ಬೆಂಗಳೂರು: ನಗರದ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದಂತ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ದಿನಕ್ಕೊಂದು ಸ್ಪೋಟಕ ಮಾಹಿತಿಗಳು ಲಭ್ಯವಾಗುತ್ತಿವೆ. ಇದೀಗ ಬಾಂಬ್ ಇಟ್ಟಂತ ಬಾಂಬರ್ ಬಸ್ ನಿಲ್ದಾಣದಲ್ಲೇ ಟೈಮರ್ ಫಿಕ್ಸ್ ಮಾಡಿ, ಅದನ್ನು ರಾಮೇಶ್ವರಂ ಕೆಫೆಯ ಬಳಿಗೆ ತಂದು ಇಟ್ಟಿರೋ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತಂತೆ ತನಿಖೆಯನ್ನು ನಡೆಸುತ್ತಿರುವಂತ ತನಿಖಾಧಿಕಾರಿಗಳ ತಂಡಕ್ಕೆ ಮಾಹಿತಿ ದೊರೆತಿದೆ. ಸುಮಾರು 1000ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಂತ ತನಿಖಾ ತಂಡಕ್ಕೆ ಈ ಶಾಕಿಂಗ್ ಮಾಹಿತಿ ದೊರೆತಿದೆ.
ದೊರೆತಿರುವಂತ ಮಾಹಿತಿಯಂತೆ ಐಟಿಪಿಎಲ್ ನಿಂದ ಬಸ್ ನಲ್ಲಿ ಬಸ್ ನಲ್ಲಿ ಆಗಮಿಸಿರುವಂತ ಬಾಂಬರ್, ಬೆಳಿಗ್ಗೆ 10.45ಕ್ಕೆ ಕುಂದಲಹಳ್ಳಿ ಬಸ್ ನಿಲ್ದಾಣದಲ್ಲಿ ಇಳಿದಿದ್ದಾನೆ. ಅಲ್ಲಿಯೇ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಕಾಲ ಕಳೆದಿರೋದಾಗಿ ತಿಳಿದು ಬಂದಿದೆ.
ಕಪ್ಪು ಮಾಸ್ಕ್, ಬಿಳಿ ಹ್ಯಾಟ್ ಧರಿಸಿದ್ದಂತ ಶಂಕಿತ ಬಾಂಬರ್ ನಡೆದು ಬರುವಾಗ ಎಲ್ಲಿಯೂ ಪಾದಚಾರಿ ಮಾರ್ಗವನ್ನು ಬಳಸಿಲ್ಲ. ಬದಲಾಗಿ ರಸ್ತೆಯಲ್ಲೇ ಹೆಜ್ಜೆಹಾಕಿದ್ದಾನೆ. ಕಾರಣ ಪಾದಚಾರಿ ಮಾರ್ಗದಲ್ಲಿ ನಡೆದು ಹೋದ್ರೇ ಸಮೀಪದ ಸಿಸಿಟಿವಿಗಳಲ್ಲಿ ತನ್ನ ಚಹರೆ ಬೇಗನೇ ಗುರುತು ಸಿಗಬಹುದು ಎಂಬುದಾಗಿದೆ ಎನ್ನಲಾಗುತ್ತಿದೆ.
ಬೆಳಿಗ್ಗೆ 10.45ಕ್ಕೆ ಕುಂದಲಹಳ್ಳಿ ಬಸ್ ನಿಲ್ದಾಣಕ್ಕೆ ಬಂದಂತ ಬಾಂಬರ್ ಅಲ್ಲಿಂದ ರಸ್ತೆಯಲ್ಲೇ ನಡೆದುಕೊಂಡು ಬೆಳಿಗ್ಗೆ 11.34ಕ್ಕೆ ರಾಮೇಶ್ವರಂ ಕೆಫೆಯನ್ನು ತಲುಪಿದ್ದಾನೆ. ನೇರವಾಗಿ ಕೌಂಟರ್ ಗೆ ತೆರಳಿ ರವೆ ಇಡ್ಲಿಯನ್ನು ಖರೀದಿಸಿದ್ದಾನೆ. ಆ ಬಳಿಕ ಕೇವಲ 9 ನಿಮಿಷದಲ್ಲಿ ರೆವೆ ಇಡ್ಲಿ ತಿಂದಂತ ಬಾಂಬರ್, ಅಲ್ಲಿಯೇ ಬಾಂಬ್ ಇಟ್ಟು 11.43ಕ್ಕೆ ಕೆಫೆಯಿಂದ ತೆರಳಿದ್ದಾನೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು, ಟೈಮರ್ ಮೂಲಕ ಸ್ಪೋಟಿಸೋ ಪ್ಲಾನ್ ಮಾಡಿ ತೆರಳಿದಂತ ಆತ, ಕುಂದಲಹಳ್ಳಿಯಲ್ಲಿ ಬಸ್ ಹತ್ತಿ ಕಾಡುಗೋಡಿಯಲ್ಲಿ ಇಳಿಿದ್ದಾನೆ. ಆ ಬಳಿಕ ಎಲ್ಲಿಗೆ ಹೋಗ ಎನ್ನುವ ಬಗ್ಗೆ ಇನ್ನೂ ಸ್ಪಷಅಟವಾದಂತ ಸುಳಿವು ಸಿಕ್ಕಿಲ್ಲ. ಹೀಗಾಗಿ ಪೊಲೀಸರು ಕುಂದಲಹಳ್ಳಿ, ಕೆಆರ್ ಪುಂರ, ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣ ಸೇರಿದಂತೆ ವಿವಿಧೆಡೆಯ 4 ರಿಂದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾರೆ.
BREAKING: ಮಾ.5ರಂದು ‘ರಾಜ್ಯ ಸರ್ಕಾರಿ SC, ST ನೌಕರ’ರ ಸಮಾವೇಶ: 2 ದಿನ ‘ವಿಶೇಷ ಸಾಂದರ್ಭಿಕ ರಜೆ’ ಮಂಜೂರು
‘Modi ka parivar’: 2019 ರ ‘ಚೌಕಿದಾರ್’ ಅಭಿಯಾನದ ನಂತರ ಎಕ್ಸ್ ನಲ್ಲಿ ಬಿಜೆಪಿಯಿಂದ ಮತ್ತೊಂದು ಅಭಿಯಾನ ಶುರು!