ತಿರುಪತಿ: ತಿರುಪತಿ ತಿರುಮಲ ದೇವಸ್ಥಾನದಲ ಲಡ್ಡು ಪ್ರಸಾದದಲ್ಲಿ ಕೊಬ್ಬು ಬಳಕೆ ಆಗಿರುವುದು ನಿಜವೆಂಬುದಾಗಿ ಟಿಟಿಡಿ ತಪ್ಪೊಪ್ಪಿಕೊಂಡಿದೆ. ಅಲ್ಲದೇ ಕಲಬೆರೆಕೆ ತುಪ್ಪ ಬಳಕೆಯಿಂದಲೇ ಲಡ್ಡು ಪ್ರಸಾದಲ್ಲಿ ದನದ ಕೊಬ್ಬು ಮಿಕ್ಸ್ ಆಗಲು ಕಾರಣ ಎಂಬುದಾಗಿ ಟಿಟಿಡಿ ಕಾರ್ಯಕಾರಿ ಅಧಿಕಾರಿ ಶ್ಯಾಮಲಾ ರಾವ್ ಸ್ಪಷ್ಟ ಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ತಿರುಪತಿ ತಿಮ್ಮಪ್ಪನ ಪ್ರಸಾದವಾಗಿರುವಂತ ಲಡ್ಡು ಪ್ರಸಾದ ತಯಾರಿಕೆಗಾಗಿ ಈ ಮೊದಲು ಕಂಪನಿಯೊಂದರಿಂದ ತುಪ್ಪವನ್ನು ಖರೀದಿಸಲಾಗುತ್ತಿತ್ತು. ಆ ತುಪ್ಪ ಕಲಬೆರೆಕೆಯಿಂದ ಕೂಡಿದ್ದೇ ವಿವಾದಕ್ಕೆ ಕಾರಣವಾಗಿದೆ ಎಂಬುದಾಗಿ ತಿಳಿಸಿದರು.
ತುಪ್ಪ ಕಲಬೆರೆಕೆಯ ಬಗ್ಗೆ ಸರ್ಕಾರಿ ಲ್ಯಾಬ್ ಗೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ಲಡ್ಡು ತಯಾರಿಕೆಗೆ ಬಳಸುತ್ತಿದ್ದಂತ ತುಪ್ಪದಲ್ಲಿ ದನದ ಕೊಬ್ಬು ಸೇರಿಸುವಂತ ಅಂಶವಿರುವ ವರದಿಯನ್ನು ನೋಡಿ ನಾವು ಶಾಕ್ ಆದೆವು ಎಂದಿದ್ದಾರೆ.
ಕಲಬೆರೆಕೆ ತುಪ್ಪವನ್ನು ಸರಬರಾಜು ಮಾಡಿದಂತ ಕಂಪನಿಯನ್ನು ಬ್ಲಾಕ್ ಲೀಸ್ಟ್ ಗೆ ಹಾಕಲಾಗಿದೆ. ಅತ್ಯಂತ ಕೆಳ ಮಟ್ಟದ ತುಪ್ಪವನ್ನು ಸರಬರಾಜು ಮಾಡಿದಂತ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದಾಗಿ ಟಿಟಿಡಿ ಕಾರ್ಯಕಾರಿ ಅಧಿಕಾರಿ ಶ್ಯಾಮಲಾ ರಾವ್ ತಿಳಿಸಿದರು.
ಒಟ್ಟಾರೆಯಾಗಿ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬಿನ ಅಂಶವು ಇರುವುದನ್ನು ಟಿಟಿಡಿ ತಪ್ಪೊಪ್ಪಿಕೊಂಡಿದೆ. ಆದರೇ ಇದಕ್ಕೆ ಕಾರಣ ಕಲಬೆರೆಕೆಯ ತುಪ್ಪವೇ ಕಾರಣ ಎಂಬುದಾಗಿ ಸ್ಪಷ್ಟ ಪಡಿಸಿದೆ.
‘ಇ-ಖಾತಾ ಯೋಜನೆ’ಗೂ ಮುನ್ನವೇ 21 ಲಕ್ಷ ಆಸ್ತಿಗಳ ‘GPS ತಂತ್ರಾಂಶ’ದಲ್ಲಿ ದಾಖಲಿಸಿದ ‘BBMP’ | BBMP e-Khata
BIG NEWS : 3 ತಿಂಗಳಲ್ಲಿ ಪ್ರಪಂಚದ ವಿನಾಶ ಪ್ರಾರಂಭವಾಗುತ್ತದೆ : `ಬಾಬಾ ವಂಗಾ’ ಶಾಕಿಂಗ್ ಭವಿಷ್ಯವಾಣಿ!