ಚಿಕ್ಕಬಳ್ಳಾಪುರ: ಜಿಲ್ಲೆ ಚಿಂತಾಮಣಿ ಬಳಿಯಲ್ಲಿ ಟಿಟಿ ವಾಹನ ಹಾಗೂ ಕಾರಿನ ನಡುವೆ ಭೀಕರ ಅಪಘಾತವಾಗಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದಂಡುಪಾಳ್ಯ ಗೇಟ್ ಬಳಿಯಲ್ಲಿ ಟಿಟಿ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿದೆ. ಈ ಭೀಕರ ಅಪಘಾತದಲ್ಲಿ ಶ್ರೀನಿವಾಸಲು(50), ಪುಷ್ಪ (14) ಹಾಗೂ ಶ್ರೀಕಾಂತ್ (30) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಈ ಅಪಘಾತದಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಂದಹಾಗೇ ಬೆಂಗಳೂರಿನಿಂದ ಆಂಧ್ರಪ್ರದೇಶದ ಕೆಡೆಗೆ ಕಾರು ತೆರಳುತ್ತಿತ್ತು. ಆಂಧ್ರದ ಬೋಯಿಕೊಂಡದಿಂದ ಬೆಂಗಳೂರು ಕಡೆಗೆ ಟಿಟಿ ವಾಹನ ಬರುತ್ತಿತ್ತು. ಈ ಎರಡರ ನಡುವೆ ಅಪಘಾತ ಉಂಟಾಗಿ ಈ ದುರ್ಘಟನೆ ನಡೆದಿದೆ.
ಬಿಜೆಪಿ ಕೇಂದ್ರ ಸರ್ಕಾರದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿವರ್ತನೆ ಪರ್ವ ಆರಂಭ…!
‘ಡಿಜಿಟಲ್ ಮೀಡಿಯಾ’ಗಳಿಗೂ ಸರ್ಕಾರಿ ಜಾಹೀರಾತು: KSDMF ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗೆ ‘KNN ಅಭಿನಂದನೆ’