರ್ಮಿಕರು ಕರೆ ಮಾಡಿದ್ರೇ, ಕಾರ್ಮಿಕರಿಗೆ ಸಿಗುವಂತ ಯೋಜನೆ, ಸೌಲಭ್ಯಗಳು ಸೇರಿದಂತೆ ಇತರೆ ಮಾಹಿತಿ ಲಭ್ಯವಾಗಲಿದೆ.
ಈ ಕುರಿತಂತೆ ಕಾರ್ಮಿಕ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಕಾರ್ಮಿಕ ಸಹಾಯವಾಣಿ ಸಂಖ್ಯೆ 155214ಗೆ ಕರೆ ಮಾಡಿ, ಕಾರ್ಮಿಕರಿಗೆ ಸಿಗುವಂತ ಯೋಜನೆ, ಸೌಲಭ್ಯ ಸೇರಿ ಇತರೆ ಮಾಹಿತಿ ನೀಡಲಾಗುತ್ತದೆ ಎಂದಿದೆ.
ಇನ್ನೂ ಕಾರ್ಮಿಕರಿಗೆ ಸಿಗುವಂತ ಆನ್ ಲೈನ್ ಸೇವೆಗಳು, ಸಾಮಾನ್ಯ ವಿಚಾರಣೆ, ಮಂಡಳಿಯ ಹೊಸ ಯೋಜನೆಗಳು, ಅರ್ಜಿ ವಿಚಾರಣೆ, ನೋಂದಣಿ ಕುರಿತಂತೆ ಮಂಡಳಿಯಿಂದ ಪಡೆಯಬಹುದಾದ ಸೌಲಭ್ಯಗಳ ಕುರಿತ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದಿದೆ.
ಮಂಡಳಿಯಿಂದ ಪಡೆಯಬಹುದಾದ ಸೌಲಭ್ಯಗಳು, ಯೋಜನೆಗಳ ಕುರಿತ ಮಾಹಿತಿಯನ್ನು ತಿಳಿಯಲು ಕಾರ್ಮಿಕ ಸಹಾಯವಾಣಿ 155214 ಗೆ ಕರೆ ಮಾಡಿ.#ಶ್ರಮಮೇವ_ಜಯತೇ#KBOCWWB #ಕಾರ್ಮಿಕ_ಇಲಾಖೆ pic.twitter.com/pNiCPW7hKC
— Construction Workers Welfare Board (@WorkersBoard) April 24, 2025
BREAKING : ‘ಭೂಮಿಯ ತುದಿಯವರೆಗೂ ಬೆನ್ನಟ್ಟಿ ಹುಡುಕಿ ಉಗ್ರರನ್ನು ಹೊಡೆಯುತ್ತೇವೆ’ : ಪ್ರಧಾನಿ ಮೋದಿ ಗುಡುಗು!