ನಾವೀಗ ತಿಳಿಸಿಕೊಡುವ ಆಹಾರಗಳು ಅಥವಾ ಗಿಡಮೂಲಿಕೆಗಳು ಹೆಣ್ಣುಮಕ್ಕಳಲ್ಲಿ ಫಲವತ್ತತೆನ್ನು ಹೆಚ್ಚಿಸುತ್ತದೆ ಹಾಗು ಬೇಗನೇ ಗರ್ಭಧರಿಸಲು ನೆರವಾಗುತ್ತವೆ. ಇವುಗಳು ಗರ್ಭಿಣಿಯಾಗಲು ದೇಹಕ್ಕೆ ಬೇಕಾದ ಫ್ಯಾಟಿ ಆಸಿಡ್ ಪೋಷಕಾಂಶಗಳನ್ನು ಒದಗಿಸುತ್ತವೆ.
ಅಶ್ವಗಂಧ: ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ. ಇನ್ನು ಮಹಿಳೆಯರಿಗೆ ಹಾರ್ಮೋನ್ ಸಮಸ್ಯೆ ಇದ್ದು ಗರ್ಭ ಧರಿಸಲು ತೊಂದರೆಯಾಗುತ್ತಿದ್ದರೆ ಅರ್ಧಕಪ್ ಹಾಲಿನೊಂದಿಗೆ ಚಿಟಿಕೆ ಅಶ್ವಗಂಧವನ್ನು ಬೆರಸಿ ಸೇವಿಸಿದರೆ ಹಾರ್ಮೋನ್ ಸಮತೋಲನಗೊಂಡು ಸುಲಭವಾಗಿ ಗರ್ಭಧರಿಸಲು ನೆರವಾಗುತ್ತದೆ. ಅತಿಯಾದ ಅಶ್ವಗಂಧ ಸೇವನೆ ದೇಹಕ್ಕೆ ಹಾನಿಯುಂಟು ಮಾಡಬಹುದು ಎಚ್ಚರ.
ಲೈಕೋರೈಸ್ ರೂಟ್: ಇದೊಂದು ಗಿಡ ಮೂಲಿಕೆಯಾಗಿದೆ. ಇದು ನಿಮ್ಮ ಎಂಡೋಕ್ರೈನ್ ಗ್ರಂಥಿಗಳನ್ನು ವೃದ್ಧಿಸುವ ಮೂಲಕ ಹಾರ್ಮೋನ್‌ಗಳನ್ನು ಸರಿದೂಗಿಸುತ್ತದೆ. ಇನ್ನು ಇದು ಗರ್ಭಧರಿಸಲು ಅಡ್ಡಿಯಾದ ವಿಷಕಾರಿ ಅಂಶಗಳನ್ನು ದೇಹದಿಂದ ಹೊರೆಗೆ ಹಾಕುವಲ್ಲಿ ಸಹಕಾರಿಯಾಗಿದೆ.
ಚಕ್ಕೆ: ಮಧುಮೇಹ ಇದ್ದ ಹೆಣ್ಣು ಮಕ್ಕಳಿಗೆ ಅಷ್ಟು ಸುಲಭವಾಗಿ ಗರ್ಭಧರಿಸಲು ಆಗದು. ಹಾಗಾಗಿ ಒಂದು ವೇಳೆ ನಿಮಗೆ ಮಧುಮೇಹವಿದ್ದು ಗರ್ಭಧರಿಸಲು ಕಷ್ಟವಾಗುತ್ತಿದ್ದರೆ ನಿಯಮಿತವಾಗಿ ಚಕ್ಕೆಯನ್ನು ಸೇವಿಸಿ. ಇದು ದೇಹದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ. ಅಲ್ಲದೇ ಮುಟ್ಟಿನಲ್ಲಿ ಆಗುವ ಅಧಿಕ ರಕ್ತಸ್ರಾವ ಸಮಸ್ಯೆಗೆ ನಿವಾರಣೆ ನೀಡುತ್ತದೆ.
ಹರಳೆಣ್ಣೆ: ಹರಳೆಣ್ಣೆಯಿಂದ ಹೊಟ್ಟೆ ಸುತ್ತಮುತ್ತ ಪ್ರದೇಶಕ್ಕೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಹೀಗೆ ಮಾಡಿದರೆ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಅಲ್ಲದೇ ಇದು ಅಂಡೋತ್ಪತ್ತಿತನ್ನು ಹೆಚ್ಚಿಸುತ್ತದೆ. ಹೀಗೆ ಮಸಾಜ್ ಮಾಡುವುದರಿಂದ ಗರ್ಭಾಶಯಕ್ಕೆ ಆಮ್ಲಜನಕಯುಕ್ತ ರಕ್ತವನ್ನು ಪೂರೈಸಲು ನೆರವಾಗುತ್ತದೆ. ಇದರಿಂದ ಫಲವತ್ತತೆಗೆ ಇನ್ನಷ್ಟು ಸಹಕಾರಿಯಾಗುತ್ತದೆ.
ಕುಂಬಳಕಾಯಿ ಬೀಜ: ಇದರಲ್ಲಿ ಸತುವಿನ ಅಂಶ ಅಪಾರ ಪ್ರಮಾಣದಲ್ಲಿದೆ. ಇದು ಟೆಸ್ಟೋಸಟೆರಾನ್ ಮಟ್ಟವನ್ನು ವೃದ್ಧಿಸುತ್ತದೆ. ಇದು ಸಂತಾನೋತ್ಪತ್ತಿಯನ್ನು ವೃದ್ಧಿಸುತ್ತದೆ. ಇದರ ಸೇವನೆಯಿಂದ ದೇಹದ ಎಲ್ಲಾ ಅಂಗಗಳಿಗೆ ರಕ್ತ ಸಂಚಾರ ಸರಿಯಾಗಿ ಆಗುತ್ತದೆ.