ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌: ಮಳೆಗಾಲದಲ್ಲಿ ಅಂತೂ ಮನೆಯ ಸುತ್ತಮುತ್ತ ಕೀಟಗಳೇ ಜಾಸ್ತಿಯಾಗುತ್ತದೆ. ಇದು ಮನೆಯ ಒಳಗೂ ಕೂಡ ಕಾಣಿಸಿಕೊಳ್ಳುತ್ತದೆ. ಇವುಗಳನ್ನು ಹೊಗಲಾಡಿಸಲು ಸಿಕ್ಕಾಪಟ್ಟೆ ಕಸರತ್ತು ಮಾಡಲಾಗಿದೆ.

BIGG NEWS: ಟಿಕ್‌ ಟಾಕ್‌ ಬಳಕೆದಾರರಿಗೆ ಗುಡ್‌ ನ್ಯೂಸ್;‌ ಮತ್ತೆ ಟಿಕ್‌ ಟಾಕ್‌, ಬಿಜಿಎಂಐ ಭಾರತಕ್ಕೆ ವಾಪಸ್?

 

ಈ ಸಮಯದಲ್ಲಿ ಸೊಳ್ಳೆ, ನೊಣ, ಇರುವೆ, ಜಿರಳೆಗಳ ಕಾಟವೇ ಹೆಚ್ಚಾಗಿರುತ್ತದೆ. ದರಿಂದ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಹೀಗೆ ಕೀಟಗಳು ಮನೆಗೆ ಬರದಂತೆ ತಡೆಯಲು ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್.

*ಕರ್ಪೂರ: ಮನೆಯಲ್ಲಿ ಕೀಟಗಳು ತೊಡೆದುಹಾಕಲು ಕರ್ಪೂರ ಬಹಳ ಪರಿಣಾಮಕಾರಿಯಾಗಿದೆ. ಮನೆ ಒಳಗೆ 2-3 ಕಡೆಗಳಲ್ಲಿ ಪುಡಿ ಮಾಡಿದ ಕರ್ಪೂರಗಳನ್ನು ಇಟ್ಟರೆ ಅದರ ವಾಸನೆಗೆ ಕೀಟಗಳು ಬರುವುದಿಲ್ಲ. ಹತ್ತಿ ಉಂಡೆಯನ್ನು ಎಣ್ಣೆಯಲ್ಲಿ ನೆನೆಸಿ ಮತ್ತು ಅದನ್ನು ಗೋಡೆಗಳ ಬಳಿ ಇಟ್ಟರೆ ಕೀಟಗಳು ಬರುವುದನ್ನು ತಡೆಯುತ್ತದೆ.

BIGG NEWS: ಟಿಕ್‌ ಟಾಕ್‌ ಬಳಕೆದಾರರಿಗೆ ಗುಡ್‌ ನ್ಯೂಸ್;‌ ಮತ್ತೆ ಟಿಕ್‌ ಟಾಕ್‌, ಬಿಜಿಎಂಐ ಭಾರತಕ್ಕೆ ವಾಪಸ್?

 

*ಹೂಗಳ ವಾಸನೆಯಿಂದ ಕೀಟಗಳು ದೂರ ಇರಿ: ಕೀಟಗಳಿಗೆ ಕೆಲವೊಂದು ಹೂವಿನ ವಾಸನೆ ಇಷ್ಟವಾಗುವುದಿಲ್ಲ. ಆದ್ದರಿಂದ ಮಾರಿಗೋಲ್ಡ್, ಲ್ಯಾವೆಂಡರ್​​​​​​​​, ಪಟೋನಿಯಾ ಹೂಗಳನ್ನು ಮನೆಯ ಕೆಲವೊಂದು ಭಾಗಗಳಲ್ಲಿ ಇರಿಸಿದರೆ ಮಿಡತೆ, ಜಿರಳೆ, ಸಣ್ಣ ಹುಳುಗಳು ಮನೆಯೊಳಗೆ ಬರುವುದಿಲ್ಲ.

BIGG NEWS: ಟಿಕ್‌ ಟಾಕ್‌ ಬಳಕೆದಾರರಿಗೆ ಗುಡ್‌ ನ್ಯೂಸ್;‌ ಮತ್ತೆ ಟಿಕ್‌ ಟಾಕ್‌, ಬಿಜಿಎಂಐ ಭಾರತಕ್ಕೆ ವಾಪಸ್?

*ಮನೆಯನ್ನು ಸ್ವಚ್ಛಗೊಳಿಸಿ: ಮನೆ ಸ್ವಚ್ಛವಾಗಿರದಿದ್ದರೆ ಕೂಡಾ ಕೀಟ, ಜೇಡಗಳು ಕಟ್ಟುತ್ತವೆ. ಎಲ್ಲೆಂದರಲ್ಲಿ ಸಾಮಾನುಗಳನ್ನು ಜೋಡಿಸುವುದು, ಮೂಟೆಗಳನ್ನು ಇಡುವುದು, ಕಸ ಹಾಕುವುದು ಮಾಡಿದರೆ ಸಂದುಗಳಲ್ಲಿ ಕೀಟಗಳು, ಜಿರಳೆಗಳು ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ಮನೆಯಲ್ಲಿ ಅನಾವಶ್ಯಕ ವಸ್ತುಗಳನ್ನು ದೂರವಿಡಿ.
*ವಿನಿಗರ್​​​​​​​​​​​: ಮನೆಯನ್ನು ಸ್ವಚ್ಛಗೊಳಿಸುವಾಗ ವಿನಿಗರ್​​​​​ನಲ್ಲಿ ಸ್ವಲ್ಪ ನೀರು ಸೇರಿಸಿದರೆ ಇರುವೆಗಳು ಮತ್ತು ಜೇಡಗಳು ಬರುವುದಿಲ್ಲ. ವಿನಿಗರ್ ಜೊತೆಗೆ ಬೇವಿನ ಎಲೆಗಳನ್ನು ಪುಡಿಮಾಡಿ ಒರೆಸುವ ನೀರಿನಲ್ಲಿ ಬೆರೆಸಬಹುದು.

Share.
Exit mobile version