ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಸಿಕಂದರಾಬಾದ್-ವಾಸ್ಕೋ-ಡ-ಗಾಮಾ ನಿಲ್ದಾಣಗಳ ನಡುವೆ ಹೊಸ ರೈಲು ಸಂಚಾರ ಪ್ರಾರಂಭಗೊಂಡಿದೆ.
ಈ ಬಗ್ಗೆ ನೈರುತ್ಯ ರೈಲ್ವೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ತೆಲಂಗಾಣ ಮತ್ತು ಗೋವಾ ರಾಜ್ಯಗಳ ನಡುವಿನ ಪ್ರವಾಸೋದ್ಯಮ ಮತ್ತು ಸಂಪರ್ಕಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಸಿಕಂದರಾಬಾದ್ ಮತ್ತು ವಾಸ್ಕೋ-ಡ-ಗಾಮಾ ನಿಲ್ದಾಣಗಳ ನಡುವೆ ಹೊಸ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು (ರೈಲುಗಳ ಸಂಖ್ಯೆ 17039/17040) ಪರಿಚಯಿಸಲು ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ ಎಂದಿದೆ.
ನಿಯಮಿತ ಸೇವೆಯ ವಿವರ ಈ ಕೆಳಗಿನಂತಿವೆ:
1. ಅಕ್ಟೋಬರ್ 9, 2024 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 17039 ಸಿಕಂದರಾಬಾದ್-ವಾಸ್ಕೋ-ಡ-ಗಾಮಾ ಬೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲು ಸಿಕಂದರಾಬಾದ್‌ನಿಂದ ಪ್ರತಿ ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ 10:05 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 5:45 ಕ್ಕೆ ವಾಸ್ಕೋ-ಡ-ಗಾಮಾವನ್ನು ತಲುಪಲಿದೆ.
ಮಾರ್ಗದಲ್ಲಿ, ಈ ರೈಲು ಕಾಚಿಗುಡ (10:18/10:20 AM), ಶಾದ್‌ನಗರ (11:04/11:05 AM), ಜಡ್ಚೆರ್ಲಾ (11:37/11:38 AM), ಮಹಬೂಬ್‌ನಗರ (11:55/11:57 AM), ಗದ್ವಾಲ್ (12:49/12:50 PM), ಕರ್ನೂಲ್ ಸಿಟಿ (1:50/1:52 PM), ಡೋನ್ (3:20/3:25 PM), ಗುಂತಕಲ್ (4:50/5:05 PM), ಬಳ್ಳಾರಿ (6:35/6:40 PM), ಹೊಸಪೇಟೆ (7:50/7:55 PM), ಕೊಪ್ಪಳ (8:28/8:30 PM), ಗದಗ 9:32/9:34 PM), ಎಸ್ಎಸ್ಎಸ್ ಹುಬ್ಬಳ್ಳಿ (10:50/11:00 PM), ಧಾರವಾಡ (11:23/11:25 PM), ಲೋಂಡಾ (12:50/12:52 AM), ಕ್ಯಾಸಲ್ ರಾಕ್ (1 :30/1:40 AM), ಕುಲೆಮ್ (3:20/3:25 AM), ಸ್ಯಾಂವೊರ್ಡೆಮ್ (3:44/3:45 AM) ಮತ್ತು ಮಡಗಾಂವ್ (4:15/4:20 AM) ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸಲಿದೆ.
2. ಅಕ್ಟೋಬರ್ 10, 2024 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 17040 ವಾಸ್ಕೋ-ಡ-ಗಾಮಾ-ಸಿಕಂದರಾಬಾದ್ ಬೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲು ವಾಸ್ಕೋ-ಡ-ಗಾಮಾದಿಂದ ಪ್ರತಿ ಗುರುವಾರ ಮತ್ತು ಶನಿವಾರ ಬೆಳಿಗ್ಗೆ 9:00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 6:20 ಕ್ಕೆ ಸಿಕಂದರಾಬಾದ್ ನಿಲ್ದಾಣ ತಲುಪಲಿದೆ.
ಮಾರ್ಗದಲ್ಲಿ, ಈ ರೈಲು ಮಡಗಾಂವ್ (9:30/9:35 AM), ಸ್ಯಾಂವೊರ್ಡೆಮ್ (9:49/9:50 AM), ಕುಲೆಮ್ (10:15/10:20 AM), ಕ್ಯಾಸಲ್ ರಾಕ್ (11:30/11:35 AM), ಲೋಂಡಾ (12:10/12:12 PM), ಧಾರವಾಡ (1:38/1:40 PM), ಎಸ್ಎಸ್ಎಸ್ ಹುಬ್ಬಳ್ಳಿ (2:20/2:30 PM), ಗದಗ (3:30/3:32 PM), ಕೊಪ್ಪಳ (4:18/4:20 PM), ಹೊಸಪೇಟೆ (5:00/5:05 PM), ಬಳ್ಳಾರಿ (7:10/7:15 PM), ಗುಂತಕಲ್ 8:40/8:55 PM), ಡೋನ್ (10:50/10:55 PM), ಕರ್ನೂಲ್ ಸಿಟಿ (11:48/11:50 PM), ಗದ್ವಾಲ್ (12:49/12:50 AM), ಮಹಬೂಬ್‌ನಗರ (3 :38/3:40 AM), ಜಡ್ಚೆರ್ಲಾ (4:04/4:05 AM), ಶಾದ್‌ನಗರ (4:19/4:20 AM) ಮತ್ತು ಕಾಚಿಗುಡಾ (5:18/5:20 AM) ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸಲಿದೆ.
ಈ ರೈಲಿನಲ್ಲಿ ಫಸ್ಟ್ ಎಸಿ ಕ್ಲಾಸ್-1, ಎಸಿ 2-ಟೈರ್-2, ಎಸಿ 3-ಟೈರ್-3, ಎಸಿ 3-ಟೈರ್ ಎಕಾನಮಿ-2, ಸ್ಲೀಪರ್ ಕ್ಲಾಸ್-7, ಜನರಲ್ ಸೆಕೆಂಡ್ ಕ್ಲಾಸ್-4 ಮತ್ತು 2-ಬ್ರೇಕ್ ವ್ಯಾನ್ ಕಮ್ ಜನರೇಟರ್ ಕಾರುಗಳು ಸೇರಿದಂತೆ 21 ಆಧುನಿಕ ಎಲ್ ಎಚ್ ಬಿ ಬೋಗಿಗಳು ಇರಲಿವೆ.
ಈ ಹೊಸ ರೈಲು ಸೇವೆಯು ಪ್ರವಾಸಿಗರಿಗೆ ಮತ್ತು ಸ್ಥಳೀಯ ಪ್ರಯಾಣಿಕರಿಗೆ ತಡೆರಹಿತ ಸಂಪರ್ಕವನ್ನು ನೀಡುತ್ತದೆ, ಎರಡು ಸಾಂಸ್ಕೃತಿಕವಾಗಿ ಶ್ರೀಮಂತ ಪ್ರದೇಶಗಳ ನಡುವೆ ಅನುಕೂಲಕರ ಸಂಪರ್ಕವನ್ನು ಒದಗಿಸುತ್ತದೆ ಎಂದು ನೈರುತ್ಯ ರೈಲ್ವೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆಭರಣ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: 10 ಗ್ರಾಂ ಚಿನ್ನದ ದರ ದಾಖಲೆಯ 78,700ಕ್ಕೆ ಏರಿಕೆ | Gold prices
BREAKING: ಜಾತಿಗಣತಿ ವರದಿ ಜಾರಿ ವಿಚಾರ: ಅ.18ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ- ಸಿಎಂ ಸಿದ್ಧರಾಮಯ್ಯ
ಜಾತಿಗಣತಿ ವರದಿ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ: HDK ಸವಾಲು