ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಅರಿಶಿನ ಅದೆಷ್ಟೋ ರೋಗಗಳಿಗೆ ಔಷಧಿ. ಇದರಲ್ಲಿ ಅನೇಕ ವಿಟಮಿನ್ ಹಾಗು ಪೋಷಕಾಂಶಗಳಿವೆ. ಅರಿಶಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನಿಜ. ಇನ್ನು ಕೊರೊನಾ ಸಮಯದಲ್ಲಿ ಅರಿಶಿನ ಸೇವನೆ ಆರೋಗ್ಯಕ್ಕೆ ರಕ್ಷಾಕವಚವಾಗಿದೆ. ಆದರೆ ಇದೇ ಅರಿಶಿನ ಕೆಲ ರೋಗ ಲಕ್ಷಣಗಳಿಗೆ ಒಗ್ಗುವುದಿಲ್ಲ. ಯಾರೆಲ್ಲಾ ಅರಿಶಿನ ಸೇವನೆ ಮಾಡಬಾರದು ಎಂದು ಮುಂದೆ ತಿಳಿದುಕೊಳ್ಳೋಣ.
ಕಾಮಾಲೆ: ಕಾಮಾಲೆ ಇರುವವರು ಅರಿಶಿನವನ್ನು ಸೇವಿಸಬಾರದು. ಈ ರೋಗದಿಂದ ಬಳಲುತ್ತಿರುವವರು ಅರಿಶಿನ ಇಲ್ಲದ ಊಟ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಈ ಕಾಯಿಲೆಯಿಂದ ಸುಧಾರಿಸಿಕೊಂಡ ನಂತರವೂ ಅರಿಶನ ಸೇವನೆಯನ್ನು ವೈದ್ಯರ ಸಲಹೆ ಮೇರೆಗೆ ಸೇವಿಸಿ.
ರಕ್ತಸ್ರಾವ: ಯಾವುದೋ ಕಾರಣದಿಂದ ಮೂಗಿನಿಂದ ಅಥವಾ ದೇಹದ ಇತರ ಭಾಗದಿಂದ ರಕ್ತಸ್ರಾವ ಆಗುತ್ತಿದ್ದರೆ ಇಂತವರು ಆದಷ್ಟು ಅರಿಶಿನ ಸೇವನೆಯನ್ನು ಕಡಿಮೆ ಮಾಡಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯವು ದೇಹಕ್ಕೆ ಹಾನಿಯುಂಟು ಮಾಡಬಹುದು. ಹಾಗು ಅರಿಶಿನವು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ಮಧುಮೇಹ: ಮಧುಮೇಹ ಇರುವವರು ಅರಿಶಿನ ಸೇವನೆಯನ್ನು ಸೀಮಿತಗೊಳಿಸಬೇಕು. ಕಾರಣ ಏನೆಂದರೆ ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು ಔಷಧಿಗಳನ್ನು ನೀಡಲಾಗುತ್ತದೆ. ಇಂತ ಸಂದರ್ಭದಲ್ಲಿ ಅರಿಶಿನದ ಅತಿಯಾದ ಸೇವನೆ ದೇಹದಲ್ಲಿ ರಕ್ತದ ಪ್ರಮಾಣವನು ಕಡಿಮೆ ಮಾಡಬಹುದು. ಹಾಗಾಗಿ ಮಧುಮೇಹಿಗಳು ಅರಿಶಿನವನ್ನು ಹಿತಮಿತವಾಗಿ ಸೇವಿಸಿ.
ಅಪೆಂಡಿಸೈಟಿಸ್: ಅಪೆಂಡಿಸೈಟಿಸ್ ಇರುವವರು ಅಥವಾ ಇದರ ರೋಗ ಲಕ್ಷಣ ಇರುವವರು ಅರಿಶಿನ ಸೇವನೆ ಒಳ್ಳೆಯದಲ್ಲ. ಅರಿಶಿನ ಹೆಚ್ಚಾಗಿ ಸೇವಿಸುವುದರಿಂದಲೇ ಈ ಸಮಸ್ಯೆ ಉಂಟಾಗುತ್ತದೆ ಎಂದು ವೈದ್ಯರು ಅಭಿಪ್ರಾಯ ಸೂಚಿಸಿದ್ದಾರೆ. ಅಪೆಂಡಿಸೈಟಿಸ್ ರೋಗ ಇದ್ದವರು ಹಾಗು ಲಕ್ಷಣ ಇದ್ದವರು ವೈದ್ಯರ ಸಲಹೆ ಮೇರೆಗೆ ಅರಿಶಿನ ಸೇವಿಸಿದರೆ ಒಳ್ಳೆಯದು.
ಅರಿಶಿನ ಸೇವನೆ ಅನೇಕ ರೋಗಗಳಿಗೆ ರಾಮಬಾಣವಾದರೂ, ಅರಿಶಿನ ಎಲ್ಲರಿಗೂ ಒಂದೇ ರೀತಿಯ ಪರಿಣಾಮ ನೀಡದು. ಹೀಗೆ ಈ ಎಲ್ಲಾ ರೋಗದ ಗುಣಲಕ್ಷಣಗಳಿದ್ದರೆ ಅರಿಶಿನ ಸೇವನೆಯನ್ನು ಮಿತವಾಗಿಸಿಕೊಳ್ಳಿ.