ಚಿಕ್ಕಮಗಳೂರು: ಜಿಲ್ಲೆಯ ಚಂದ್ರದ್ರೋಣ ಪರ್ವತದ ಅತ್ತಿಗುಂಡಿ ಸಮೀಪದಲ್ಲಿ ಹುಲಿ ಸಂಚಾರ ಮಾಡಿರೋದಾಗಿ ತಿಳಿದು ಬಂದಿದೆ. ಪ್ರವಾಸಿ ತಾಣದಲ್ಲಿ ಹುಲಿ ಸಂಚಾರದಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತದ ಸಾಲಿನ ಅತ್ತಿಗುಂಡಿ ಸಮೀಪದಲ್ಲಿ ಹುಲಿ ಸಂಚಾರ ಮಾಡಿರೋದಾಗಿ ಹೇಳಲಾಗುತ್ತಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸಮೀಪದಲ್ಲಿರುವಂತ ಅತ್ತಿಗುಂಡಿ ಇದಾಗಿದೆ.
ಪ್ರವಾಸಿ ತಾಣದಲ್ಲಿ ಹುಲಿ ಸಂಚಾರದಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಮುಳ್ಳಯ್ಯನಗಿರಿ, ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಮಾಣಿಕ್ಯಧಾರಾ ಪ್ರವಾಸಿ ತಾಣಗಳಿರುವ ಚಂದ್ರದ್ರೋಣ ಪರ್ವತದ ಸಾಲು ಇದಾಗಿದೆ.
ಸ್ಥಳೀಯರ ಮೊಬೈಲ್ ನಲ್ಲಿ ಹುಲಿ ಸಂಚಾರದ ದೃಶ್ಯಗಳು ಸೆರೆಯಾಗಿದ್ದಾವೆ. ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶೀಘ್ರದಲ್ಲೇ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಪರ್ಯಾಯ ಇಂಧನಕ್ಕಾಗಿ ಜೈವಿಕ ಇಂದನ ನೀತಿ ಜಾರಿ: ಸಚಿವ ಪ್ರಿಯಾಂಕ್ ಖರ್ಗೆ








