ಮಂಗಳೂರು: ನಗರದಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಬೆನ್ನಲ್ಲೇ ಮಂಗಳೂರಿನ ಸುತ್ತಮುತ್ತಲ ಹಲವೆಡೆ ಮೂವರಿಗೆ ಚಾಕು ಇರಿದಿರುವಂತ ಘಟನೆ ನಡೆದಿದೆ.
ಮಂಗಳೂರು ನಗರದ ಹೊರವಲಯದಲ್ಲಿನ ಕಣ್ಣೂರಲ್ಲಿ ಮಂಗಳೂರು ನಗರದ ಮಾರುಕಟ್ಟೆ ಕೆಲಸಕ್ಕೆ ಹೋಗುತ್ತಿದ್ದಂತ ಇರ್ಶಾದ್ ಎಂಬಾತನಿಗೆ ಐವರು ದುರ್ಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ಈ ವೇಳೆಯಲ್ಲಿ ಸಮೀಪದ ಮನೆಯೊಂದಕ್ಕೆ ಹೋಗಿ ಅವಿತುಕೊಂಡು ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ. ಐಸಿಯುನಲ್ಲಿ ಇರ್ಶಾದ್ ಗೆ ಚಿಕಿತ್ಸೆ ಮುಂದುವರೆದಿದೆ.
ಇನ್ನೂ ಮಂಗಳೂರಿನ ಕೊಂಚಾಡಿ ಹಾಗೂ ಉಳ್ಳಾಲದಲ್ಲಿಯೂ ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ಇದು ನಿನ್ನೆ ತಡರಾತ್ರಿ ನಡೆದಿದೆ. ಒಟ್ಟಾರೆ ಸುಹಾಸ್ ಶೆಟ್ಟಿ ಕೊಲೆಯ ನಂತ್ರ ನಗರದಲ್ಲಿ ಮೂವರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ