ಬೆಂಗಳೂರು: ನಗರದಲ್ಲಿ ಪತ್ನಿ ಕಿರುಕುಳದಿಂದ ಪತಿ ಸಾವನ್ನಪ್ಪಿದ ಘಟನೆಗಳು ಅನೇಕವು ದಾಖಲಾಗಿದ್ದವು. ಈ ಬೆನ್ನಲ್ಲೇ ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ನಡೆದಿದೆ.
ಬೆಂಗಳೂರಿನ ಗೋವಿಂದರಾಜನಗರದಲ್ಲಿ ಪತಿಯ ಕಿರುಕುಳ, ಹಿಂಸೆಗೆ ಬೇಸತ್ತು ರೇಖಾ ಮಾಯಪ್ಪ ನಂದಿ(25) ಎಂಬಾಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ವರದಕ್ಷಿಣೆ ತರುವಂತೆ ಪತಿ ಮಾಯಪ್ಪ ದಿನವೂ ಕಿರುಕುಳ ನೀಡುತ್ತಿದ್ದರಂತೆ. ಅವರ ಕಿರುಕುಳ, ಹಿಂಸೆ ಸಹಿಸಲಾರದೇ ಇಬ್ಬರು ಮಕ್ಕಳನ್ನು ಬಿಟ್ಟು ರೇಖಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಂದಹಾಗೇ ರೇಖಾ ಪತಿ ಮಾಯಪ್ಪ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಮಾರ್ಷಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತಿ ಚಿತ್ರಹಿಂಸೆಯಿಂದ ರೇಖಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಬಳಿಕ ಮಾಯಪ್ಪ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Health Tips: ಫ್ರಿಡ್ಜ್‌ನಲ್ಲಿಟ್ಟ ಹಿಟ್ಟನ್ನು ಬಳಸುವುದು ಸುರಕ್ಷಿತವೇ ?
ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕರೆಂಟ್ ಇರಲ್ಲ | Power Cut








