ತಿರುವನಂತಪುರಂ: ಆ ಮಹಿಳೆ ಮನೆಯ ಬಳಿಯಲ್ಲಿ ಕೆಲಸ ಮಾಡುತ್ತಿದ್ದಂತ ಸಂದರ್ಭದಲ್ಲಿ ತನ್ನ ಚಿನ್ನದ ಬಳೆಯನ್ನು ತೆಗೆದಿಟ್ಟಿದ್ದಳು. ಅದನ್ನು ಅಚಾನಕ್ಕಾಗಿ ಕಾಗೆಯೊಂದು ಹೊತ್ತೊಯ್ದಿತ್ತು. ಮನೆಯ ಅಕ್ಕಪಕ್ಕದಲ್ಲಿ ಸುತ್ತಾಡಿ, ಹುಡುಕಾಡಿದರೂ ಸಿಕ್ಕಿರಲಿಲ್ಲ. ಇಂತಹ ಬಳೆ ಮೂರು ತಿಂಗಳ ನಂತ್ರ ಮಹಿಳೆಯ ಕೈ ಸೇರಿದೆ. ಅದು ಹೇಗೆ ಅಂತ ಮುಂದೆ ಓದಿ.
ಕೇರಳದ ಮಲಪ್ಪುರಂನ ತ್ರಿಕ್ಕಲಂಗೋಡ್ ನಲ್ಲಿ ರುಕ್ಮಿಣಿ ಎಂಬ ಮಹಿಳೆ ಮನೆಯ ಕೆಲಸ ಮಾಡುತ್ತಿದ್ದಂತ ಸಂದರ್ಭದಲ್ಲಿ ತಮ್ಮ 12 ಗ್ರಾಂ ತೂಕದ ಬಳೆಯನ್ನು ಕೈಯಿಂದ ತೆಗೆದು ಮನೆಯ ಹೊರಗಿನ ಗೋಡೆಯ ಮೇಲೆ ಇರಿಸಿದ್ದರು. ಮನೆಯ ಕೆಲಸ ನಿರತಾಗಿದ್ದಂತ ಸಂದರ್ಭದಲ್ಲಿ ಕಾಗೆಯೊಂದು ಆ ಬಳೆಯನ್ನು ಎಗರಿಸಿಕೊಂಡು ಹೋಗಿತ್ತು. ಬಳೆ ಸ್ವಲ್ಪ ದೂರದಲ್ಲಿ ಎಲ್ಲಾದರೂ ಕಾಗೆ ಬಿಟ್ಟಿರಬೇಕು ಅಂತ ಅಕ್ಕಪಕ್ಕ ಎಲ್ಲ ಹುಡುಕಾಡಿದರೂ ಸಿಕ್ಕಿರಲಿಲ್ಲ. ಹೀಗಾಗಿ ತಮ್ಮ ಬಳೆಯ ಆಸೆ ಬಿಟ್ಟಿದ್ದರು.
ಮೂರು ತಿಂಗಳ ನಂತ್ರ ಅನ್ವರ್ ಸಾದತ್ ಎಂಬಾತ ತಮ್ಮ ಮನೆಯ ಬಳಿಯ ಮಾವಿನ ಮರದಲ್ಲಿ ಮಗಳಿಗೆ ಹಣ್ಣು ಕೀಳಲು ಮರ ಅಲುಗಾಡಿಸಿದ್ದರು. ಆ ವೇಳೆ ಹೊಳೆಯುತ್ತಿದ್ದಂತ ವಸ್ತುವೊಂದು ಕೆಳಗೆ ಬಿದ್ದಿತ್ತು. ಅದನ್ನು ಪುತ್ರಿ ಫಾತಿಮಾ ಹುದಾ ಗಮನಿಸಿದ್ದರು. ಆ ಬಳಿಕ ಅದನ್ನು ತೆಗೆದುಕೊಂಡು ಹೋಗಿ ಪರೀಕ್ಷಿಸಿದಾಗ ಚಿನ್ನವೆಂಬುದು ಗೊತ್ತಾಗಿತ್ತು. ರುಕ್ಮಿಣಿ ಮನೆಯಿಂದ ಕೇವಲ 50 ಮೀಟರ್ ದೂರದಲ್ಲಿ ಈ ಚಿನ್ನದ ಬಳೆ ಸಿಕ್ಕಿತ್ತು.
ಅನ್ವರ್ ಸಾದತ್ ಮರದಲ್ಲಿ ಸಿಕ್ಕಂತ ತುಂಡಾಗಿದ್ದಂತ ಚಿನ್ನದ ಬಳೆಯನ್ನು ಊರಿನ ಲೈಬ್ರರಿಗೆ ಹೋಗಿ ಕೊಟ್ಟು ಪ್ರಾಮಾಣಿಕತೆ ಮರೆದಿದ್ದರು. ಅಲ್ಲದೇ ಮಾಲೀಕರು ಯಾರೆಂದು ತಿಳಿದು ಹಿಂದಿರುಗಿಸಲು ಮನವಿ ಮಾಡಿದ್ದರು. ಸುದ್ದಿ ಊರಲ್ಲಿ ಹಬ್ಬಿದ ನಂತ್ರ ರುಕ್ಮಿಣಿ ಲೈಬ್ರರಿಗೆ ತೆರಳಿ ಬಳೆ ತನ್ನದೇ ಎಂದು ಖಚಿತಪಡಿಸಿಕೊಂಡು, ಕಳೆದು ಹೋಗಿದ್ದಂತ ಬಳೆ ನೋಡಿ ಖುಷಿಯಾಗಿ, ಖಚಿತ ಮಾಹಿತಿ ನೀಡಿ ಪಡೆದುಕೊಂಡಿದ್ದಾರೆ. ಈ ಮೂಲಕ ಮೂರು ತಿಂಗಳ ಕಾಗೆ ಹೊತ್ತೊಯ್ದಿದ್ದಂತ ಚಿನ್ನದ ಬಳೆ ಒಡತಿ ರುಕ್ಮಿಣಿಯ ಕೈಸೇರಿದೆ.
BREAKING: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಎನ್‌ಟಿಪಿಸಿಯ 20,000 ಕೋಟಿ ಹೂಡಿಕೆಗೆ ಕೇಂದ್ರ ಸಂಪುಟ ಅನುಮೋದನೆ