ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿರುವಂತ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ 62.5 ಕೆವಿ ಜನರೇಟರ್ ಕಳವು ಮಾಡಲಾಗಿತ್ತು. ಈ ಸಂಬಂಧ ದೂರು ದಾಖಲಾದ ಬಳಿಕ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಹಳಾಗಿದ್ದಂತ 62.5 ಕೆವಿ ಜನರೇಟರ್ ಕದ್ದೊಯ್ಯಲಾಗಿದ್ದು. ಈ ಹಿನ್ನಲೆಯಲ್ಲಿ ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್ ಅವರು ಸಾಗರ ನಗರ ಪೇಟೆ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕದ್ದೊಯ್ದಿದ್ದು ಏಕೆ ಗೊತ್ತಾ?
ಬಂಧಿತ ಆರೋಪಿಗಳನ್ನು ಸುರೇಶ್, ಶರಣ್ ಹಾಗೂ ಸುನೀಲ್ ಎಂಬುದಾಗಿ ತಿಳಿದು ಬಂದಿದೆ. ಆರೋಗ್ಯ ಇಲಾಖೆಯ ಎಲೆಕ್ಟ್ರಿಕ್ ಗುತ್ತಿಗೆ ಕೆಲಸವನ್ನು ಸುರೇಶ್ ಮಾಡುತ್ತಿದ್ದರು. ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದಂತ ಸಂದರ್ಭದಲ್ಲಿ ಹಿಂಭಾಗದಲ್ಲಿನ ಹಳೆಯ ಜನರೇಟರ್ ಮೇಲೆ ಕಣ್ಣು ಬಿದ್ದಿದೆ.
ಸುರೇಶ್ ಹಾಗೂ ಶರಣ್ ಸಹೋದರರು ಆಸ್ಪತ್ರೆಯಲ್ಲಿನ ಹೆಲ್ತ್ ಸೂಪರಿಡೆಂಟ್ ಆಗಿದ್ದಂತ ಸುನೀಲ್ ಎಂಬಾತನ ಮೂಲಕ ಡೀಲ್ ಕುದುರಿಸಿದ್ದಾರೆ. ಈ ಡೀಲ್ ಬಳಿಕ ಸುನೀಲ್ ಗೆ ರೂ.30,000 ಹಣವನ್ನು ನೀಡಿ 62.5 ಕೆವಿ ಸಾಮರ್ಥ್ಯದ ಹಳಾಗಿದ್ದಂತ ಜನರೇಟರ್ ಕದ್ದೊಯ್ದಿದ್ದಾರೆ ಎನ್ನಲಾಗುತ್ತಿದೆ.
ಅಂದಹಾಗೇ ಸುರೇಶ್ ಮತ್ತು ಶರಣ್ ಸೌಂಡ್ ಸಿಸ್ಟಂ ಕೂಡ ಹೊಂದಿದ್ದರು. ಈ ಸೌಂಡ್ ಸಿಸ್ಟಂ ಕೆಲಸಕ್ಕೆ ರಿಪೇರಿ ಮಾಡಿದರೇ ಬರಲಿದೆ ಎನ್ನುವ ಕಾರಣದಿಂದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹಿಂಭಾಗದಲ್ಲಿದ್ದಂತ ಹಳಾಗಿದ್ದಂತ ಜನರೇಟರ್ ಹೊತ್ತೊಯ್ದಿದ್ದಾರೆ ಎಂಬುದಾಗಿ ಪೊಲೀಸ್ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.
ಪೊಲೀಸ್ ಕಂಪ್ಲೇಂಡ್ ಬಳಿಕ ಆರೋಗ್ಯ ಇಲಾಖೆ ನೌಕರನೇ ಕದ್ದವರ ಮಾಹಿತಿ ನೀಡಲು ಹೋಗಿ ಟ್ರ್ಯಾಪ್
ಸುರೇಶ್ ಹಾಗೂ ಶರಣ್ ಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಚೇರಿ ಅಧೀಕ್ಷಕರಾಗಿರುವಂತ ಸುನೀಲ್ ಪರಿಚಯವಾಗಿದೆ. ಸುನೀಲ್ ಮೂಲಕ ಆಸ್ಪತ್ರೆಯ ಹಿಂಭಾಗದಲ್ಲಿದ್ದಂತ ಹಳಾಗಿದ್ದಂತ ಜನರೇಟರ್ ಮಾಹಿತಿ ಕಲೆ ಹಾಕಿ, ಹೊತ್ತೊಯ್ಯುವ ಪ್ಲಾನ್ ಅನ್ನು ಆರೋಪಿಗಳು ಮಾಡಿದ್ದಾರೆ. ಸುಮಾರು 30,000 ಹಣ ಪಡೆದಂತ ಆರೋಗ್ಯ ಇಲಾಖೆಯ ನೌಕರನೇ ಸುರೇಶ್, ಶರಣ್ ಗೆ 62.5 ಕೆವಿ ಸಾಮರ್ಥ್ಯದ ಹಾಳಾಗಿದ್ದ ಜನರೇಟರ್ ಕೊಂಡೊಯ್ಯೋದಕ್ಕೆ ಸಾಥ್ ನೀಡಿದ್ದಾರೆ.
ಈ ಬಳಿಕ ಜನರೇಟರ್ ಕಳ್ಳತನವಾಗಿರುವಂತ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿ, ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್ ಅವರು ಸಾಗರ ಪೇಟೆ ಠಾಣೆಗೆ ಹಳೆಯ ಹಾಳಾಗಿದ್ದಂತ ಜನರೇಟರ್ ಕದ್ದೊಯ್ದವರ ವಿರುದ್ಧ ಕಾನೂನು ಕ್ರಮ, ಪತ್ತೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಅನಾಮಿಕರ ಮೇಲೆ ಎಫ್ಐಆರ್ ಕೂಡ ದಾಖಲಾಗಿತ್ತು.
ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಜನರೇಟರ್ ಕದ್ದೊಯ್ದವರ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತ, ತನ್ನ ಮೇಲೆ ಕಾನೂನು ಕ್ರಮವಾಗಲಿದೆ ಎಂಬುದನ್ನು ಅರಿದಂತ ಆರೋಗ್ಯ ಇಲಾಖೆಯ ನೌಕರ ಸುನೀಲ್, ಸಾಗರ ಪೇಟೆ ಠಾಣೆಗೆ ತೆರಳಿ ಸುರೇಶ್ ಹಾಗೂ ಶರಣ್ ವಿರುದ್ಧ ದೂರು ಕೊಡಲು ಮುಂದಾಗಿದ್ದಾರೆ. ಆ ವೇಳೆಯಲ್ಲಿ ಪೊಲೀಸರು ಸುನೀಲ್ ವಿಚಾರಿಸಿದಾಗಿ ತಾನು ಪಾಲುದಾರರಾಗಿದ್ದ ಎಂಬುದು ಬಯಲಾಗಿದೆ. ಹೀಗಾಗಿ ಸಾಗರ ಪೇಟೆ ಠಾಣೆಯ ಪೊಲೀಸರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನರೇಟರ್ ಕದ್ದೊಯ್ದ ಪ್ರಕರಣ ಸಂಬಂಧ ಸಾಗರದ ಸಹೋದರರಾದಂತ ಸುರೇಶ್ ಮತ್ತು ಶರಣ್, ಆರೋಗ್ಯ ಇಲಾಖೆಯ ನೌಕರ ಸುನೀಲ್ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು