ಉತ್ತರ ಕನ್ನಡ: ವಿದೇಶದಲ್ಲಿರುವಂತ ಹಜ್ ಯಾತ್ರೆಗೆ ತೆರಳಿದ್ದಂತ ಉತ್ತರ ಕನ್ನಡ ಜಿಲ್ಲೆಯ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ದುರ್ಮರಣ ಹೊಂದಿರುವಂತ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಅಫಾಗ್ ಫಯಾಸ್ ರೋಣ, ಪತ್ನಿ ಅಫ್ರಿನಾ ಬಾನು ಹಾಗೂ ಅಣ್ಣನ ಮಗ ಅಯಾನ್ ರೋಣ ಎಂಬುವರು ಹಜ್ ಯಾತ್ರೆ ಮುಗಿಸಿ ಮಕ್ಕಾದಿಂದ ಹಿಂದಿರುಗುತ್ತಿದ್ದಾಗ ವಿದೇಶದಲ್ಲಿ ನಡೆದಂತ ಅಪಘಾತದಲ್ಲಿ ಸ್ಥಳದಲ್ಲೇ ದುರ್ಮರಣ ಹೊಂದಿರೋದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ ಮೂವರು ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾರ್ಚ್.26ರಂದು ರಾತ್ರಿ ಮಕ್ಕಾ ಮದೀನಕ್ಕೆ ತೆರಳಿದ್ದರು. ಏಪ್ರಿಲ್.6ರ ನಿನ್ನೆ ರಾತ್ರಿ ಮಕ್ಕಾ ಮದೀನ ನಡುವಿನ ರಸ್ತೆಯಲ್ಲಿ ಅಪಘಾತದಲ್ಲಿ ದಂಪತಿ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಾವೇರಿಯ ಲಕ್ಷ, ಲಕ್ಷ ಬಹುಮಾನ ಗೆದ್ದುಕೊಟ್ಟಿದ್ದ ‘ರಾಕ್ ಸ್ಟಾರ್’ ಹೆಸರಿನ ಹೋರಿ ಇನ್ನಿಲ್ಲ
‘UGC NET’ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ