ಶಿವಮೊಗ್ಗ : ಮಕ್ಕಳ ಮಾನಸಿಕ ದೃಢತೆ ಹೆಚ್ಚಾಗಲು ಓದಿನ ಜೊತೆಗೆ ಕ್ರೀಡೆಯೂ ಕಾರಣವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಮಾನಸಿಕ ದೃಢತೆಯನ್ನು ಹೆಚ್ಚಿಸಿಕೊಳ್ಳಲು ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳುವಂತೆ ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸಲಹೆ ಮಾಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಗತಿ ಸಂಯುಕ್ತ ಪ್ರೌಢಶಾಲೆಯ ಶಾಲಾವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪ್ರಗತಿ ಸಂಯುಕ್ತ ಶಾಲೆ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 17 ವರ್ಷದೊಳಗಿನ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಓದಿನ ಜೊತೆ ಕ್ರೀಡೆಯಲ್ಲೂ ಆಸಕ್ತಿ ಇರಿಸಿಕೊಳ್ಳಿ. ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ಥಿತಿ ಸುಧಾರಣೆಗೆ ಸರ್ಕಾರ ಪೌಷ್ಟಿಕ ಆಹಾರವಾಗಿ ಮೊಟ್ಟೆ, ಚುಕ್ಕಿ, ಬಾಳೆಹಣ್ಣು ನೀಡುತ್ತಿದೆ. ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ದಿಗೆ ಅಗತ್ಯ ಸೌಲಭ್ಯವನ್ನು ನೀಡಲಾಗುತ್ತಿದೆ. ಇಂತಹ ಕ್ರೀಡಾಕೂಟಗಳಿಗೆ ಸರ್ಕಾರ ಸಹಾಯಧನ ಕಡಿಮೆ ಕೊಡುತ್ತದೆ. ಆದರೆ ದಾನಿಗಳು, ಸಂಘ-ಸoಸ್ಥೆಗಳ ಸಹಕಾರದಿಂದ ಕಾರ್ಯಕ್ರಮಗಳು ಯಶಸ್ಸು ಕಾಣುತ್ತದೆ ಎಂದರು.
ಜಿಲ್ಲಾಮಟ್ಟದ ಪಂದ್ಯಾವಳಿ ನಡೆಯುವಾಗ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಯಾವ್ಯಾವ ಅಧಿಕಾರಿಗಳು ಗೈರಾಗಿದ್ದಾರೋ ಅವರಿಗೆ ನೋಟಿಸ್ ನೀಡಲು ಶಿಕ್ಷಣಾಧಿಕಾರಿಗಳಿಗೆ ಸ್ಥಳದಲ್ಲಿ ಸೂಚನೆ ನೀಡಿದ ಅವರು, ದೈಹಿಕ ಶಿಕ್ಷಕರ ನೇಮಕಾತಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಮಲೆನಾಡು ಅಭಿವೃದ್ದಿ ಪ್ರತಿಷ್ಟಾನದ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಶಾಸಕರು ಶೈಕ್ಷಣಿಕ ಕ್ಷೇತ್ದ ಅಭಿವೃದ್ದಿಗೆ ಅಗತ್ಯ ಸಹಕಾರ ನೀಡುತ್ತಿದ್ದಾರೆ. ಅದನ್ನು ಮಕ್ಕಳು ಸದ್ಭಳಕೆ ಮಾಡಿಕೊಳ್ಳಬೇಕು. ಬದುಕಿಗೆ ಓದು ಎಷ್ಟು ಮುಖ್ಯವೋ, ಕ್ರೀಡೆ ಸಹ ಅಷ್ಟೆ ಮುಖ್ಯವಾಗಿದೆ. ಕ್ರೀಡೆ ಮನಸ್ಸಿನ ಆರೋಗ್ಯವನ್ನು ಕಾಯುತ್ತದೆ. ಕ್ರೀಡಾಪಟುಗಳಿಗೆ ಸೋಲುಗೆಲುವು ಮುಖ್ಯವಲ್ಲ. ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸುವುದನ್ನು, ಸೌಹಾರ್ಧತೆಯನ್ನು ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಾಗರ ತಾಲ್ಲೂಕು ಬಿಇಓ ಪರಶುರಾಮಪ್ಪ ಈ., ಸೂರ್ಯನಾರಾಯಣ ಖಂಡಿಕಾ, ಸತ್ಯನಾರಾಯಣ, ನಗರಸಭಾ ಸದಸ್ಯ ಗಣಪತಿ ಮಂಡಗಳಲೆ, ಭೂಮೇಶ್, ಸೈಯದ್ ಜಾಕೀರ್, ಸುಬ್ರಹ್ಮಣ್ಯ, ರಮೇಶ್, ವಿಜಯಲಕ್ಷಿ ,ಡಾ. ಟಿ.ಎಸ್.ರಾಘವೇಂದ್ರ. ಎಂ.ಪ್ರಕಾಶ್ , ಅವನಿ, ಶಂಕರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಹಿಳಾ ನೌಕರರಿಗೆ ಮುಟ್ಟಿನ ರಜೆ: ಸಿಎಂ, ಡಿಸಿಎಂಗೆ ಸಾಗರದ ಸರ್ಕಾರಿ ನೌಕರರ ಸಂಘದ ಮಹಿಳಾ ಪದಾಧಿಕಾರಿಗಳು ಧನ್ಯವಾದ
ಹೀಗಿದೆ ಇಂದಿನ ‘ರಾಜ್ಯ ಸಚಿವ ಸಂಪುಟ ಸಭೆ’ಯ ಸಂಪೂರ್ಣ ಹೈಲೈಟ್ಸ್ | Karnataka Cabinet Meeting