ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ತವರು ಕ್ಷೇತ್ರದ ಒಂದೇ ಗ್ರಾಮದ ಮೂವರಲ್ಲಿ ಕಾಲರಾ ದೃಢಪಟ್ಟಿದೆ. ಕಾಲರಾ ದೃಢಪಟ್ಟ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸಿಎಂ ಸಿದ್ಧರಾಮಯ್ಯ ಅವರ ವರುಣಾ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಕೆಲ ದಿನಗಳಿಂದ ಕೆಲವರಿಗೆ ವಾಂತಿ, ಬೇಧಿ ಕಾಣಿಸಿಕೊಂಡಿತ್ತು. ಹೀಗಾಗಿ ತಗಡೂರು ಗ್ರಾಮಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಜನರನ್ನು ಕಾಲರಾ ಪತ್ತೆ ಪರೀಕ್ಷೆಗೆ ಒಳಪಡಿಸಿದ್ದರು.
ಕಳೆದ ಒಂದು ವಾರದಿಂದ ಸತತ 114 ಜನರನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಪರೀಕ್ಷೆಗೆ ಒಳಪಡಿಸಿದ್ದಾರೆ. ಇವರಲ್ಲಿ ಮೂವರಿಗೆ ಕಾಲರಾ ದೃಢಪಟ್ಟಿದೆ.
ಸಿಎಂ ಸಿದ್ಧರಾಮಯ್ಯ ತವರು ಕ್ಷೇತ್ರದ ಗ್ರಾಮದಲ್ಲೇ ಕಾಲರಾ ಪತ್ತೆಯಾಗುತ್ತಿದ್ದಂತೆ, ಗ್ರಾಮಕ್ಕೆ ಡಿಹೆಚ್ಓ ಶಿವಕುಮಾರಸ್ವಾಮಿ ಸೇರಿದಂತೆ ಹಿರಿಯ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ತಗಡೂರು ಗ್ರಾಮದಲ್ಲಿ ಮೇಲ್ನೋಟಕ್ಕೆ ಬೋರ್ ವೆಲ್ ನೀರು ಕುಡಿದ್ದರಿಂದಾಗಿ ಕಾಲರಾ ಪತ್ತೆಯಾಗಿರುವಂತ ಶಂಕೆಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ವ್ಯಕ್ತ ಪಡಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ತಗಡೂರು ಗ್ರಾಮದ ನಾಲ್ಕು ಬೋರ್ ವೆಲ್ ಗಳಿಂದ ಗ್ರಾಮಕ್ಕೆ ಸರಬರಾಜು ಆಗುವಂತ ನೀರನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಅಲ್ಲದೇ ಬೋರ್ ವೆಲ್ ನೀರಿನ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ತಗಡೂರು ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ 6 ವೈದ್ಯರು, ಆಂಬುಲೆನ್ಸ್ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದಾರೆ.
BIG NEWS: ‘ಪೋನ್ ಪೇ’ ಮೂಲಕ ಲಂಚ ಪಡೆದಿದ್ದ ‘ಭ್ರಷ್ಟ ಗ್ರಾಮ ಲೆಕ್ಕಿಗ’ ಲೋಕಾಯುಕ್ತ ಬಲೆಗೆ
ಬೆಂಗಳೂರಿನ ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ.22ರ ಬೆಳಿಗ್ಗೆ 6ರಿಂದ 23ರ ಸಂಜೆ 6ರವರೆಗೆ ‘ಮದ್ಯ ಮಾರಾಟ’ ನಿಷೇಧ