ನವದೆಹಲಿ: ‘ಉಂಗಲುಂಡನ್ ಸ್ಟಾಲಿನ್’ ಯೋಜನೆಯಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಅವರ ಹೆಸರು ಮತ್ತು ಚಿತ್ರವನ್ನು ಬಳಸುವುದನ್ನು ನಿಷೇಧಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ ಮತ್ತು ಎಡಿಎಂಕೆ ಸಂಸದ ಸಿ.ವಿ.ಷಣ್ಮುಗಂ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ
ರಾಜಕೀಯ ಲಾಭಕ್ಕಾಗಿ ನ್ಯಾಯಾಲಯಗಳನ್ನು ಬಳಸಿಕೊಂಡಿದ್ದಕ್ಕಾಗಿ ಎಡಿಎಂಕೆ ಸಂಸದರಿಗೆ ಸುಪ್ರೀಂ ಕೋರ್ಟ್ 10 ಲಕ್ಷ ರೂ.ಗಳ ದಂಡ ವಿಧಿಸಿದೆ. ಎಡಿಎಂಕೆ ಸಂಸದ ಸಿ.ವಿ.ಷಣ್ಮುಗಂ ಅವರು ಒಂದು ವಾರದೊಳಗೆ 10 ಲಕ್ಷ ರೂ.ಗಳನ್ನು ತಮಿಳುನಾಡು ಸರ್ಕಾರಕ್ಕೆ ಜಮಾ ಮಾಡಬೇಕು ಮತ್ತು ಈ ಮೊತ್ತವನ್ನು ದೀನದಲಿತರ ಯೋಜನೆಗೆ ಬಳಸಬಹುದು ಎಂದು ನ್ಯಾಯಾಲಯ ನಿರ್ದೇಶಿಸಿದೆ