ಶಿವಮೊಗ್ಗ: ಸಾಗರ ನಗರದಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಗ್ರಾಮ ಲೆಕ್ಕಿಗ, ರಿಯಲ್ ಎಸ್ಟೇಟ್ ಉದ್ಯಮಿ ಸೇರಿದಂತೆ ಮೂವರನ್ನು ಸಾಗರ ಪೇಟೆ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಸಾಗರದ ವಿಜಯನಗರ ಬಡಾವಣೆಯ ಈಜುಕೊಳದ ಸಮೀಪದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ತೆರಳಿದ್ದಂತ ಸಾಗರ ಪೇಟೆ ಠಾಣೆಯ ಪೊಲೀಸರು, ಪರಿಶೀಲಿಸಿ ಮಾಹಿತಿ ಕಲೆ ಹಾಕಿದಾಗ ಮೃತ ವ್ಯಕ್ತಿ ಶಿವಪ್ಪನಾಯಕ ನಗರ ಹೊಸ ಬಡಾವಣೆಯ ನಿವಾಸಿ ಸದಾನಂದ(44) ಎಂಬುದಾಗಿ ಗುರುತು ಸಿಕ್ಕಿತ್ತು.
ಈ ಸಂಬಂಧ ರಶ್ಮಿ ಎಂಬುವರು ಸಾಗರ ಪೇಟೆ ಠಾಣೆಗೆ ತೆರಳಿ, ಸದಾನಂದ ಅವರ ಸಾವಿಗೆ ನನ್ನ ಪತಿ ಗ್ರಾಮ ಲೆಕ್ಕಿಗ ವೆಂಕಟೇಶ್ ಆಚಾರಿ, ರಿಯಲ್ ಎಸ್ಟೇಟ್ ಉದ್ಯಮಿ ರವೀಂದ್ರ ಕಾಮಾತ್ ಹಾಗೂ ಪ್ರದೀಪ್ ಕಾರಣ ಎಂಬುದಾಗಿ ದೂರು ನೀಡಿದ್ದರು.
ವೆಂಕಟೇಶ್ ಆಚಾರಿ ಪತ್ನಿ ರಶ್ಮಿಯೇ ನೀಡಿದಂತ ದೂರಿನ ಹಿನ್ನಲೆಯಲ್ಲಿ ಸಾಗರ ಪೇಟೆ ಠಾಣೆಯ ಪೊಲೀಸರು ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಈ ಕುರಿತಂತೆ ಮಾಹಿತಿ ನೀಡಿದಂತ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಅವರು, ಸದಾನಂದ ಅವರ ಹತ್ಯೆ ಪ್ರಕರಣದಲ್ಲಿ ವಿಎ ವೆಂಕಟೇಶ್ ಆಚಾರಿ, ರಿಯಲ್ ಎಸ್ಟೇಟ್ ಉದ್ಯಮಿಗಳಾದಂತ ರವೀಂದ್ರ ಕಾಮತ್ ಹಾಗೂ ಪ್ರದೀಪ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಮಾಹಿತಿ ನೀಡಿದ್ದಾರೆ.
ಅಂದಹಾಗೇ ರಶ್ಮಿ ಅವರು ಪತಿಯ ಮನೆ ತೊರೆದು ಸದಾನಂದ ಅವರ ಮನೆಯಲ್ಲಿ ಕೆಲ ದಿನಗಳಿಂದ ವಾಸವಾಗಿದ್ದರು. ಈ ಕಾರಣದಿಂದ ಆರೋಪಿಗಳು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಭಾರತದ ಜಿ20 ಶೆರ್ಪಾ ಹುದ್ದೆಗೆ ಅಮಿತಾಬ್ ಕಾಂತ್ ರಾಜೀನಾಮೆ | Amitabh Kant resigns
BIG NEWS : ‘KUWS’ ಅಧ್ಯಕ್ಷ ಸ್ಥಾನದಿಂದ ಶಾಸಕ ವಿನಯ್ ಕುಲಕರ್ಣಿಯನ್ನು ತೆಗೆದುಹಾಕುವಂತೆ ಸಿಎಂಗೆ ಆಗ್ರಹ