ಬೆಂಗಳೂರು : ಬೆಂಗಳೂರಿಗರು ಈ ಚಳಿಗಾಲದಲ್ಲಿಯೂ ಕ್ರಿಸ್ ಮಸ್ ಸಂಭ್ರಮದ ಬೆಚ್ಚನೆಯ ಅನುಭವವನ್ನು ಪಡೆದುಕೊಳ್ಳಲಿ ಎಂಬ ಕಾರಣಕ್ಕೆ ‘ಟಿರಾ’ದಿಂದ ಸೌಂದರ್ಯ, ಆಹಾರ, ಸಂಗೀತ ಮತ್ತು ಕ್ರಿಯೇಟಿವ್ ಕಾರ್ಯಾಗಾರವನ್ನು ಒಟ್ಟಾಗಿ ತರಲಾಗಿದೆ. ಆರಂಭದ ವಾರಾಂತ್ಯಕ್ಕೆ ಹಬ್ಬದ ಸಂಭ್ರಮ, ಔತಣ, ನೇರ ಪ್ರದರ್ಶನಗಳು, ಸುಂದರ ಕ್ಷಣಗಳು ಮತ್ತು ಖುಷಿ ತರುವ ಕ್ರಿಸ್ ಮಸ್ ಟ್ರೀ ಲೈಟಿಂಗ್ ಜೊತೆಗೆ ಅತಿಥಿಗಳು ಆನಂದವನ್ನು ಅನುಭವಿಸುವ ಕ್ಷಣಗಳನ್ನು ಉಣಬಡಿಸಲಾಯಿತು. ಈ ಸಂಭ್ರಮಾಚರಣೆಯು ಹಬ್ಬದ ಅನುಭವನ್ನು ವಿಸ್ತರಿಸಿದೆ. ಇದರೊಂದಿಗೆ ಯಾರೆಲ್ಲ ಮಾಲ್ ಗೆ ಭೇಟಿ ನೀಡುತ್ತಾರೋ ಅವರೆಲ್ಲರೂ ಜನವರಿಯ ಮೊದಲ ವಾರದ ತನಕ ಈ ಹಬ್ಬದ ಸಂಭ್ರಮವನ್ನು ಆನಂದಿಸುತ್ತಾರೆ.
ಟಿರಾ ಕೆಫೆಗಳಲ್ಲಿಯ ಆಕ್ಟಿವಿಟಿ ಝೋನ್ ಮತ್ತು ಟಿರಾ ಸ್ಟೋರ್ ನಲ್ಲಿ ಈ ಹಬ್ಬದ ಋತುವಿನ ಪೂರ್ತಿಯಾಗಿ ಇಂಟರಾಕ್ಟಿವ್ ಹಾಗೂ ರಿವಾರ್ಡ್ ದೊರೆಯುವಂಥ ಚಟುವಟಿಕೆಗಳನ್ನು ಟಿರಾದಿಂದ ಆಯೋಜಿಸಲಾಗಿದೆ. ಕೇವಲ 150 ರೂಪಾಯಿಗೆ ಕ್ರಿಸ್ ಮಸ್ ಥೀಮ್ ಇರುವಂಥ ಆಹಾರ ಹಾಗೂ ಪಾನೀಯವನ್ನು ಟಿರಾ ಕೆಫೆಯಿಂದ ನೀಡಲಾಗುತ್ತದೆ.
ಹೀಗೆ ಪ್ರತಿ ಖರೀದಿಗೆ ಅದೇ ಬೆಲೆಯ ವೋಚರ್ ನೀಡಲಾಗುತ್ತದೆ. ಅದನ್ನು ಟಿರಾ ಸ್ಟೋರ್ ನಲ್ಲಿ ರಿಡೀಮ್ ಮಾಡಿಕೊಳ್ಳಬಹುದು. ಅದರ ಜೊತೆಗೆ ಹಬ್ಬದ ಕರಕುಶಲ ಚಟುವಟಿಕೆಗೂ ಪ್ರವೇಶ ದೊರೆಯುತ್ತದೆ. ಆ ಸ್ಥಳಕ್ಕೆ ಹೊಂದಿಕೊಂಡಂತೆ ಇರುವ ಸೌಂದರ್ಯ ಕೇಂದ್ರದಲ್ಲಿ (ಬ್ಯೂಟಿ ಸ್ಟೇಷನ್) ತಕ್ಷಣವೇ ಸೌಂದರ್ಯ ವೃದ್ಧಿಸುವ ಕ್ಷಣಗಳು ಸಹ ಲಭ್ಯವಿವೆ. ಇದರೊಂದಿಗೆ ರಜಾದ ಮನಸ್ಥಿತಿಯನ್ನು ಇನ್ನೂ ಎತ್ತರಕ್ಕೆ ಒಯ್ಯುತ್ತದೆ.
ಗ್ರಾಹಕರಿಗೆ ಸಂತೋಷವನ್ನು ಮತ್ತೂ ವಿಸ್ತರಿಸುವುದಕ್ಕೆ ಅವಕಾಶಗಳಿದ್ದು, ಹಬ್ಬಕ್ಕಾಗಿಯೇ ಕಾರ್ಯಾಗಾರಗಳು ಇರುತ್ತವೆ. ಬಾಬಲ್ ಡೆಕೊರೇಷನ್, ಸ್ಟಾಕಿಂಗ್ ಡೆಕೊರೇಷನ್, ಜಿಂಜರ್ ಬ್ಯಾಂಡ್ ಮನೆ ರೂಪಿಸುವುದು, ಕುಕಿ ಡೆಕೊರೇಷನ್ ಮತ್ತು ಟೋಟ್ ಪರ್ಸನಲೈಸೇಷನ್ ಇವೆಲ್ಲ ಇಡೀ ವಾರದ ಪೂರ್ತಿ ವ್ಯಾಪಿಸಿರುತ್ತದೆ. ಟಿರಾ ಸ್ಟೋರ್ ನಲ್ಲಿ ಖರೀದಿ ಮಾಡುವ ಗ್ರಾಹಕರೂ ರೋಮಾಂಚನ ತರುವಂಥದ್ದನ್ನು ಪಡೆದುಕೊಳ್ಳುತ್ತಾರೆ.
2500 ರೂಪಾಯಿ ಖರ್ಚು ಮಾಡುವ ಗ್ರಾಹಕರು ತಮ್ಮ ಅದೃಷ್ಟವನ್ನು ಕ್ಲಾ ಮಶೀನ್ ನಲ್ಲಿ ಪರೀಕ್ಷಿಸುವುದಕ್ಕೆ ಒಂದು ಅವಕಾಶ ಪಡೆಯುತ್ತಾರೆ. ಇನ್ನು 4000 ರೂಪಾಯಿಗೆ ಖರೀದಿ ಮಾಡಿದಲ್ಲಿ ಬ್ಯೂಟಿ ಹ್ಯಾಂಪರ್ ಪಡೆಯುವ ಅವಕಾಶ ತಮ್ಮದಾಗಿಸಿಕೊಳ್ಳುತ್ತಾರೆ. ಇದರ ಜೊತೆಗೆ ಸ್ಟೋರ್ ನಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಕೆಫೆಯಿಂದ ಒಂದು ಕಾಂಪ್ಲಿಮೆಂಟರಿ ಐಟಮ್ ದೊರೆಯುತ್ತದೆ.
ಈ ಋತುವಿನಲ್ಲಿನ ಟ್ರೀಟ್ ಗಳು, ಕರಕುಶಲ ಚಟುವಟಿಕೆಗಳು, ಶೀಘ್ರವಾದ ಸೌಂದರ್ಯ ಸೇವೆಗಳು, ಚಂದದ ಆಟಗಳು ಮತ್ತು ರೀಟೇಲ್ ಟಚ್ ಪಾಯಿಂಟ್ಸ್ ಗಳಿಂದ ದೊರೆಯುವ ರಿವಾರ್ಡ್ ಗಳು- ಇವೆಲ್ಲ ಸೇರಿ ಬೆಂಗಳೂರಿಗರು ಇನ್ನೂ ಹೆಚ್ಚು ಸಂಭ್ರಮ ಹಾಗೂ ಖುಷಿಯಿಂದ, ಕ್ರಿಯೇಟಿವ್ ಆಗಿ, ಹಬ್ಬದ ಸಂತಸದೊಂದಿಗೆ ಆಚರಿಸುವುದಕ್ಕೆ ಟಿರಾ ಆಹ್ವಾನ ನೀಡುತ್ತದೆ. ಬೆಂಗಳೂರಿನ ನೆಕ್ಸಸ್ ಮಾಲ್‌ನಲ್ಲಿ ಇರುವ ಟಿರಾಗೆ ಭೇಟಿ ನೀಡಿ ಮತ್ತು ಈ ಕ್ರಿಸ್‌ಮಸ್ ಋತುವಿನಲ್ಲಿ ಹಬ್ಬದ ಆಚರಣೆಗಳಲ್ಲಿ ಭಾಗಿಯಾಗಿರಿ.
BREAKING: ಪೋಷಕರ ಹತ್ಯೆ ಪ್ರಕರಣದಲ್ಲಿ ಹಾಲಿವುಡ್ ನಿರ್ದೇಶಕ, ನಟ ರಾಬ್ ರೀನರ್ ಪುತ್ರ ನಿಕ್ ಬಂಧನ | Rob Reiner
ನೀವು ಈ ತಪ್ಪು ಮಾಡ್ತಿದ್ದೀರಾ.? ಎಚ್ಚರ, ನಿಮ್ಮ ‘IRCTC’ ಖಾತೆ ಬ್ಯಾನ್ ಆಗುತ್ತೆ! 3 ಕೋಟಿಗೂ ಹೆಚ್ಚು ಖಾತೆ ನಿರ್ಬಂಧ








