ಮಂಗಳೂರು: ಜಿಲ್ಲೆಯ ಪಣಂಬೂರು ಬೀಚ್ ನಲ್ಲಿ ಮೂವರು ಯುವಕರು ನೀರುಪಾಲಾಗಿರೋದಾಗಿ ತಿಳಿದು ಬಂದಿದೆ. ಅವರ ಪತ್ತೆಗಾಗಿ ಮೀನುಗಾರರು ಹಾಗೂ ಜೀವರಕ್ಷಕ ದಳದಿಂದ ಶೋಧಕಾರ್ಯ ನಡೆಸಲಾಗುತ್ತಿದೆ.
ಮಂಗಳೂರು ಹೊರವಲಯದ ಪಣಂಬೂರು ಬೀಚ್ ನಲ್ಲಿ ಇಂದು ಈಜುವುದಕ್ಕೆ ತೆರಳಿದ್ದಂತ ಮೂವರು ಯುವಕರು ನೀರುಪಾಲಾಗಿದ್ದಾರೆ. ಮೃತರನ್ನು ಮಿಲನ್(20), ಲಿಖಿತ್(18) ಹಾಗೂ ನಾಗರಾಜು(24) ಎಂಬುದಾಗಿ ತಿಳಿದು ಬಂದಿದೆ.
ಡಿಲಿವರಿ ಬಾಯ್ ಆಗಿ ಮಿಲನ್ ಕೆಲಸ ಮಾಡುತ್ತಿದ್ದರೇ, ಕೈಕಂಬದ ಖಾಸಗಿ ಕಾಲೇಜಿನಲ್ಲಿ ಪಿಯುಸಿಯನ್ನು ಲಿಖಿತ್ ಅವರು ಓದುತ್ತಿದ್ದರು. ಕಂಪನಿಯೊಂದರಲ್ಲಿ ಸೂಪರ್ ವೈಸ್ ಆಗಿ ನಾಗರಾಜ್ ಕೆಲಸ ಮಾಡುತ್ತಿದ್ದರು.
ಈ ಮೂವರು ಸ್ನೇಹಿತರು ಸೇರಿಕೊಂಡು ಪಣಂಬೂರು ಬೀಚ್ ಗೆ ತೆರಳಿದ್ದರು. ಈ ವೇಳೆಯಲ್ಲಿ ಮೂರು ನೀರುಪಾಲಾಗಿದ್ದು, ಅವರ ಪತ್ತೆಗಾಗಿ ಮೀನುಗಾರರು ಹಾಗೂ ಜೀವರಕ್ಷಕ ದಳದಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ 100% ನನಗೆ ಸಿಗುತ್ತೆ: ಸುಮಲತಾ ಅಂಬರೀಶ್ ವಿಶ್ವಾಸ!