ರಾಯಚೂರು: ಒಂದು ಕಾಮಗಾರಿಗೆ ಒಂದೇ ಬಿಲ್ ಪಡೆಯಬೇಕು. ಆದ್ರೇ ಇದನ್ನು ಮೀರಿ ಎರಡು ಬಿಲ್ ನೀಡಿದಂತ ಮೂವರು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಈ ಕುರಿತಂತೆ ಆರ್ ಡಿ ಪಿ ಆರ್ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಜಲ ಜೀವನ್ ಮಿಷನ್ ಅಡಿ ಒಂದೇ ಕಾಮಗಾರಿಗೆ ಎರಡು ಬಿಲ್ ನೀಡಿದ ಆರೋಪ ಆಧರಿಸಿ, ಜಿಲ್ಲಾ ಪಂಚಾಯ್ತಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಇಇ ಸೈಯದ್ ಫಜಲ್ ಮೆಹಮೂದ್, ಲೆಕ್ಕಾಧಿಕಾರಿ ಅಬ್ದುಲ್ ರಹೀಮ್ ಹಾಗೂ ಪ್ರಥಮ ದರ್ಜೆ ಸಹಾಯ ಜಾಕೀರ್ ಹುಸೇನ್ ಎಂಬುವರನ್ನು ಅಮಾನತುಗೊಳಿಸಲಾಗಿದೆ.
ಗುತ್ತಿಗೆದಾರರೊಬ್ಬರಿಗೆ 19,66,285 ರೂ ಬಿಲ್ ಅನ್ನು ಎರಡು ಬಾರಿ ಪಾವತಿಸಿ, ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪದ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆಯಲ್ಲಿ ಸಾಬೀತಾದ ಹಿನ್ನಲೆಯಲ್ಲಿ ಮೂವರನ್ನು ಅಮಾನತುಗೊಳಿಸಲಾಗಿದೆ.
BREAKING: ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ 1.6 ಲಕ್ಷ ಮೌಲ್ಯದ ಪೋನ್ ಕಳ್ಳತನ: ಪೊಲೀಸರಿಗೆ ದೂರು
BREAKING : ತುಮಕೂರಲ್ಲಿ ಪತಿ-ಪತ್ನಿಯ ನಡುವೆ ಕೌಟುಂಬಿಕ ಕಲಹ : ಜಗಳ ಬಿಡಿಸಲು ಹೋದ ಅತ್ತೆಯ ಕೊಲೆಗೈದ ಅಳಿಯ