ಬೆಂಗಳೂರು: ಅದೃಷ್ಟದೇವತೆ ಬಟ್ಟೆ ಬಿಚ್ಚಿಸಿ ರೂಂನಲ್ಲಿ ಮಲಗಸ್ತೀನಿ ಎಂದವರು ದೇವರಿಗೆ ವಂದಿಸ್ತಾರೆ ಅಂತ ನಟ ದರ್ಶನ್ ವಿರುದ್ದ ಪ್ರಥಮ್ ಮತ್ತೆ ಕಿಡಿಕಾರಿದ ಘಟನೆ ನಡೆದಿದೆ.
ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಅವರು ಈ ಬಗ್ಗೆ ಹೇಳಿದರು. ದರ್ಶನ್ ಕಾಮಾಕ್ಯ ದೇವಸ್ಥಾನಕ್ಕೆ ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಈ ಮೊದಲು ಅದೃಷ್ಟ ಲಕ್ಷ್ಮಿ ಬಂದರೆ ಬಟ್ಟೆ ಬಿಚ್ಚಿಸಿ ರೂಂನಲ್ಲಿ ಕೂಡಿ ಹಾಕ್ತಿನಿ ಎಂದವರು ಈಗ ಹೋಗಿ ಕಾಮಾಕ್ಯ ದೇವರಿಗೆ ವಂದಿಸುತ್ತಿದ್ದಾರೆ ಅಂತ ಪ್ರಥಮ್ ಹೇಳಿರುವುದು ಈಗ ಮತ್ತೆ ವಿವಾದಕ್ಕೆ ಕಾರಣವಾಗಿದೆ.
‘ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅತಿ ಅಪರೂಪ, ಅಂತ ಸಮಯದಲ್ಲಿ ಬಾಗಿಲು ತೆಗೆದು, ಆಕೆಯನ್ನು ಹಿಡಿದು ರೂಮ್‌ಗೆ ಕರೆದುಕೊಂಡು ಬಟ್ಟೆ ಬಿಚ್ಚಿ ಕೂರಿಸಿಕೊಂಡುಬಿಡಬೇಕು’ ಎಂದು ದರ್ಶನ್ ಹಲವು ದಿನಗಳ ಹಿಂದೆ ಹೇಳಿದ್ದರು. ಈಗ ಮತ್ತೆ ಆ ಮಾತು ಚಾಲ್ತಿಗೆ ಬಂದಿದೆ.