ಆನಂದಪುರ: ಶಾಸಕ ಗೋಪಾಲಕೃಷ್ಣ ಬೇಳೂರು ಅವರ ವಿರುದ್ಧ ಟೀಕೆ ಮಾಡುತ್ತಿರುವ ರತ್ನಾಕರ ಹೊನಗೋಡು ಅವರ ರಾಜಕೀಯ ಅಸ್ತಿತ್ವದ ಬಗ್ಗೆ ಕಾಂಗ್ರೆಸ್ ಮುಖಂಡ ಚೇತನ್ ರಾಜ್ ಕಣ್ಣೂರು ತೀವ್ರವಾಗಿ ವ್ಯಂಗ್ಯವಾಡಿದ್ದಾರೆ.
ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರತ್ನಾಕರ ಅವರ ಹಳೆಯ ರಾಜಕೀಯ ಹಾದಿಯನ್ನು ನೆನಪಿಸುವ ಮೂಲಕ ತಿರುಗೇಟು ನೀಡಿದರು. ಈ ಹಿಂದೆ ಗೋಪಾಲಕೃಷ್ಣ ಬೇಳೂರು ಅವರ ಬೆಂಬಲ ಇಲ್ಲದೇ ಇದ್ದರೇ ಅವರು ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿಯ ಸದಸ್ಯರೇ ಆಗುತ್ತಿರಲಿಲ್ಲ ಎಂಬುದಾಗಿ ನೆನಪಿಸಿದರು.
ಅಸ್ತಿತ್ವಕ್ಕಾಗಿ ಮಾಧ್ಯಮಗಳ ಮುಂದೆ ಅಬ್ಬರ
ರತ್ನಾಕರ ಹೊನಗೋಡು ಈ ಹಿಂದೆ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ನೀಡಿದ ರಾಜಕೀಯ ಭಿಕ್ಷೆಯಿಂದ ಎಂಬುದು ಅವರಿಗೆ ಮೊದಲು ನೆನಪಿರಲಿ ಎಂದು ಚೇತರ್ ರಾಜ್ ಕಣ್ಣೂರು ಕುಟುಕಿದರು. ಶಾಸಕರ ಬೆಂಬಲದಿಂದ ಅಧಿಕಾರ ಪಡೆದವರು ಇಂದು ಅವರನ್ನೇ ಟೀಕಿಸುತ್ತಿರುವುದು ಕೃತಘ್ನತೆಯಿಲ್ಲದ ಪರಮಾವಧಿ ಎಂದು ಅವರು ಆಕ್ರೋಶ ಹೊರಹಾಕಿದರು.
ಬಿಜೆಪಿಯಲ್ಲಿ ಕನಿಷ್ಠ ಬೆಲೆಯೂ ಇಲ್ಲ
ರತ್ನಾಕರ ಹೊನಗೋಡು ಅವರು ಪ್ರಸ್ತುತ ಬಿಜೆಪಿಯಲ್ಲಿದ್ದರೂ ಅವರ ಸ್ಥಿತಿ ಶೋಚನೀಯವಾಗಿದೆ ಎಂದ ಅವರು, ಇಂದು ಸ್ವಂತ ಪಕ್ಷವಾದ ಬಿಜೆಪಿಯಲ್ಲಿಯೇ ಅವರಿಗೆ ಕನಿಷ್ಠ ಬೆಲೆಯೂ ಸಿಗುತ್ತಿಲ್ಲ. ಅಲ್ಲಿ ಯಾರೂ ಅವರನ್ನು ಕರೆಯುತ್ತಿಲ್ಲ ಅಥವಾ ಕೇಳುತ್ತಿಲ್ಲ. ಹೀಗಾಗಿ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ಜನರ ಗಮನ ಸೆಳೆಯಲು ಅವರು ಮಾಧ್ಯಮಗಳ ಮುಂದೆ ಬಂದು ಅಬ್ಬರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸ್ವಯಂ ಘೋಷಿತ ನಾಯಕನ ಭ್ರಮೆ
ಕೇವಲ ಪತ್ರಿಕಾಗೋಷ್ಠಿಗಳನ್ನು ಮಾಡುತ್ತಾ, ಶಾಸಕರನ್ನು ಬೈಯುವ ಮೂಲಕ ದೊಡ್ಡ ನಾಯಕನಾಗುತ್ತೇನೆ ಎಂಬ ಭ್ರಮೆಯಲ್ಲಿ ರತ್ನಾಕರ ಇದ್ದಾರೆ. ಅದು ಅವರ ಭ್ರಮೆಯಾಗಿದೆ. ಅವರ ಅತಿರೇಕದ ನಡವಳಿಕೆಯನ್ನು ತೋರಿಸುತ್ತದೆ ಎಂಬುದಾಗಿ ಕಿಡಿಕಾರಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಸೋಮಶೇಖರ್ ಲಾವಿಗೆರೆ, ರಮಾನಂದ ಸಾಗರ್, ಕಲೀಮುಲ್ಲಾ, ಉಮೇಶ್ ಎನ್., ಬಾಬುಲ್ ಸಾಬ್ರು, ರಮತುಲ್ಲಾ, ಗಜೇಂದ್ರ, ಲಿಂಗರಾಜ್, ಅಮೀರ್, ಅರುಣ್ ಗೌಡ್ರು, ವಿಜಯ್ ಗೌಡ್ರು, ಬಸವರಾಜ್, ಎಂಎಲ್ಎಶ್ವರ, ಸಿರಿಜಾನ್, ಮೋಹನ್, ಆಸಿಫ್, ಲೋಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರತ್ನಾಕರ ಹೊನಗೋಡು ‘ತರ್ಡ್ ಕ್ಲಾಸ್ ರಾಜಕಾರಣ’ ಮಾಡಬಾರದು: ಸೋಮಶೇಖರ್ ಲಾವಿಗೆರೆ ವಾಗ್ದಾಳಿ
ರಾಜ್ಯದ ‘ಸರ್ಕಾರಿ PU ಕಾಲೇಜು ವಿದ್ಯಾರ್ಥಿ’ಗಳಿಗೆ ಸಿಹಿಸುದ್ದಿ: ಮುಂದಿನ ವರ್ಷದಿಂದ ಉಚಿತವಾಗಿ ‘ಪಠ್ಯಪುಸ್ತಕ’ ವಿತರಣೆ








