ಭಾರತೀಯ ಕ್ರಿಕೆಟ್ ತಂಡವು ಮೈದಾನದಲ್ಲಿ ಉತ್ತಮ ಪ್ರದರ್ಶನಗಳಿಗೆ ಹೆಸರುವಾಸಿಯಾಗಿದೆ ಮತ್ತು ಮೈದಾನದ ಹೊರಗಿನ ಸೌಹಾರ್ದತೆಯು ಅಭಿಮಾನಿಗಳನ್ನು ರಂಜಿಸುತ್ತದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಸ್ತಿ: ತಿಲಕ್ ವರ್ಮಾ ಕಾಲೆಳೆದ ಅರ್ಶ್‌ದೀಪ್ ಮತ್ತು ಇಶಾನ್ ಕಿಶನ್
ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿದ ನಂತರ, ಡ್ರೆಸ್ಸಿಂಗ್ ರೂಮ್‌ನಲ್ಲಿ ಇಶಾನ್ ಕಿಶನ್ ಮತ್ತು ಅರ್ಶ್‌ದೀಪ್ ಸಿಂಗ್ ಅವರು ತಿಲಕ್ ವರ್ಮಾ ಅವರನ್ನು ತಮಾಷೆ ಮಾಡುತ್ತಾ ಕಾಲೆಳೆಯುತ್ತಿರುವುದು ಕಂಡುಬಂದಿದೆ.
ಫೆಬ್ರವರಿ 4ರಂದು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 30 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 241 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 7 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಶ್ವಕಪ್‌ಗೂ ಮುನ್ನ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನವು ಭರ್ಜರಿ ಗೆಲುವು ತಂದುಕೊಟ್ಟಿದೆ.
“ತಿಲಕ್‌ನನ್ನು ಅಷ್ಟೊಂದು ನೋಡಲು ಸಾಧ್ಯವಿಲ್ಲ ಮಾರಾಯ” – ಅರ್ಶ್‌ದೀಪ್ ಸಿಂಗ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅರ್ಶ್‌ದೀಪ್ ಸಿಂಗ್ ಮತ್ತು ಇಶಾನ್ ಕಿಶನ್ ಅವರು ತಿಲಕ್ ವರ್ಮಾ ಅವರನ್ನು ಆಟವಾಡಿಸಿದ್ದಾರೆ. ಈ ವಿಡಿಯೋ ಡ್ರೆಸ್ಸಿಂಗ್ ರೂಮ್‌ನ ಒಳಗಿನ ಲಘು ಮತ್ತು ಸಂತೋಷದ ಕ್ಷಣವನ್ನು ಸೆರೆಹಿಡಿದಿದೆ.
ಅರ್ಶ್‌ದೀಪ್ ತಮ್ಮ ಫೋನ್‌ನಲ್ಲಿ ತಿಲಕ್ ಅವರನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದರು. ತಿಲಕ್ ಅವರನ್ನು ಕಾಲೆಳೆಯಲು ಮೊದಲು ಒಂದು ಪ್ರಸಿದ್ಧ ರೋಮ್ಯಾಂಟಿಕ್ ಕವಿತೆಯನ್ನು ಬಳಸಿದ ಅರ್ಶ್‌ದೀಪ್, ತಕ್ಷಣವೇ ಮಾತನ್ನು ಬದಲಿಸಿದರು. ತಿಲಕ್ ಅವರನ್ನು ಹೆಚ್ಚು ಹೊತ್ತು ನೋಡುವುದು ಒಳ್ಳೆಯ ವಿಚಾರವಲ್ಲ ಎಂದು ಹೇಳಿ ಜೋರಾಗಿ ನಗಲು ಪ್ರಾರಂಭಿಸಿದರು.
ಅರ್ಶ್‌ದೀಪ್ ಹೇಳಿದ್ದೇನು?:
“ಹಮ್ನೇ ಉಸೆ ಇತ್ನಾ ದೇಖಾ ಜಿತ್ನಾ ದೇಖಾ ಜಾ ಸಕ್ತಾ ಥಾ… ಔರ್ ಭಲಾ ಇನ್ ದೋ ಆಂಖೋಂ ಸೇ ಕಿತ್ನಾ ದೇಖಾ ಜಾ ಸಕ್ತಾ ಥಾ?” (ನಾನು ಅವನನ್ನು ಎಷ್ಟು ನೋಡಲು ಸಾಧ್ಯವೋ ಅಷ್ಟು ನೋಡಿದೆ… ಆದರೆ ಈ ಎರಡು ಕಣ್ಣುಗಳಿಂದ ತಾನೇ ಇನ್ನೆಷ್ಟು ನೋಡಲು ಸಾಧ್ಯ?) ಎಂದು ಶಾಯರಿ ಹೇಳಿದರು.
ನಂತರ ಮಾತು ಮುಂದುವರಿಸಿದ ಅವರು, “ತಿಲಕ್… ಹಮ್ನೇ ಉಸೆ ಇತ್ನಾ… ನಹೀ, ತಿಲಕ್ ಕೋ ನಹೀ ದೇಖ್ ಸಕ್ತೇ ಇತ್ನಾ ಯಾರ್! ಯೇ ತೋ ಬುರಾ ದಿಖ್ತಾ ಹೈ!” (ತಿಲಕ್… ನಾವು ಅವನನ್ನು ಅಷ್ಟೊಂದು… ಇಲ್ಲಪ್ಪಾ, ತಿಲಕ್‌ನನ್ನು ಅಷ್ಟೊಂದು ನೋಡಲು ಸಾಧ್ಯವಿಲ್ಲ! ಅವನು ನೋಡಲು ಅಷ್ಟು ಚೆನ್ನಾಗಿಲ್ಲ!) ಎಂದು ತಮಾಷೆ ಮಾಡಿದರು.
After the warm-up match against South Africa, Arshdeep Singh, Ishan Kishan, and Tilak Varma were having fun in the dressing room. 😄
Without informing Tilak, Arshdeep Singh suddenly started making a reel by covering Tilak, which annoyed Tilak and made him angry. 🤬🥵 pic.twitter.com/BBGefO7rtu
— Jara (@JARA_Memer) February 4, 2026







