ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ, ಬಿಎಂಟಿಸಿಯಿಂದ ಹೊಸ ಮೆಟ್ರೋ ಫೀಡರ್ ಮಾರ್ಗದ ಪರಿಚಯಿಸಲಾಗುತ್ತಿದೆ. ಈ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಅನುಕೂಲ ಮಾಡಿಕೊಟ್ಟಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಟಿಸಿ ಮಾಹಿತಿ ನೀಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮಧಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.
ಬೆಂ.ಮ.ಸಾ.ಸಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣರಹಿತ ಸೇವೆಯಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ದಿನಾಂಕ 15.07.2024 ರಿಂದ ಪರಿಚಯಿಸಲಾಗುತ್ತಿದೆ. ವಿವರ ಕೆಳಕಂಡಂತಿದೆ:
ಕ್ರ.ಸಂ. | ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸುಗಳ ಸಂಖ್ಯೆ/ಸುತ್ತುವಳಿ
|
1 | ಎಂಎಫ್-43 | ಕೋಣನಕುಂಟೆ ಕ್ರಾಸ್ | ಕೋಣನಕುಂಟೆ ಕ್ರಾಸ್ | ಉತ್ತರಹಳ್ಳಿ, ಇಂಡೋ ಅಮೇರಿಕನ್ ಹೈಬ್ರೀಡ್ ಕ್ರಾಸ್, ಕರಿಯನ ಪಾಳ್ಯ, ರಘುವನಹಳ್ಳಿ ಕ್ರಾಸ್ | 1 ಬಸ್ಸು
10ಸುತ್ತುವಳಿಗಳು
|
2 | ಎಂಎಫ್-43ಎ | ಕೋಣನಕುಂಟೆ ಕ್ರಾಸ್ | ಕೋಣನಕುಂಟೆ ಕ್ರಾಸ್ | ರಘುವನಹಳ್ಳಿ ಕ್ರಾಸ್, ಕರಿಯನ ಪಾಳ್ಯ, ಇಂಡೋ ಅಮೇರಿಕನ್ ಹೈಬ್ರೀಡ್ ಕ್ರಾಸ್, ಉತ್ತರಹಳ್ಳಿ | 1 ಬಸ್ಸು
10 ಸುತ್ತುವಳಿಗಳು
|
ಸದರಿ ಮಾರ್ಗದ ವೇಳಾಪಟ್ಟಿ ವಿವರಗಳು ಈ ಕೆಳಗಿನಂತಿದೆ.
ಮಾರ್ಗ ಸಂಖ್ಯೆ ಎಂ.ಎಫ್-43
ಕೋಣನಕುಂಟೆ ಕ್ರಾಸ್ ಬಿಡುವ ವೇಳೆ |
0735,0830,0925,1055,1150,1245,1340,1510,1605,1710 |
ಮಾರ್ಗ ಸಂಖ್ಯೆ ಎಂ.ಎಫ್-43ಎ
ಕೋಣನಕುಂಟೆ ಕ್ರಾಸ್ ಬಿಡುವ ವೇಳೆ |
0805,0900,0955,1125,1220,1315,1410,1540,1635,1740 |
ಹಾಲು ಉತ್ಪಾದಕರ ಸ್ನೇಹಿಯಾಗಿರುವ ‘ಸಾಫ್ಟ್ ವೇರ್’ ಅಳವಡಿಸಿ: ‘KMF ಎಂಡಿ’ಗೆ ಸಿಎಂ ಸಿದ್ಧರಾಮಯ್ಯ ಸೂಚನೆ
BIG NEWS: ‘ರಾಜ್ಯ ಸರ್ಕಾರ’ದಿಂದ ಮಹಾ ಎಡವಟ್ಟು: ‘ಸತ್ತ ಅಧಿಕಾರಿ’ಯನ್ನೇ ವರ್ಗಾವಣೆ