ಮಂಗಳೂರು: ಇಲ್ಲಿನ ಉಳ್ಳಾಲದ ಬಳಿಯಲ್ಲಿರುವಂತ ರೆಸಾರ್ಟ್ ಒಂದರ ಈಜುಕೊಳದಲ್ಲಿ ಈಜೋದಕ್ಕೆ ಇಳಿದಂತ ಮೂವರು ನೀರಲ್ಲಿ ಮುಳುಗಿ ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಮಂಗಳೂರಿನ ಉಳ್ಳಾಲ-ಸೋಮೇಶ್ವರದಲ್ಲಿರುವಂತ ಖಾಸಗಿ ಬೀಚ್ ರೆಸಾರ್ಟ್ ನ ಈಜುಕೊಳದಲ್ಲಿ ಈಜಲು ಇಳಿದಂತ ಯುವತಿಯೊಬ್ಬಳು ಅದು ಆಳವಾಗಿದ್ದರಿಂದ ಈಜು ಬಾರದೇ ಮುಳುಗಿದ್ದಳು. ಅವಳನ್ನು ರಕ್ಷಿಸೋದಕ್ಕೆ ಇಳಿದಂತ ಮತ್ತೆ ಇಬ್ಬರು ಸೇರಿ ಮೂವರು ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಮೃತರನ್ನು ನಿಶ್ಚಿತ ಎಂ.ಡಿ (21), ಪಾರ್ವತಿ.ಎಸ್(20) ಹಾಗೂ ಕೀರ್ತನಾ.ಎನ್ (21) ಎಂಬುದಾಗಿ ಗುರುತಿಸಲಾಗಿದೆ. ಈ ಮೂವರು ಮೈಸೂರು ಮೂಲದವರಾಗಿದ್ದು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ಶನಿವಾರ ಬೆಳಿಗ್ಗೆ ಬೀಚ್ ರೆಸಾರ್ಟ್ ಗೆ ಆಗಮಿಸಿದಂತ ಮೂವರು ಯುವತಿಯರು, ಆ ಬಳಿಕ ಈಜಲೆಂದು ಸ್ವಿಮ್ಮಿಂಗ್ ಪೂಲ್ ಗೆ ಇಳಿದಿದ್ದರು. ಈ ವೇಳೆ ಆಳವಿದ್ದ ಕಾರಣ, ಈಜು ಬಾರದೇ ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಾವಿಗೆ ರೆಸಾರ್ಟ್ ನ ಅವೈಜ್ಞಾನಿಕ ಸ್ವಿಮ್ಮಿಂಗ್ ಪೂಲ್ ನಿರ್ಮಾಣವೇ ಕಾರಣ ಎಂಬುದಾಗಿ ಹೇಳಲಾಗುತ್ತಿದೆ.
40% ಕಮಿಷನ್ ಆರೋಪ ಸುಳ್ಳು ಎಂದು ಲೋಕಾಯುಕ್ತ ವರದಿಯಿಂದ ಸಾಬೀತಾಗಿದೆ: ಆರ್.ಅಶೋಕ್
BIG NEWS : ಹೆಂಡತಿಯನ್ನು ಕೆಲಸ ಬಿಡುವಂತೆ ಒತ್ತಾಯಿಸುವುದು ಕ್ರೌರ್ಯಕ್ಕೆ ಸಮ : ಹೈಕೋರ್ಟ್ ಮಹತ್ವದ ತೀರ್ಪು