ಶಿವಮೊಗ್ಗ: ಹೋಟೆಲ್ ಗೆ ಊಟ ಮಾಡೋದಕ್ಕೆ ತೆರಳಿ, ಊಟ ಮಾಡಿ, ಹೊರಡುವ ಸಂದರ್ಭದಲ್ಲಿ ಇನ್ನೂ ಬಾರದ ಗೆಳೆಯನೊಬ್ಬನನ್ನು ಏ ಬಾರ ಎಂದು ಕರೆದಿದ್ದಕ್ಕೆ, ಆತನ ಮುಂದೆ ನಿಂತಿದ್ದಂತ ಪುಂಡರು ಹಿಗ್ಗಾಮುಗ್ಗ ಥಳಿಸಿ, ಓರ್ವನ ತಲೆಗೆ ಗಾಯಗೊಳಿಸಿದ್ದರೇ, ಮತ್ತೋರ್ವನ ಕಾಲು ಮುರಿದಿರುವಂತ ಘಟನೆ ಸಾಗರದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವಂತ ಸಾಗರ್ ಹೋಟೆಲ್ ಗೆ ಶಿವಮೊಗ್ಗದ ಮಹೇಶ್, ಹೊಸನಗರದ ಮಂಜುನಾಥ್ ಸ್ನೇಹಿತರಿಬ್ಬರು ಊಟಕ್ಕೆ ತೆರಳಿದ್ದರು. ಕೆಲಸದ ನಿಮಿತ್ತ ಬಂದಿದ್ದಂತ ಇಬ್ಬರು ಸ್ನೇಹಿತರು ಸಾಗರ್ ಹೋಟೆಲ್ ನಲ್ಲಿ ಊಟ ಮುಗಿಸಿ, ಕೈತೊಳೆಯಲು ಸಿಂಕ್ ಬಳಿಗೆ ತೆರಳಿದ್ದಾರೆ. ಮುಂದೆ ಸಾಗಿದ್ದಂತ ಮಹೇಶ್, ಮಂಜುನಾಥ್ ಊಟ ಮುಗಿದ ಬಳಿಕ ತಡ ಮಾಡಿದ್ದಕ್ಕೆ ಏ ಬಾರ ಎಂಬುದಾಗಿ ಕರೆದಿದ್ದಾನೆ.
ಈ ಮಾತಿನಿಂದ ಸಿಟ್ಟಾದಂತ ಸೋಮಶೇಖರ್ ಕುಗ್ವೆ, ಶಿವಾನಂದ, ಅವಿನಾಶ್ ಸಿಟ್ಟುಗೊಂಡು ಮಹೇಶ್ ಗೆ ಥಳಿಸಿದ್ದಾರೆ. ಇದನ್ನು ಬಿಡಿಸಲು ಹೋದಂತ ಮಂಜುನಾಥ್ ಮೇಲೆಯೂ ಹಲ್ಲೆ ಮಾಡಿದ್ದಾರೆ. ಅಲ್ಲದೇ ನೀರಿನ ಡ್ರಂ ಎತ್ತಿ ಹಾಕಿದ್ದರಿಂದ ಮಂಜುನಾಥ್ ಕಾಲು ಮುರಿದಿದ್ದರೇ, ಮಹೇಶ್ ತಲೆಗೆ ಗಾಯವಾಗಿದೆ.
ಪುಡಿ ರೌಡಿಗಳಿಂದ ಹಲ್ಲೆಗೊಳಗಾದಂತ ಮಹೇಶ್, ಮಂಜುನಾಥ್ ಇಬ್ಬರನ್ನು ಸಾಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಸಂಬಂಧ ಮಂಜುನಾಥ್ ನೀಡಿದಂತ ದೂರಿನ ಮೇರೆಗೆ ಸಾಗರ ಪೇಟೆ ಠಾಣೆಯಲ್ಲಿ ಎ1 ಆರೋಪಿಯಾಗಿ ಸೋಮಶೇಖರ ಕುಗ್ವೆ, ಎ2 ಆರೋಪಿಯಾಗಿ ಶಿವಾನಂದ, ಎ3 ಆರೋಪಿಯಾಗಿ ಅವಿನಾಶ ಎಂಬುವರ ವಿರುದ್ಧ ಬಿಎನ್ ಎಸ್ ಕಾಯ್ದೆ 2023ರ ಅಡಿಯ 115(2), 352, 351(2) 109(1) 3(5) ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ಇನ್ನೂ ದೂರು ಆಧರಿಸಿ ಕ್ಷಿಪ್ರವಾಗಿ ತನಿಖೆಗೆ ಇಳಿದಂತ ಸಾಗರ ಪೇಟೆ ಠಾಣೆಯ ಪೊಲೀಸರು ಹಲ್ಲೆ ಮಾಡಿದಂತ ಎ2 ಆರೋಪಿ ಶಿವಾನಂದ, ಎ3 ಆರೋಪಿ ಅವಿನಾಶ ಬಂದಿಸಿದ್ದಾರೆ ಜೈಲಿಗಟ್ಟಿದ್ದಾರೆ. ಎ1 ಆರೋಪಿ ಸೋಮಶೇಖರ ಕುಗ್ವೆ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಿರುವುದಾಗಿ ತಿಳಿದು ಬಂದಿದೆ. ಪುಂಡರನ್ನು ಬಂಧಿಸಿದ್ದಾರೆ. ಒಟ್ಟಾರೆ ಇಬ್ಬರ ಮೇಲೆ ಸಾಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ತಲೆಗೆ ಹೊಡೆದು ಗಾಯಗೊಳಿಸಿ, ಓರ್ವನ ಕಾಲು ಮುರಿದಂತ ಇಬ್ಬರು ಪುಂಡರನ್ನು ಸಾಗರ ಪೇಟೆ ಠಾಣೆಯ ಪೊಲೀಸರು ಜೈಲಿಗಟ್ಟಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಸಹಕಾರಿ ಸಂಸ್ಥೆಗಳಲ್ಲಿ ಸೇವೆಯೇ ಜೀವಾಳ, ರಾಜಕೀಯ ಪ್ರವೇಶ ಇರಬಾರದು: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು
ಆರೋಗ್ಯವೇ ಭಾಗ್ಯ ಚಿಕ್ಕಂದಿನಿಂದಲೇ ಚೆನ್ನಾಗಿ ಕಾಪಾಡಿಕೊಳ್ಳಿ: ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ