ದಾವಣಗೆರೆ: ದೇಶದ್ರೋಹಿ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬುದಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಂಸದ ಡಿ.ಕೆ ಸುರೇಶ್ ಗುಂಡಿಕ್ಕಿ ಕೊಲ್ಲಬೇಕು ಎಂಬುದಾಗಿ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ನಡೆದಂತ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ದೇಶದ್ರೋಹ ಮಾಡುವವರು, ದೇಶದ್ರೋಹದ ಹೇಳಿಕೆ ನೀಡೋರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಯಾಗಲಿ ಎಂಬುದಾಗಿ ಹೇಳಿದ್ದರು.
ಕಾಂಗ್ರೆಸ್ ಪಕ್ಷದಲ್ಲಿರುವಂತ ವಿನಯ್ ಕುಲಕರ್ಣಿ, ಡಿ.ಕೆ ಸುರೇಶ್ ಇಬ್ಬರೂ ದೇಶದ್ರೋಹಿಗಳು. ತಾಕತ್ತು ಇದ್ದರೇ ದೇಶದ್ರೋಹ ಹೇಳಿಕೆ ನೀಡಿದ ಈ ಇಬ್ಬರನ್ನು ಪಕ್ಷದಿಂದ ಹೊರಹಾಕಿ ಎಂಬುದಾಗಿ ಆಗ್ರಹಿಸಿದರು.
ಇನ್ನೂ ಈ ರೀತಿ ದೇಶದ್ರೋಹದ ಹೇಳಿಕೆ ನೀಡುವ, ದೇಶ ದ್ರೋಹ ಕೆಲಸ ಮಾಡುವವರನ್ನು ಗುಂಡಿಕ್ಕಿ ಕೊಲ್ಲುವಂತ ಕಾನೂನು ದೇಶದಲ್ಲಿ ಜಾರಿಯಾಗಬೇಕು. ಈ ಮೂಲಕ ಇಂತಹ ಹೇಳಿಕೆಗಳಿಗೆ ಖಡಿವಾಣ ಬೀಳಬೇಕು ಎಂದರು.