ಉತ್ತರ ಕನ್ನಡ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಮೇ.7ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತ ನೌಕರರಿಗೆ ತರಬೇತಿಯನ್ನು ಇಂದು ನೀಡಲಾಗಿತ್ತು. ಆದ್ರೇ ಚುನಾವಣಾ ಕರ್ತವ್ಯದ ತರಬೇತಿಗೆ ಹಾಜರಾಗದ ಮೂವರು ಸರ್ಕಾರಿ ನೌಕರರನ್ನು ಅಮಾನತುಗೊಳಿಸಲಾಗಿದೆ.
ಈ ಕುರಿತಂತೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶ ಹೊರಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಚುನಾವಣಾ ಕರ್ತವ್ಯಕ್ಕೆ ತೆಗೆದುಕೊಂಡಿದ್ದಂತ ನೌಕರರಿಗೆ ಇಂದು ತರಬೇತಿ ನೀಡಲಾಗುತ್ತಿತ್ತು. ಈ ತರಬೇತಿಗೆ ಹಾಜರಾಗದೇ ಗೈರಾಗಿದ್ದಂತ ಮೂವರು ಸರ್ಕಾರಿ ನೌಕರರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಅಂದಹಾಗೇ ಅಮಾನತುಗೊಂಡವರೆಂದರೇ ಮಾವನಕುರ್ವಿ ಗ್ರಾಮ ಪಂಚಾಯ್ತಿಯ ಬಿಲ್ ಕಲೆಕ್ಟರ್ ಲಕ್ಷ್ಮಣ್, ಮಂಡಳ್ಳಿ ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಆನಂದ್ ಹಾಗೂ ಮುಟ್ಟಳ್ಳಿ ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಶ್ರೀಧರ್ ಎಂಬುವರಾಗಿದ್ದಾರೆ. ಈ ಮೂವರನ್ನು ಮೇ.7ರಂದು ನಡೆಯಲಿರುವಂತ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನದ ಕಾರ್ಯದಲ್ಲಿ ಮತಗಟ್ಟೆ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿತ್ತು. ಇವರು ಇಂದಿನ ತರಬೇತಿಗೆ ಗೈರು ಹಿನ್ನಲೆಯಲ್ಲಿ ಮೂವರನ್ನು ಡಿಸಿ ಅಮಾನತುಗೊಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ‘ಅಪ್ರಾಪ್ತೆಯನ್ನು ಗರ್ಭಿಣಿ’ ಮಾಡಿ ಪರಾರಿಯಾಗಿದ್ದ ‘ಮುಸ್ಲೀಂ ಯುವಕ’ನ ಬಂಧನ