ಬೆಂಗಳೂರು: ನಿಮ್ಮ ಕಾಲೇಜಿನಲ್ಲಿ ಓದುವ ಹುಡುಗಿ ಅಥವಾ ಹುಡುಗನ ಮೇಲೆ ನಿಮಗೆ ಮನಸ್ಸಾಗಿದ್ದರೆ, ಅವರೊಂದಿಗೆ ಸಂಪರ್ಕ ಸಾಧಿಸುವುದು ಇದೀಗ ಸುಲಭ!. ಟಿಂಡರ್ ಯು ಡೇಟಿಂಗ್ ಆಪ್ ನಿಮ್ಮ ಬಯಕೆ ಈಡೇರಿಸಲು ವಿಶ್ವವಿದ್ಯಾಲಯ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಆಯ್ಕೆಯನ್ನು ತನ್ನ ಡೇಟಿಂಗ್ ಆಪ್‌ನಲ್ಲಿ ವಿನ್ಯಾಸಗೊಳಿಸಿದೆ!.
ಈ ಕುರಿತು ಮಾತನಾಡಿದ ಟಿಂಡರ್ ಕಮ್ಯುನಿಕೇಷನ್ ಲೀಡ್ ಅದಿತಿ ಶೋರ್ವಾಲ್, ಟಿಂಡರ್ ಡೇಟಿಂಗ್ ಆಪ್‌ನಲ್ಲಿ ನಿಮ್ಮ ಮಾನ್ಯ ಕಾಲೇಜು ಇಮೇಲ್ ವಿಳಾಸವನ್ನು ಹಾಕುವ ಮೂಲಕ ರಿಜಿಸ್ಟರ್ ಆಗಿದ್ದರೆ, ನೀವು ನಿಮ್ಮದೇ ಕಾಲೇಜಿನ ಕ್ರಶ್‌ನೊಂದಿಗೆ ಡೇಟಿಂಗ್ ಮಾಡಬಹುದು, ಅದೂ ಸುರಕ್ಷಿತವಾಗಿ.
ಹೌದು, ಇತ್ತೀಚೆಗೆ ಯುವ ಸಮೂಹ ಡೇಟಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದುತ್ತಿದ್ದಾರೆ. ಅವರಿಗಾಗಿ ಟಿಂಡರ್ ಯು ಈಗಾಗಲೇ ನಿಮ್ಮ ಸಹಚರವಾಗಿದೆ. ಈ ಆಪ್‌ನಲ್ಲಿ ಯಾರೋ ಅನಾಮಿಕ ವ್ಯಕ್ತಿಯನ್ನು ಹುಡುಕುವ ಬದಲು ನಿಮ್ಮ ಸುತ್ತಮುತ್ತಲೇ ಇರುವ ನಿಮ್ಮದೇ ಕಾಲೇಜಿನ ಕ್ರಶ್‌ನನ್ನು ಇದೇ ಆಪ್‌ನಲ್ಲಿ ಸುಲಭವಾಗಿ ಹುಡುಕಬಹುದು.
ಒನ್‌ಪೋಲ್ ಸಮೀಕ್ಷೆಯ ಪ್ರಕಾರ ಶೇ.57ರಷ್ಟು ಭಾರತೀಯ ವಯಸ್ಕರು (18-25) ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ ತಮ್ಮ ಜೊತೆಗಾರರನ್ನು ಹುಡುಕಿಕೊಳ್ಳುತ್ತಿದ್ದಾರೆ. ಅದರಲ್ಲೂ ಶೇ.67ರಷ್ಟು ಜನರು, “ನಾನು ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾದ ವ್ಯಕ್ತಿಯ ಜೊತೆಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಶೇ.55ರಷ್ಟು ಜನರು ಸ್ನೇಹಿತರನ್ನು ಹುಡುಕಿಕೊಂಡಿದ್ದಾರೆ ಎನ್ನಲಾಗಿದೆ.
ಭೇಟಿ ಹೇಗೆ?
ವಿದ್ಯಾರ್ಥಿಗಳಿಗೆ ಅನುಗುಣವಾಗಿ: ನಿಮ್ಮ ಪದವಿ ವರ್ಷವನ್ನು ಹಂಚಿಕೊಳ್ಳಬಹುದು, ಕಾಲೇಜು ಕ್ಲಬ್ ಮತ್ತು ಸಮಾಜಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಫೋಟೋ ಹಾಕುವ ಮೂಲಕ ಮಾಹಿತಿ ಹಂಚಿಕೊಳ್ಳಬಹುದು.
● ಸ್ಥಳೀಯ ಸಂಪರ್ಕಗಳು: ನಿಮ್ಮ ವಿಶ್ವವಿದ್ಯಾಲಯ ಮತ್ತು ಹತ್ತಿರದ ಕಾಲೇಜುಗಳ ಗೆಳೆಯರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ನಿಮ್ಮ ಕ್ಯಾಂಪಸ್ ಸಿಬ್ಬಂದಿಯನ್ನು ಭೇಟಿ ಮಾಡಿ.
●ಕಿರಿಕಿರಿ ಉಂಟುಮಾಡುವ ಡಿಎಂಗಳು ಇರುವುದಿಲ್ಲ: ನೀವು ಇಷ್ಟಪಡುವ ವ್ಯಕ್ತಿಯನ್ನು ಗುರುತಿಸಿ. ಅವರಿಗೆ ‘ಸೂಪರ್ ಲೈಕ್’ ನೀಡಿ ಮತ್ತು ಸಂದೇಶಗಳನ್ನು ಕಳುಹಿಸಿ.
● ಸುರಕ್ಷಿತ, ಅಧಿಕೃತ ಮತ್ತು ವಿನೋದ: ಟಿಂಡರ್ ಯು ಕೇವಲ ಹೊಸ ಜನರನ್ನು ಭೇಟಿಯಾಗುವುದಲ್ಲ, ಇದು ನಿಜವಾದ ಸಂಪರ್ಕಗಳಿಗಾಗಿ ಸುರಕ್ಷಿತ ಸ್ಥಳವನ್ನು ಬೆಳೆಸುವ ಬಗ್ಗೆ, ಅಲ್ಲಿ ಎಲ್ಲರೂ ವಿದ್ಯಾರ್ಥಿ ಎಂದು ನಿಮಗೆ ತಿಳಿದಿದೆ.
ಶಿವಮೊಗ್ಗ: ಕಠಿಣ ಕಾಯ್ದೆಯಡಿ ರಕ್ಷಣಾತ್ಮಕ ಕಾನೂನುಗಳೂ ಇವೆ- ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ
ನಕಲಿ ಕೀಟ ನಾಶಕ ಉತ್ಪನ್ನಗಳ ಹಾವಳಿ ತಪ್ಪಿಸಲು ಕ್ರಮ: ಸಚಿವ ಎಸ್ ಎಸ್ ಮಲ್ಲಿಕಾರ್ಜುನ್